ಬೆಂಗಳೂರು: ಕನ್ನಡ ಸಾಹಿತ್ಯ, ಸಂಸ್ಕೃತಿ, ಕೃಷಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಶೂದ್ರ ನೆಲದ ಮಾತು ಪ್ರತಿಷ್ಠಾನ ವತಿಯಿಂದ ನೀಡಲಾಗುವ 2023ನೇ ಸಾಲಿನ ಪ್ರಶಸ್ತಿ ಪ್ರಕಟಗೊಂಡಿವೆ.
ಕಿ.ರಂ. ನಾಗರಾಜ್ ಪ್ರಶಸ್ತಿಗೆ ಹಿರಿಯ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ, ಪ್ರಯೋಗಶೀಲ ರೈತ ನಂಜಪ್ಪರೆಡ್ಡಿ ಪ್ರಶಸ್ತಿಗೆ ಜಿ. ಸುಶೀಲ್, ಡಾ.ಕೆ. ಮರುಳಸಿದ್ದಪ್ಪ, ಅತ್ಯುತ್ತಮ ರಂಗನಟ ಪ್ರಶಸ್ತಿಗೆ ಪ್ರಸನ್ನ ಅವರು ಭಾಜನರಾಗಿದ್ದಾರೆ.
2022ನೇ ಸಾಲಿನಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಕ್ಕೆ ನೀಡುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿಗೆ ರೇಣುಕಾ ರಮಾನಂದ ಅವರ ‘ಸಂಬಾರ ಬಟ್ಟಲ ಕೊಡಿಸು’ ಕವನ ಸಂಕಲನ ಮತ್ತು ವೈಚಾರಿಕ ಸಾಹಿತ್ಯಕ್ಕೆ ನೀಡುವ ಕವಿ ಡಾ. ಸಿದ್ಧಲಿಂಗಯ್ಯ ಪ್ರಶಸ್ತಿಗೆ ಪ್ರೊ. ಎಚ್.ಟಿ. ಪೋತೆ ಅವರ ‘ಅಂಬೇಡ್ಕರ್ ಮತ್ತು …’ ಕೃತಿ ಆಯ್ಕೆಯಾಗಿವೆ.
ಕಿ.ರಂ. ನಾಗರಾಜ್ ಪ್ರಶಸ್ತಿ ಹಾಗೂ ಪ್ರಯೋಗಶೀಲ ರೈತ ನಂಜಪ್ಪರೆಡ್ಡಿ ಪ್ರಶಸ್ತಿ ತಲಾ 20 ಸಾವಿರ ರೂ. ನಗದು, ಉಳಿದ ಪ್ರಶಸ್ತಿಗಳು ತಲಾ 10 ಸಾವಿರ ರೂ. ನಗದು, ಲಕ ಹಾಗೂ ಸನ್ಮಾನ ಪತ್ರ ಒಳಗೊಂಡಿರುತ್ತವೆ.
ಪ್ರತಿಷ್ಠಾನದ ಅಧ್ಯಕ್ಷ ಎಚ್. ದಂಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಯಶವಂತ ಪ್ರೀತಿ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + fifteen =
Remember me
