ಬೆಂಗಳೂರು:ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ಸಂಬಂಧ ಬುಧವಾರ 50 ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಪ್ರವೇಶ ಪತ್ರದ ಅಸಲು ಪ್ರತಿ ಹಾಗೂ 2ನೇ ಪತ್ರಿಕೆಯ ಓಎಂಆರ್ ಶೀಟ್ ಕಾರ್ಬನ್ ಪ್ರತಿ ಸಂಗ್ರಹಿಸಿದ್ದಾರೆ. ಅವ್ಯವಹಾರ ನಡೆದಿದ್ದಲ್ಲಿ ಕಾರ್ಬನ್ ಪ್ರತಿ ಪರಿಶೀಲನೆಯಿಂದ ದೃಢಪಡಲಿದೆ.
ಕಲಬುರಗಿಯಲ್ಲಿ ಠಿಕಾಣಿ ಹೂಡಿರುವ ಸಿಐಡಿಯ ಒಂದು ತಂಡ, ಅಕ್ರಮ ನೇಮಕಾತಿಯಲ್ಲಿ ಭಾಗಿಯಾದವರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬಂಧಿಸುತ್ತಿದ್ದಾರೆ. ಮತ್ತೊಂದು ತಂಡ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಮೊದಲ 50 ಅಭ್ಯರ್ಥಿಗಳನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಕರೆಸಿ ದಾಖಲೆ ಪಡೆದು ಹೇಳಿಕೆ ಪಡೆದಿದೆ. ಮತ್ತೆ 50 ಅಭ್ಯರ್ಥಿಗಳಿಗೆ ನೋಟಿಸ್ ಕೊಟ್ಟು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅರಮನೆ ರಸ್ತೆ ಕಾರ್ಲಟನ್ ಭವನದ ಸಿಐಡಿ ಎಫ್​ಐಯು ವಿಭಾಗದ ಅಧಿಕಾರಿಗಳ ಮುಂದೆ 50 ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರತಿಯೊಬ್ಬರ ಪ್ರವೇಶ ಪತ್ರದ ಅಸಲು ಪ್ರತಿ ಮತ್ತು 2ನೇ ಪತ್ರಿಕೆಯ ಓಎಂಆರ್ ಶೀಟ್​ನ ಕಾರ್ಬನ್ ಅಸಲು ಪ್ರತಿಯನ್ನು ಪಡೆದು ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಭ್ಯರ್ಥಿಗಳಿಂದ ಪಡೆದಿರುವ ಪ್ರವೇಶ ಪತ್ರ ಮತ್ತು ಓಎಂಆರ್ ಶೀಟ್​ನ ಕಾರ್ಬನ್ ಪ್ರತಿಯನ್ನು ನೇಮಕಾತಿ ವಿಭಾಗದಲ್ಲಿರುವ ಅಸಲಿ ದಾಖಲೆಗಳ ಜತೆ ತಾಳೆ ಮಾಡಲಾಗುತ್ತದೆ. ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಅನುಮಾನ ಕಂಡರೆ ಅಂತಹ ಅಭ್ಯರ್ಥಿಗಳನ್ನು 2ನೇ ಸುತ್ತಿಗೆ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಹಾಜರಾಗಿದ್ದ ಕೆಲ ಅಭ್ಯರ್ಥಿಗಳು ಓಎಂಆರ್ ಶೀಟ್​ಗಳನ್ನು ಸಲ್ಲಿಸಲು ಸಬೂಬು ಹೇಳಿದ್ದಾರೆ. ಓಎಂಆರ್ ಶೀಟ್​ನ ಕಾರ್ಬನ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು. ವಿಫಲವಾಗುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಪರೀಕ್ಷೆ ಕೊಠಡಿ ಮೇಲ್ವಿಚಾರಕ, ಪರೀಕ್ಷೆ ಮುಗಿದ ಮೇಲೆ ಶಂಕಾಸ್ಪದ ಅಭ್ಯರ್ಥಿಗಳ ಹೆಸರು ಮತ್ತು ಕಡಿಮೆ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯರ್ಥಿಗಳ ನೋಂದಣಿ ಮತ್ತು ಹೆಸರನ್ನು ದಾಖಲೆ ಮಾಡಿರುತ್ತಾರೆ. ಆ ದಾಖಲೆಗೂ ತಾಳೆ ಮಾಡಿ ಪ್ರತಿಯೊಬ್ಬ ಅಭ್ಯರ್ಥಿಗಳ ಓಎಂಆರ್ ಶೀಟ್​ಗಳನ್ನು ಪರಿಶೀಲಿಸಲಾಗುತ್ತದೆ. ಎಷ್ಟು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ತನಿಖೆ ಪೂರ್ಣ ಮುಗಿದ ಮೇಲೆ ಗೊತ್ತಾಗಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ:ಪೊಲೀಸ್ ಸಬ್ ಇನ್​ಸ್ಪೆಕ್ಟರ್ ನೇಮಕ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ವಿವಿಧ ಆಯಾಮದಲ್ಲಿ ಹೋರಾಟ ನಡೆಸಿದೆ. ಸೂಕ್ತ ತನಿಖೆ ನಡೆಯಬೇಕು ಹಾಗೂ ಮರುಪರೀಕ್ಷೆ ನಡೆಸಬೇಕೆಂದು ಹೋರಾಡುತ್ತಿರುವ ಅಭ್ಯರ್ಥಿಗಳಿಗೆ ನೇರ ಬೆಂಬಲ ವ್ಯಕ್ತಪಡಿಸುವ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ನಿರಂತರ ದಾಳಿ ನಡೆಸಿದೆ.
ಕಾರ್ಬನ್ ಶೀಟ್ ಪ್ರಮುಖ ಪುರಾವೆ?:ಪ್ರಕರಣದಲ್ಲಿ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಪ್ರಮುಖ ಸಾಕ್ಷ್ಯ ಆಗಲಿವೆ. ನೇಮಕಾತಿ ವಿಭಾಗದಲ್ಲಿ ಇರುವ ಅಸಲಿ ಓಎಂಆರ್ ಶೀಟ್​ನಲ್ಲಿ ಮತ್ತು ಕಾರ್ಬನ್ ಶೀಟ್​ನಲ್ಲಿ ಉತ್ತರಿಸುವ ಆಯ್ಕೆ ಒಂದೇ ಆಗಿರಬೇಕು. ಅದರಲ್ಲಿಯೂ ಟಿಕ್ ಮಾಡಿರುವುದು, ಇಂಕ್ ಒಂದೇ ಆಗಿರಬೇಕು. ಸ್ವಲ್ಪ ಏರುಪೇರಾದರೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಅಸಲಿತನ ಬಯಲಿಗೆ ತರಲಿದ್ದಾರೆ.
ರಾಜ್ಯವ್ಯಾಪಿ ಪ್ರತಿಭಟನೆ:ಎಸ್​ಐ ನೇಮಕಾತಿ ಅಕ್ರಮದಿಂದ ನೊಂದ ಯುವಕ, ಯುವತಿಯರು ಬುಧವಾರ ರಾಜ್ಯವ್ಯಾಪಿ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಬೆಂಗಳೂರು ನಗರ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಉಳಿದಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 545 ಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಸಿಐಡಿ ತನಿಖೆಯಲ್ಲಿ ಸಹ ಸಾಬೀತಾಗಿದೆ. ಮರು ಪರೀಕ್ಷೆಗೆ ಆದೇಶ ಹೊರಡಿಸಿ ಶೀಘ್ರದಲ್ಲೇ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಕ್ರಮವೆಸಗಿದ ಅಭ್ಯರ್ಥಿಗಳು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ ‘ವಯಲೆನ್ಸ್​’!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 4 =
Remember me
