ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ 3 ವರ್ಷದಿಂದ ಖಾಲಿ ಇರುವ ಎಸ್​ಐ ಹುದ್ದೆಗಳ ನೇಮಕಾತಿ ಸದ್ಯಕ್ಕೆ ಪೂರ್ಣವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು, ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಹಗರಣ ಮತ್ತು ಕೋರ್ಟ್ ವಿಚಾರಣೆ ಮುಗಿಸಿದ ಮೇಲೆ 545 ಎಸ್​ಐ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಂಘಟಿಸಿದ ಲಿಖಿತ ಪರೀಕ್ಷೆ ವೇಳೆ ಕರೆಪತ್ರದಲ್ಲಿ ಗೊಂದಲ ಉಂಟಾಗಿದೆ. ಇದನ್ನು ಪ್ರಶ್ನಿಸಿ ಇನ್​ಸರ್ವಿಸ್ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಬಾಕಿ ಇರುವ 402 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ನೇರ ಅಭ್ಯರ್ಥಿ ಮತ್ತು ಇನ್​ಸರ್ವಿಸ್ ಕರೆಪತ್ರ ಸೌಲಭ್ಯ ಸಿಗದಿದ್ದರೂ ಸಹ ಕೋರ್ಟ್​ನಲ್ಲಿ ಪ್ರಶ್ನಿಸಲು ನೊಂದ ಅಭ್ಯರ್ಥಿಗಳು ನಿರ್ಧಾರಕ್ಕೆ ಬಂದಿದ್ದಾರೆ. 545 ಎಸ್​ಐ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಕೆಲವೇ ತಿಂಗಳಿಗೆ 402 ಎಸ್​ಐ ನೇಮಕಾತಿಗೂ ಅಧಿಸೂಚನೆ ಹೊರಡಿಸಿದ ಪೊಲೀಸ್ ನೇಮಕಾತಿ ವಿಭಾಗ ಎರಡು ನೇಮಕಾತಿಗೂ ಏಕಕಾಲಕ್ಕೆ ದೇಹದಾರ್ಢ್ಯ ಪರೀಕ್ಷೆ ನಡೆಸಿದೆ.
2021ರ ಅ.3ರಂದು 545 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸಿದ್ದು, 54,104 ಅಭ್ಯರ್ಥಿಗಳು ಭಾಗವಹಿಸಿದ್ದರು. ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾದ ಮೇಲೆ ಹಗರಣ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಕೆಇಎಗೆ ವಹಿಸಲಾಗಿದೆ. 3 ವರ್ಷಗಳ ಬಳಿಕ ಕೆಇಎ ಮರು ಪರೀಕ್ಷೆ ನಡೆಸಿದಾಗ ಅಭ್ಯರ್ಥಿಗಳು ತೊಂದರೆ ಎದುರಿಸಿದ್ದಾರೆ. ಅದರಲ್ಲಿಯೂ ಪೊಲೀಸ್ ಇಲಾಖೆಯ ಇನ್​ಸರ್ವೀಸ್ ಮೀಸಲಾತಿಯಡಿ ಅರ್ಜಿ ಸಲ್ಲಿಸಿರುವ ನೂರಾರು ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್​ಸ್ಟೆಬಲ್ ಮತ್ತು ಎಸ್​ಐ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಕಾನ್​ಸ್ಟೆಬಲ್ ಆಗಿ ಆಯ್ಕೆಯಾದವರು ಪಿಎಸ್​ಐ ಪರೀಕ್ಷೆಗಳನ್ನು ಸಹ ಬರೆದು ನೇಮಕವಾಗಿರುವ ಸಾವಿರಾರು ಉದಾಹರಣೆಗಳಿವೆ. ಅದಕ್ಕಾಗಿ ಇನ್​ಸರ್ವೀಸ್ ಬಯಸುವ ಅಭ್ಯರ್ಥಿಗಳಿಗೆ ಶೇ.10 ಮೀಸಲಾತಿ ನೀಡಲಾಗಿದೆ.
ಸೇವೆಯಲ್ಲಿ ಇರುವ ಪೊಲೀಸರು 5 ವರ್ಷ ಪೂರ್ಣವಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಪೊಲೀಸ್ ನೇಮಕಾತಿ ಅನುಮತಿ ಮೇರೆಗೆ ಇನ್​ಸರ್ವಿಸ್ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವಾಗ ಇನ್​ಸರ್ವೀಸ್ ಮತ್ತು ನೇರ ನೇಮಕಾತಿ ಬಯಸಿ ಪ್ರತ್ಯೇಕ ಅರ್ಜಿ, ಶುಲ್ಕ ಪಾವತಿಸಿದ್ದಾರೆ. ದೈಹಿಕ ಪರೀಕ್ಷೆಯಲ್ಲಿಯೂ ಅರ್ಹತೆ ಪಡೆದುಕೊಂಡಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗ ಸಹ 2 ಹಾಲ್​ಟಿಕೆಟ್ ಅಪ್​ಲೋಡ್ ಮಾಡುತ್ತಿತ್ತು. ಅಭ್ಯರ್ಥಿಗಳು, ಎರಡರ ಪೈಕಿ ಒಂದು ಹಾಲ್​ಟಿಕೆಟ್ ಪಡೆದು ಲಿಖಿತ ಪರೀಕ್ಷೆ ಬರೆಯುತ್ತಿದ್ದರು. ಕೆಇಎ ಮರು ಪರೀಕ್ಷೆ ನಡೆಸುವಾಗ ಒಂದೇ ಹಾಲ್ ಟಿಕೆಟ್ ಬಿಡುಗಡೆ ಮಾಡಿದ ಪರಿಣಾಮ ನೂರಾರು ಇನ್​ಸರ್ವೀಸ್ ಅಭ್ಯರ್ಥಿಗಳು ಮೀಸಲಾತಿಯಿಂದ ವಂಚಿತರಾಗಿ ನೇರ ನೇಮಕಾತಿಯಲ್ಲಿ ಪರೀಕ್ಷೆ ಬರೆಯುವಂತೆ ಆಗಿದೆ. ಇದನ್ನು ಪ್ರಶ್ನಿಸಿ ಕೆಇಎಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಪರಿಗಣಿಸುವ ಭರವಸೆ545 ಎಸ್​ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಗೆ ಜ.17ರಂದು ಕರೆಪತ್ರಗಳನ್ನು ಬಿಡುಗಡೆ ಮಾಡಿದಾಗ ಇನ್​ಸರ್ವಿಸ್ ಅಭ್ಯರ್ಥಿಗಳಿಗೆ ನೇರ ನೇಮಕಾತಿಗೆ ಮಾತ್ರ ಹಾಲ್​ಟಿಕೆಟ್ ಅಪ್​ಲೋಡ್ ಮಾಡಲಾಗಿತ್ತು. ಕೆಇಎ ಕಚೇರಿಗೆ ಭೇಟಿ ಕೊಟ್ಟು ಇನ್​ಸರ್ವಿಸ್ ಅಭ್ಯರ್ಥಿಗಳು, ಮನವಿ ಪತ್ರ ಕೊಟ್ಟಾಗ ಆಯ್ಕೆಪಟ್ಟಿ ಬಿಡುಗಡೆ ಮಾಡುವಾಗ ಇನ್​ಸರ್ವಿಸ್ ಅರ್ಜಿ ಪರಿಗಣಿಸುವ ಭರವಸೆ ಕೊಟ್ಟಿದ್ದಾರೆ. ಇನ್​ಸರ್ವಿಸ್ ಅಭ್ಯರ್ಥಿಗಳು, ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರಣ ಪ್ರತಿಭಟಿಸಲು ಸಾಧ್ಯವಾಗದೆ ಲಿಖಿತ ಪರೀಕ್ಷೆ ಎದುರಿಸಿದ್ದಾರೆ. ಇದೀಗ ಆಯ್ಕೆಪಟ್ಟಿ ವೇಳೆ ಇನ್​ಸರ್ವಿಸ್ ಮೀಸಲಾತಿ ಮತ್ತು 402 ಹುದ್ದೆಗಳ ಲಿಖಿತ ಪರೀಕ್ಷೆ ವೇಳೆ ಇನ್​ಸರ್ವಿಸ್ ಕರೆಪತ್ರ ಸಿಗದೆ ಇದ್ದರೇ ಹೈಕೋರ್ಟ್ ಮೊರೆ ಹೋಗುವುದಾಗಿ ನೊಂದ ಅಭ್ಯರ್ಥಿಗಳು ತಿಳಿಸಿದ್ದಾರೆ.
ಲಿಖಿತ ಪರೀಕ್ಷೆಗೆ ನಿರಾಸಕ್ತಿಮೂರು ವರ್ಷದಿಂದ ಧೂಳು ಹಿಡಿಯುತ್ತಿರುವ 402 ಎಸ್​ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಗೃಹ ಇಲಾಖೆ ನಿರಾಸಕ್ತಿ ತೋರುತ್ತಿದೆ. ಇಂದು ನಾಳೆ ಎಂದುಕೊಂಡು ಕಾಲ ಕಳೆಯುತ್ತಿರುವ ಕೆಇಎ, ಸ್ಪಷ್ಟ ಮಾಹಿತಿ ನೀಡದ ಕಾರಣ ಅಭ್ಯರ್ಥಿಗಳಿಗೂ ಗೊಂದಲ ಉಂಟಾಗಿದ್ದು, ಪೊಲೀಸ್ ಇಲಾಖೆಗೂ ಖಾಲಿ ಎಸ್​ಐ ಹುದ್ದೆಗಳು ಭರ್ತಿ ಆಗುತ್ತಿಲ್ಲ.
ಮೀಸಲಾತಿಯಲ್ಲಿ ಆಯ್ಕೆಪೊಲೀಸ್ ನೇಮಕಾತಿ ವಿಭಾಗ 545 ಎಸ್​ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿದಾಗ ಎರಡು ಕರೆಪತ್ರಗಳನ್ನು ಅಪ್​ಲೋಡ್ ಮಾಡಲಾಗಿತ್ತು. ಅದರಲ್ಲಿ ಇನ್​ಸರ್ವಿಸ್ ಕರೆಪತ್ರ ಪಡೆದು ಅದರ ಮೇಲೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದೆ. ಅಕ್ರಮ ನಡೆದ ಪರಿಣಾಮ ಪ್ರಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಯಿತು. ಆದರೆ, ಇದೀಗ ಮರು ಲಿಖಿತ ಪರೀಕ್ಷೆ ನಡೆದಾಗಲೂ ಅನ್ಯಾಯ ಆಗುತ್ತಿದೆ. ಇನ್​ಸರ್ವಿಸ್ ಕರೆಪತ್ರ ಸಿಗದೆ ಮೀಸಲಾತಿಯಿಂದ ವಂಚಿತರಾಗುತ್ತಿದ್ದೇವೆ ಎಂದು ನೊಂದ ನೂರಾರು ಕಾನ್​ಸ್ಟೆಬಲ್​ಗಳು, ‘ವಿಜಯವಾಣಿ’ ಜತೆ ಅಳಲು ತೋಡಿಕೊಂಡಿದ್ದಾರೆ.
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಕೋಲಾ! ವಿಡಿಯೋ ನೋಡಿದ್ರೆ ಕಣ್ಣಂಚಲ್ಲಿ ನೀರು ತರಿಸುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
