ಕಲಬುರಗಿ:ಭಾರಿ ಕೋಲಾಹಲವನ್ನೇ ಸೃಷ್ಟಿಸಿರುವ ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿಂಗ್​ಪಿನ್​ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾನನ್ನು ಸಿಐಡಿ ಪೊಲೀಸರು ಇದಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒಳ ಉಡುಪಿನಲ್ಲಿ ಬ್ಲೂ ಟೂಥ್​ ಇಟ್ಟು ಕಿವಿಯೋಳಗೆ ಚಿಕ್ಕದಾದ ಟ್ರಾನ್ಸ್​ಮೀಟರ್ ಕಿವಿಯಲ್ಲಿ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಇವರ ಮೇಲಿದೆ. ಬ್ಲೂ ಟೂಥ್​ ಬಳಕ್ಕೆ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸ್ಪೆಷಲ್ ಟ್ರೈನಿಂಗ್ ನೀಡಲಾಗುತ್ತಿತ್ತು. ಪರೀಕ್ಷಾರ್ಥಿ ಒಂದು ಬಾರಿ ಸಣ್ಣದಾಗಿ ಕೆಮ್ಮಿದರೆ ಉತ್ತರ ರಿಸಿವ್ ಎಂದು ಸೂಚನೆಯಾಗಿತ್ತು. ಅದಾದ ಬಳಿಕ ಇನ್ನೊಂದು ಪ್ರಶ್ನೆಯ ಉತ್ತರ ಹೇಳಲಾಗುತ್ತಿತ್ತು. ಪ್ರತಿ ಅಭ್ಯರ್ಥಿಗೆ ಒಂದು ಹೊಸ ಸಿಮ್ ಕಾಡ್೯ ಖರೀದಿಸಿ ನೀಡಲಾಗುತ್ತಿತ್ತು. ಪರೀಕ್ಷೆ ಮುಗಿದ ಬಳಿಕ ಈ ತಂಡ ಅಲ್ಲೇ ಸಿಮ್ ನಾಶ ಮಾಡುತ್ತಿತ್ತು. ಈ ಮೂಲಕ ಪೊಲೀಸರ ಕೈಗೆ ಸಿಕ್ಕರೂ ಕಾಲ್ ಡೆಟೆಕ್ಟ್ ಆಗದಂತೆ ನೋಡಿಕೊಳ್ಳಲಾಗುತ್ತಿತ್ತು.
ಇಂಥ ಖತರ್ನಾಕ್‌ ಐಡಿಯಾದ ಮೂಲಕ ಅಕ್ರಮ ಎಸಗಿರುವ ಮಂಜುನಾಥ್‌ನ ಇನ್ನೊಂದು ಕರಾಳಮುಖ ಬಯಲಿಗೆ ಬಂದಿದೆ. ಅದೇನೆಂದರೆ, 2021ರ ಡಿಸೆಂಬರ್‌ 14ರಂದು ಲೋಕೋಪಯೋಗಿ ಇಲಾಖೆಯ 330 ಜೆಇ ಮತ್ತು 660 ಎಇ ಹುದ್ದೆಗಳ ಭರ್ತಿಗೆ ನಡೆದ ಇ ಪರೀಕ್ಷೆಯಲ್ಲಿ ಕೂಡ ಅಕ್ರಮ ಎಸಗಿದ್ದ. ಈ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದ ಈತನನ್ನು ಬಂಧಿಸಲಾಗಿತ್ತು. ಆದರೆ ಈ ವಿಷಯವನ್ನು ಕಚೇರಿಯಲ್ಲಿ ತಿಳಿಸದೇ ತನಗೆ ಅನಾರೋಗ್ಯ ಆಗಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ರಜೆ ಬೇಕು ಎಂದು ಲೀವ್‌ ಲೆಟರ್‌ ಬರೆದು ವೈದ್ಯಕೀಯ ರಜೆ ಪಡೆದಿದ್ದ. ಈ ದಿನದಲ್ಲಿ ವೈದ್ಯಕೀಯ ರಜೆ ಎಂದು ಇದ್ದ ಹಿನ್ನೆಲೆಯಲ್ಲಿ ಸಂಬಳ ಕೂಡ ಪಡೆದಿದ್ದ.
ಅಚ್ಚರಿಯ ವಿಷಯ ಎಂದರೆ ಕಲಬುರಗಿಯ ವೈದ್ಯರೊಬ್ಬರು ತಮ್ಮಲ್ಲಿ ಚಿಕಿತ್ಸೆ ಪಡೆರುವ ಬಗ್ಗೆ ಮೆಡಿಕಲ್‌ ಸರ್ಟಿಫಿಕೇಟ್‌ ನೀಡಿದ್ದರು ಈ ಸರ್ಟಿಫಿಕೇಟ್‌ ನೋಡಿ ರಜೆ ಮಂಜೂರು ಮಾಡಲಾಗಿತ್ತು. ಇದರ ಜತೆಗೆ ಈತನ ವಿರುದ್ಧ ಹಲವಾರು ದೂರುಗಳು ಇವೆ. ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ವಿನಾಕಾರಣ ಸತಾಯಿಸಿದ್ದ ಕಾರಣಕ್ಕೆ ಮೇಲಧಿಕಾರಿಗಳು ಈತನಿಗೆ ಕಳೆದ ಫೆಬ್ರವರಿಯಲ್ಲೇ ನೋಟಿಸ್‌ ಸಹ ನೀಡಿರುವುದು ಬೆಳಕಿಗೆ ಬಂದಿದೆ.
ಪಿಎಸ್‌ಐ ಗೋಲ್‌ಮಾಲ್‌: ಖದೀಮರಿಗೆ ನಂಬರ್‌ ಕೊಡ್ತಿದ್ದ ಡಿವೈಎಸ್ಪಿಯೇ ಇದೀಗ ‘ಕೈದಿ ನಂಬರ್‌ 18197’

ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
