ದಾವಣಗೆರೆ:ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನವರು, ಅವರ ಮನೆ ಅಲ್ಲಿದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿಗೆಂದೇ ಅಧಿಕೃತ ನಿವಾಸವೇ ಇದೆ. ಆದರೆ ಕರ್ನಾಟಕದಲ್ಲೂ ನರೇಂದ್ರ ಮೋದಿಯ ಮನೆ ಇದೆ ಎಂದರೆ ಹಲವರು ಹುಬ್ಬೇರಿಸುವುದು ಸಹಜ.
ಹೌದು.. ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನರೇಂದ್ರ ಮೋದಿ ನಿಲಯ ಇರುವುದಂತೂ ನಿಜ. ಆದರೆ ಇದು ನರೇಂದ್ರ ಮೋದಿ ಅವರ ಮನೆಯಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯೊಬ್ಬರು ಕಟ್ಟಿಸಿದ ನೂತನ ಮನೆ. ಮೋದಿ ಮೇಲಿನ ಅಭಿಮಾನದಿಂದ ಇವರು ತಮ್ಮ ಹೊಸ ಮನೆಗೆ ‘ಶ್ರೀ ನರೇಂದ್ರ ಮೋದಿ ನಿಲಯ’ ಎಂದೇ ಹೆಸರಿಟ್ಟಿದ್ದಾರೆ.
ಚನ್ನಗಿರಿಯ ಕಾಂತಾಮಣಿ ಗೌ. ಹಾಲೇಶ್ ಮತ್ತು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸಿಡ್ನಿ ನಿವಾಸಿ ಭವನೇಶ್ವರಿ ಮತ್ತು ಶಿವಾನಂದ ಗೌಡ ಕರಿಗೌಡರ್ ದಂಪತಿ ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದು, ಅದಕ್ಕೆ ‘ಶ್ರೀ ನರೇಂದ್ರ ಮೋದಿ ನಿಲಯ’ ಎಂಬ ಹೆಸರನ್ನು ಇಟ್ಟಿದ್ದಾರೆ. ಮೇ 3ರಂದು ಈ ಇದರ ಗೃಹಪ್ರವೇಶ ನಡೆಯಲಿದ್ದು, ಅದರ ಕರೆಯೋಲೆ ಎಲ್ಲೆಡೆ ಹರಿದಾಡುತ್ತಿದೆ.




ರಾಜಿ ಮಾಡಿಸಿದ್ದರೂ ಆತ್ಮಹತ್ಯೆ; ಪತಿಯ ಮನೆಯಲ್ಲಿ ಪತ್ನಿಯ ದುರಂತ ಅಂತ್ಯ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
