ಮಾಸಪೂರ್ತಿ ಮುಂಬಾಗಿಲು ಹಸಿರು ತೋರಣಗಳ ವೈಭವದಿಂದ ಕಂಗೊಳಿಸುವ ಏಕೈಕ ಮಾಸವೇ ಶ್ರಾವಣ. ಕಣಕದ ಹೊದಿಕೆಯೊಳಗಡೆ ಸಿಹಿ ಹೂರಣ ತುಂಬಿಕೊಂಡ ಹೋಳಿಗೆಯಂತೆ, ವಿವಿಧ ವೈಭವದ ಹಬ್ಬಗಳ ಹೂರಣವನ್ನು ತುಂಬಿಕೊಂಡ ಮಾಸವಿದು. ನವವಿವಾಹಿತರಿಗಂತೂ ಬಿಡುವಿಲ್ಲದ ಸಂಭ್ರಮದ ಆಚರಣೆಗಳು. ನಮ್ಮ ಸನಾತನ ಧರ್ಮದ ಸೊಗಡನ್ನು ಬಿಂಬಿಸುತ್ತವೆ ಈ ವಿಧಿವಿಧಾನಗಳು.
ಆ. 5ರಿಂದ ಶ್ರಾವಣ ಆರಂಭವಾಗಲಿದ್ದು, ಈ ಸಲದ ಆಚರಣೆಗಳ ವಿವರ ಇಲ್ಲಿದೆ. ಮಾಸ ಮಹಾಲಕ್ಷ್ಮಿ ಪೂಜೆ, ಆ. 9, 16, 23, 30: ಮಾಸದ 4 ಶುಕ್ರವಾರ, ಶನಿವಾರ ಮಾಡುವ ಪೂಜೆ. ಕಲಶದಲ್ಲಿ, ಮಣ್ಣಿನ ಗಡಿಗೆಯಲ್ಲಿ ಲಕ್ಷ್ಮಿಪ್ರತಿಮೆ ಮಾಸಪೂರ್ತಿ ಸ್ಥಾಪಿಸಿ, ಕದಲಿಸದಂತೆ ಪ್ರತಿವಾರ ಪೂಜೆ, ನೈವೇದ್ಯ, ಹೂರಣದ ಆರತಿ ಮಾಡಿ ಮುತೆôದೆಯರಿಗೆ ಬಾಗಿಣ ಕೊಡಲಾಗುತ್ತದೆ. ‘ಸಂಪತ್ ಶನಿವಾರ ಪೂಜೆ’ಯಂದು ಲಕ್ಷ್ಮಿಗೆ ಜೋಳದ ನುಚ್ಚು, ಹಿಟ್ಟಿನ ಕಡಬು, ಕಟ್ಟಂಬಲಿ ನಿವೇದಿಸುತ್ತಾರೆ. ಆ.16, 30ರಂದು ಅನೇಕ ಸಂಪ್ರದಾಯದವರಿಗೆ ಏಕಾದಶಿ ಇರುವುದರಿಂದ, ಅವತ್ತು ಲಕ್ಷ್ಮಿಗೆ ಪೂಜೆ ಮಾತ್ರ. ಮರುದಿನವೇ ಅಡುಗೆ ನೈವೇದ್ಯ.
ನಾಗಚೌತಿ-ನಾಗಪಂಚಮಿ, ಆ. 8, 9: ಹೆಣ್ಣುಮಕ್ಕಳಿಂದ ಚೌತಿಯಂದು ಹೊರಗಿನ ಕಲ್ಲುನಾಗನಿಗೆ ಪೂಜೆ. ಪಂಚಮಿಗೆ ಮನೆಯೊಳಗೆ ನಾಗನ ಪೂಜೆ. ಹುರಿಗಡಲೆ, ಹಸಿಹುಣಸೆ, ಉಪ್ಪು, ಅರಳಿಟ್ಟು, ಬೆಲ್ಲ ಇಟ್ಟು ಪೂಜಿಸುತ್ತಾರೆ. ಅಣ್ಣತಮ್ಮಂದಿರ ಆಪತ್ತು ಕಳೆದು ದೀರ್ಘಾಯುಷ್ಯ ಕೊಡಲೆಂದು ಪ್ರಾರ್ಥಿಸುತ್ತಾರೆ.
ವರಮಹಾಲಕ್ಷ್ಮಿ, ಆ. 16: ಶ್ರಾವಣದ 2ನೇ ಶುಕ್ರವಾರ ಆಚರಿಸುವ ಹಬ್ಬ. ಲಕ್ಷ್ಮಿದೇವಿಯ ಷೋಡಶೋಪಚಾರ ಪೂಜೆಯನ್ನು ವಿಧಾನಪೂರ್ವಕ ನೆರವೇರಿಸಿ ಮುತೆôದೆಯರಿಗೆ ಬಾಗಿಣ ಕೊಟ್ಟು, ಭಕ್ಷ ್ಯೋಜ್ಯಗಳನ್ನು ನಿವೇದಿಸುತ್ತಾರೆ. ಆ.16ರಂದು ಅನೇಕ ಸಂಪ್ರದಾಯದವರಿಗೆ ಏಕಾದಶಿ ಇರುವುದರಿಂದ ಅಂದು ಪೂಜೆ ಮಾತ್ರ. ನೈವೇದ್ಯ, ಆರತಿ, ಉಡಿ ತುಂಬಿ ಬಾಗಿಣ ಎಲ್ಲವೂ ಮರುದಿನ.
ರಕ್ಷಾಬಂಧನ, ಆ. 19: ಸೋದರ-ಸೋದರಿಯರ ಬಾಂಧವ್ಯ ವನ್ನು ಬಿಂಬಿಸುವ ಹಬ್ಬ. ದ್ರೌಪದಿಯ ಮಾನವನ್ನು ಕಾಯ್ದ ಕೃಷ್ಣನಂತೆ ಅಕ್ಕ-ತಂಗಿಯರ ಮಾನ, ಗೌರವವನ್ನು ಕಾಯುವ ಜವಾಬ್ದಾರಿಯಲ್ಲಿ ಸೋದರರನ್ನು ಬಂಧಿಸುತ್ತದೆ ರಕ್ಷಾಬಂಧನ.
ಉಪಾಕರ್ಮ, ಆ. 19: ಶ್ರಾವಣದಲ್ಲಿ ಪುರುಷರಿಗಾಗಿ ಬರುವ ವಿಶೇಷ ಆಚರಣೆ ಯಜ್ಞೋಪವೀತ ಧಾರಣೆ. ಅನೇಕ ಪಂಥದವರು ಇದನ್ನು ಆಚರಿಸುತ್ತಾರೆ.
ಶ್ರಾವಣ ಸೋಮವಾರ, ಆ. 5, 12, 19, 26, ಸೆ. 2: ಮಾಸದ 4-5 ಸೋಮವಾರಗಳಂದು ರುದ್ರದೇವರ ಆರಾಧನೆ. ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ, ರುದ್ರಪಾರಾಯಣ ಇತ್ಯಾದಿ ನಡೆಯುತ್ತವೆ. ಅಂದು ಅನೇಕರು ಉಪವಾಸ ಮಾಡುತ್ತಾರೆ. ಬಿಲ್ವಪತ್ರೆಯ ಪೂಜೆ ವಿಶೇಷ.
ಮಂಗಳಗೌರಿ, ಆ. 6, 13, 20, 27: ನವವಿವಾಹಿತ ಹೆಣ್ಣುಮಕ್ಕಳು ಈ ಮಾಸದ 4-5 ಮಂಗಳವಾರಗಳಂದು ಸುಖದಾಂಪತ್ಯಕ್ಕಾಗಿ ಶಿವ-ಪಾರ್ವತಿ ಪೂಜೆ ಮಾಡುತ್ತಾರೆ. ಇದನ್ನು ವಿವಾಹದ ನಂತರ ಐದು ವರ್ಷ ಆಚರಿಸಲಾಗುತ್ತದೆ. ಗೌರಿಗೆ ಹೋಳಿಗೆ ನೈವೇದ್ಯ, ಹೂರಣದ ಆರತಿ ಮಾಡುತ್ತಾರೆ.
ಬುಧ-ಬೃಹಸ್ಪತಿ, ಆ. 7-8, 14-15, 21-22, 28-29: ವಿದ್ಯಾಪ್ರಾಪ್ತಿಗಾಗಿ ಶ್ರಾವಣದ ಪ್ರತಿ ಬುಧವಾರ, ಗುರುವಾರ ನವಗ್ರಹಗಳಲ್ಲಿ ಇಬ್ಬರಾದ ಬುಧ ಹಾಗೂ ಬೃಹಸ್ಪತಿ (ಗುರು) ಪೂಜೆ. ಜೋಳದ ರೊಟ್ಟಿ, ಅರಳಿಟ್ಟಿನ ನೈವೇದ್ಯ ವಿಶೇಷ. ವಟುಗಳಿಗೆ ಪಾದಪೂಜೆ, ಭೋಜನ.
ರಾಯರ ಆರಾಧನೆ, ಆ. 21: ಬೇಡಿ ಬಂದ ಭಕ್ತರ ಕಷ್ಟಗಳನ್ನು ಕಳೆಯುತ್ತ ಎಲ್ಲರನ್ನೂ ಧರ್ಮಮಾರ್ಗದಲ್ಲಿ ನಡೆಸುತ್ತಿರುವ ಕಲಿಯುಗದ ಕಾಮಧೇನು ಕಲ್ಪವೃಕ್ಷರೆನಿಸಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪುಣ್ಯಾರಾಧನೆ.
ಶ್ರೀಕೃಷ್ಣ ಜನ್ಮಾಷ್ಟಮಿ, ಆ. 26: ಜಗದೊಡೆಯನಾದ ಭಗವಂತ ಭೂಭಾರ ಹರಣಕ್ಕಾಗಿ ಭುವಿಯಲ್ಲಿ ಕೃಷ್ಣನಾಗಿ ಅವತರಿಸಿದ ದಿನ. ಸಮಸ್ತ ಹಿಂದೂಸಮಾಜ ಶ್ರದ್ಧಾ, ಭಕ್ತಿಯಿಂದ ಆಚರಿಸುವ ಪರ್ವ. ಎಲ್ಲೆಡೆ ರಾತ್ರಿ ಕೃಷ್ಣನ ಜನ್ಮ ಸಮಯದವರೆಗೂ ಉಪವಾಸವಿದ್ದು, ಜಾಗರಣೆ, ಭಜನೆ, ನೃತ್ಯ, ಉಪನ್ಯಾಸಗಳನ್ನು ನಡೆಸುತ್ತಾರೆ.
ನಿವೃತ್ತಿ ಪಡೆಯಲಿರುವ ಗೋಲ್​ಕೀಪರ್​ ಪಿ.ಆರ್​ ಶ್ರೀಜೇಶ್​ ಭಾವುಕ; ಹಾಕಿ ಸ್ಟಿಕ್​ ಮೇಲೆ ಪತ್ನಿ ಹೆಸರು ಅರಳಿಸಿದ ದಿಗ್ಗಜ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
