ಪಿರಿಯಾಪಟ್ಟಣ:ಕರೊನಾ ವೈರಸ್ ಹಾವಳಿಯಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕಾಗಿದ್ದ ಸಬ್ ಇನ್ಸ್‌ಪೆಕ್ಟರ್ ಒಬ್ಬರು, ರೌಡಿಶೀಟರ್‌ ಜತೆ ರಾತ್ರಿಯಿಂದ ಬೆಳಗಿನ ಜಾವದವರೆಗೆ ಎಣ್ಣೆಪಾರ್ಟಿ ಮಾಡಿರುವ ಸಂಗತಿ ಬಯಲಿಗೆ ಬಂದಿದೆ.
ಏ. 17ರಂದು ತಾಲೂಕಿನ ರೌಡಿಶೀಟರ್ ಬಿ.ಬಿ. ದಿನೇಶ್ ಮತ್ತಿತರ ವ್ಯಕ್ತಿಗಳೊಂದಿಗೆ ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ರಾತ್ರಿ 8 ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ಮದ್ಯಪಾನ ಕೂಟದಲ್ಲಿ ಭಾಗಿಯಾಗಿ ಮದ್ಯ ಸೇವಿಸಿ ಅವರೊಂದಿಗೆ ಸಲುಗೆಯಿಂದ ವರ್ತಿಸಿದ್ದಾರೆ.
ಇದನ್ನೂ ಓದಿಕಣ್ಣೀರಿಟ್ಟ ವಿರಾಟ್​ ಕೊಹ್ಲಿ, ಅಂತಹದ್ದೇನಾಯ್ತು?
ಅಷ್ಟೇ ಅಲ್ಲ, ಆ ರೌಡಿಶೀಟರ್‌ನೊಂದಿಗೆ ಪಾರ್ಟಿ ಇಡೀ ನಾಡಿಗೆ ಗೊತ್ತಾಗುವಂತೆ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಟಿಶರ್ಟ್ ಹಾಕಿಕೊಂಡಿರುವ ಎಸ್‌ಐ, ರೌಡಿಶೀಟರ್ ಮತ್ತವನ ಸ್ನೇಹಿತರ ಹೆಗಲ ಮೇಲೆ ಕೈಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ.
ಲೋಕೇಶ್ ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಇಲಾಖೆಗೆ ಅಗೌರವ ತಂದಿದ್ದಾರೆ ಎಂದು ಆರೋಪಿಸಿ ಪಿರಿಯಾಪಟ್ಟಣದ ಎಸ್‌ಪಿಆರ್ ಕಾಲನಿ ನಿವಾಸಿ ಅಣ್ಣಯ್ಯ ಎಂಬುವವರು ಡಿವೈಎಸ್ಪಿ ಅವರಿಗೆ ಮೇ 2 ರಂದು ದೂರು ನೀಡಿದ್ದರು. ದೂರನ್ನು ಪರಿಗಣಿಸಿ ವಿಚಾರಣೆ ನಡೆಸಿದಾಗ ಆರೋಪದಲ್ಲಿ ಸತ್ಯಾಂಶ ಕಂಡು ಬಂದಿದ್ದು, ಪಿಎಸ್‌ಐ ಪಿ. ಲೋಕೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ10ನೇ ತರಗತಿ ಮಕ್ಕಳಿಗೆ ‘ದತ್ತ ಮೇಷ್ಟ್ರು’ ಪಾಠ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
