ಕಲಬುರಗಿ:ದರ್ಗಾಕ್ಕೆ ತೆರಳುವ ಮುನ್ನ ಶ್ರೀ ರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದು ಟಿಪ್ಪು ಸುಲ್ತಾನನ ಸಂತತಿ ಇರುವಲ್ಲಿ ಬೆಂಕಿ ಹಚ್ಚುತ್ತೇನೆ ಎಂದಿದ್ದಾರೆ.
ಈ ಬಾರಿ ಪೂಜೆಗೆ ಅವಕಾಶ ಲಭಿಸಿದ್ದು ಶಿವಲಿಂಗಕ್ಕೆ ಪೂಜೆ ಮಾಡಲು ತೆರಳುವ ಮುನ್ನ ಮಾತನಾಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ‘ಕಳೆದ ವರ್ಷ ಪೂಜೆಗೆ ಕಲಬುರಗಿ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಇಲ್ಲಿನ ಬಾಬರ್‌ನ ಸಂತತಿಗಳು, ಟಿಪ್ಪುವಿನ ಮೊಮ್ಮಕ್ಕಳು ಪೂಜೆಗೆ ಅವಕಾಶ ಕೊಡಲಿಲ್ಲ. ಪೂಜೆಗೆ ತೆರಳುತ್ತಿದ್ದ ನಮ್ಮನ್ನ ಅಂದು ಬಂಧಿಸಲಾಗಿತ್ತು.
ಆಡಳಿತ ನಿರ್ಬಂಧ ಹೇರಿದರೆ ನಾವು ಅದನ್ನ ಸವಾಲಾಗಿ ತೆಗೆದುಕೊಳ್ಳುತ್ತೇವೆ. ಟಿಪ್ಪು ಸುಲ್ತಾನ್ ಮೊಮ್ಮಕ್ಕಳು, ಬಾಬರನ ಮರಿಮೊಮ್ಮಕ್ಕಳು ಹೆದರಿಸೊಕೆ ಬಂದಿದ್ದರು. ಆದರೆ ನಾವು ಯಾವುದಕ್ಕೂ ಹೆದರದೆ ಪೂಜೆ ಮಾಡಿ ಬಂದಿದ್ದೆವು.
2021 ರಲ್ಲಿ ರಾಘವ ಚೈತನ್ಯ ಶಿವಲಿಂಗದ ಮೇಲೆ ಟಿಪ್ಪುವಿನ ಮೊಮ್ಮಕ್ಕಳು ಮೂತ್ರವಿಸರ್ಜನೆ ಮಾಡಿದ್ದರು. ದರ್ಗಾದಲ್ಲಿನ ಶಿವಲಿಂಗವನ್ನ ಮುಚ್ಚಿಡಲು ಮುಸ್ಲಿಮರು ಮುಂದಾಗಿದ್ದರು. ಆದರೆ ಆಳಂದ ಹಿಂದೂ ಯುವಕರು ಹೋರಾಟ ಮಾಡಿ ಲಿಂಗ ಸಂರಕ್ಷಿಸಿದ್ದರು. ಆಳಂದಕ್ಕೆ ಸಿದ್ದಲಿಂಗ ಬಂದ್ರೆ ಬೆಂಕಿ ಕಡ್ಡಿ ತಗೊಂಡು ಬರ್ತಾನೆ ಅಂತಾ ಮುಸ್ಲಿಮರು ಹೇಳ್ತಾರೆ. ಆದರೆ ನಾನು ಟಿಪ್ಪು ಸುಲ್ತಾನ್‌ ನ ಮೊಮ್ಮಕ್ಕಳ ಕಸ ಎಲ್ಲೆಲ್ಲಿ ಇರುತ್ತೊ ಅಲ್ಲಲ್ಲಿ ನಾನು ಬೆಂಕಿ ಹಚ್ಚುತ್ತೇನೆ. ಅದಕ್ಕಾಗಿ ನಾನು ಯಾವಾಗಲೂ ಕಡ್ಡಿ ತಗೊಂಡು ಓಡಾತ್ತಿರುತ್ತೇನೆ. ಅವರಿಗೆ ಲಾಡ್ಲೇ ಮಶಾಕ್ ದರ್ಗಾ ಎಷ್ಟು ಪವಿತ್ರವೋ, ನಮಗೆ ಅಲ್ಲಿನ ಶಿವಲಿಂಗವೂ ಅಷ್ಟೇ ಪವಿತ್ರ. ನಮ್ಮ ಹಿಂದೂಗಳು ಹಾಗೇ, ಎದ್ರೆ ವೀರಭದ್ರ, ಮಲಗಿದ್ರೆ ಕುಂಭಕರ್ಣ’ ಎಂದು ಶ್ರೀ ಸಿದ್ಧಲಿಂಗ ಸ್ವಾಮಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
