ಬೆಂಗಳೂರು:ಮುಂದಿನ ಮಕರ ಸಂಕ್ರಮಣದ ನಂತರ ಶುಭ ಲಗ್ನದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಅಷ್ಟರ ವೇಳೆಗೆ ಸಾಮರ್ಥ್ಯ ಉಳ್ಳವರು ಸೂರಿಲ್ಲದವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ರಾಮ ರಾಜ್ಯ ನಿರ್ಮಾಣದ ಕನಸನ್ನು ಸಾಕಾರಗೊಳಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೆರೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ರಾಮ ಮಂದಿರದಲ್ಲಿ ರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಆಗಲಿದ್ದು, ಈ ಮಧ್ಯೆ ಲಭ್ಯವಿರುವ ಸಮಯದಲ್ಲಿ ಸಮಾಜಪರ ಕೆಲಸಗಳನ್ನು ಮಾಡುವ ಮೂಲಕ ರಾಮ ಮಂದಿರದ ಜೊತೆಗೆ ರಾಜ್ಯ ರಾಜ್ಯ ಸ್ಥಾಪನೆಯ ಕನಸನ್ನು ನನಸು ಮಾಡಬೇಕಿದೆ ಎಂದರು.
ರಾಜರ ಆಳ್ವಿಕೆ ಕಾಲದಲ್ಲಿ ರಾಜ ರಾಮನಂತಿದ್ದರೆ ಸಾಕಿತ್ತು. ಆದರೆ ಈಗ ಇರುವುದು ಪ್ರಜಾರಾಜ್ಯ. ಈ ಕಾಲದಲ್ಲಿ ರಾಮರಾಜ್ಯ ನಿರ್ಮಾಣವಾಗಲು ಪ್ರಜೆಗಳೆಲ್ಲರೂ ರಾಮರಾಗಬೇಕಾಗುತ್ತದೆ. ಅದಕ್ಕಾಗಿ ಇರುವ ಒಂದು ವರ್ಷದ ಅವಧಿಯಲ್ಲಿ ರಾಮಾಯಣ ಅಧ್ಯಯನ ಮಾಡೋಣ, ಎಲ್ಲೆಡೆ ಪ್ರವಚನ ಆಯೋಜಿಸೋಣ ಇದರ ಜೊತೆ ಜೊತೆಗೆ ವಸತಿ ಸೌಕರ್ಯ ಇಲ್ಲದವರಿಗೆ ವಸತಿ ಕಲ್ಪಿಸುವ ಪ್ರಯತ್ನವನ್ನು ಮಾಡೋಣ. ಕನಿಷ್ಠ 5 ಲಕ್ಷ ರೂ. ವಿನಿಯೋಗಿಸಿ ಮನೆಯಿಲ್ಲದವರಿಗೆ ಮನೆ ಕಟ್ಟೋಣ ಎಂದು ಹೇಳಿದರು.
ರಾಮ ರಾಜ್ಯ ಸಂಕಲ್ಪ:ಈ ನಿಟ್ಟಿನಲ್ಲಿ ‘ರಾಮ ರಾಜ್ಯ ಸಂಕಲ್ಪ’ ಅಭಿಯಾನ ಕೈಗೊಳ್ಳಲಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಚಾಲನೆ ನೀಡಬೇಕು ಎಂದು ಹೇಳಿದ ಶ್ರೀಗಳು, ವಸತಿ ಯೋಜನೆ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು ಆ್ಯಪ್ ಒಂದನ್ನು ರಚಿಸುವ ಚಿಂತನೆ ಹೊಂದಿದ್ದು, ಯೋಜನೆಯಲ್ಲಿ ಭಾಗಿಯಾಗಲು ಇಚ್ಚಿಸುವವರನ್ನು ಆ್ಯಪ್ ಮೂಲಕ ಒಗ್ಗೂಡಿಸುವ ಕಾರ್ಯ ಮಾಡಲಾಗುವುದು ಎಂದರು.
ಇತರರಿಗೆ ನೆರವಾಗಿ:ದೊಡ್ಡ ದೊಡ್ಡ ಸಂಸ್ಥೆಗಳು, ಕ್ಲಬ್, ಸೊಸೈಟಿಗಳು ಒಂದಿಡೀ ಗ್ರಾಮವನ್ನೇ ದತ್ತು ತೆಗೆದುಕೊಂಡು ಹತ್ತು ಮನೆಗಳನ್ನು ಕಟ್ಟಿಸಬಹುದು. ಪುತ್ತೂರಿನಲ್ಲಿ ಒಬ್ಬರು ಮುನ್ನೂರು, ಉಡುಪಿಯಲ್ಲಿ ಒಬ್ಬರು ಇನ್ನೂರು ಮನೆ ಕಟ್ಟಿಸಿದ ಉದಾಹರಣೆ ಇದೆ. ಇದು ಸಮಾಜದ ಇತರರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು. ಅದೇ ರೀತಿಯಲ್ಲಿ ವಕೀಲರು ಬಡ ಕಕ್ಷಿದಾರರಿಗೆ ಉಚಿತ ಕಾನೂನು ನೆರವು ನೀಡುವುದು, ವೈದ್ಯರು ಹತ್ತು ಜನ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದು, ಶಿಕ್ಷಕರು ಹತ್ತು ಜನ ವಿದ್ಯಾರ್ಥಿಗಳಿಗೆ ಉಚಿತ ಪಾಠ ಮಾಡುವುದು ಹೀಗೆ ಜನರು ತಮ್ಮ ವೃತ್ತಿಯಲ್ಲಿಯೇ ಸಮಾಜಕ್ಕೆ ನೆರವು ನೀಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ರಾಮಭಕ್ತಿಯೇ ದೇಶ ಭಕ್ತಿ:ರಾಮಭಕ್ತಿ ಬೇರೆಯಲ್ಲ, ದೇಶ ಭಕ್ತಿ ಬೇರೆಯಲ್ಲ. ರಾಮಸೇವೆ ಬೇರೆಯಲ್ಲ, ದೇಶ ಸೇವೆ ಬೇರೆಯಲ್ಲ. ರಾಮಮಂದಿರ ನಿರ್ಮಾಣದ ಮೂಲಕ ರಾಮ ಮಂದಿರದ ಕನಸು ನನಸಾಗಲಿದೆ. ಆದರೆ ರಾಮ ರಾಜ್ಯದ ಕನಸು ನನಸಾಗಬೇಲ್ಲವೆ.ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆಯಬೇಕು.ರಾಮನ ದರ್ಶನಕ್ಕೆ ಬರುವಾಗ ಏನಾದರೂ ಕಾಣಿಕೆ ತರಬೇಕಲ್ಲವೆ. ಆದರೆ ಅದು ಹುಂಡಿಗೆ ಹಾಕುವ ಕಾಣಿಕೆ ಆಗಿರಬಾರದು. ಬದಲಿಗೆ ರಾಮನ ಹೆಸರಿನಲ್ಲಿ ಸಂಕಷ್ಟದಲ್ಲಿರುವವರ ಸೇವೆ ಮಾಡುವ ಮೂಲಕ ಆ ಪುಣ್ಯವನ್ನು ಹೊತ್ತು ರಾಮನ ದರ್ಶನ ಮಾಡಿದರೆ ಅದುವೇ ರಾಮನಿಗೆ ಸಲ್ಲಿಸುವ ನಿಜವಾದ ಕಾಣಿಕೆ ಆಗಲಿದೆ ಎಂದು ಹೇಳಿದರು.
ಬಿಟ್ಟಿ ಪ್ರಚಾರಕ್ಕಾಗಿ ರಾಮನ ಟೀಕೆ:ರಾಮನ ಹೆಸರಿನಲ್ಲಿ ಒಳ್ಳೆಯ ಕೆಲಸ ಮಾಡೋಣ. ಯಾರು ರಾಮ, ರಾಮಚರಿತಾ ಮಾನಸವನ್ನು ಟೀಕಿಸುತ್ತಾರೋ, ಅಂತಹ ವ್ಯಕ್ತಿಗಳನ್ನು ವೈಭವೀಕರಿಸುವ ಅಗತ್ಯವಿಲ್ಲ. ಬದಲಿಗೆ ರಾಮನ ಕುರಿತು ಒಳ್ಳೆಯದನ್ನು ಹೇಳಿರುವುದರ ಬಗ್ಗೆ ಪ್ರಚಾರ ಮಾಡೋಣ. ಕೆಲವರು ಸಮೂಹದ ಭಾವನೆಗಳನ್ನು ಕೆಣಕಿದರೆ ಬಿಟ್ಟಿ ಪ್ರಚಾರ ಸಿಗುತ್ತದೆ ಎಂಬ ಆಲೋಚನೆಯಿಂದ ಹೀಗೆ ಮಾಡುತ್ತಾರೆ. ಅದನ್ನು ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಬದಲಿಗೆ ನಾವು ರಾಮಾಯಣದ ಆಶಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕೆಲಸದಲ್ಲಿ ತೊಡಗೋಣ ಎಂದು ಸ್ವಾಮೀಜಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eleven =
Remember me
