ಬೆಂಗಳೂರು:ಮಹಾಮಾರಿ ಕರೊನಾ ಸೋಂಕಿನಿಂದ ಇಂದು ವಿಧಿವಶರಾದ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ (ಜೂ. 12) ನೆರವೇರಲಿದೆ.
ಕೆಲ ಹೊತ್ತಲ್ಲಿ ಆಸ್ಪತ್ರೆಯಿಂದ ಕುಟುಂಬಕ್ಕೆ ಪಾರ್ಥಿವ ಶರೀರ ಹಸ್ತಾಂತರವಾಗಿದ್ದು, ಆರ್ ಆರ್ ನಗರದ ನಿವಾಸಕ್ಕೆ ಸಿದ್ದಲಿಂಗಯ್ಯರ ಪಾರ್ಥಿವ ಶರೀರ ರವಾನೆಯಾಗಿದೆ.
ಕಲಾಗ್ರಾಮ, ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಂತ್ಯಸಂಸ್ಕಾರ ಮಾಡುವಂತೆ ಸಿದ್ದಲಿಂಗಯ್ಯರ ಸ್ನೇಹಿತರು ಸರ್ಕಾರಕ್ಕೆ ಒತ್ತಾಯ ಮಾಡಲು ನಿರ್ಧರಿಸಿದ್ದಾರೆ. ಸರ್ಕಾರ ಒಪ್ಪಿಕೊಂಡರೆ ಬೆಂಗಳೂರಲ್ಲೇ ಅಂತ್ಯಸಂಸ್ಕಾರ ನೆರವೇರಲಿದೆ. ಇಲ್ಲದಿದ್ದರೆ, ಮಾಗಡಿಯಲ್ಲಿನ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ರಾಜ್ಯ ಕಂಡ ಶ್ರೇಷ್ಠ ಸಾಹಿತಿ, ದಮನಿತರ ದನಿಯಾಗಿದ್ದ ಪ್ರೊ. ಸಿದ್ದಲಿಂಗಯ್ಯರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಕಲಾಗ್ರಾಮದಲ್ಲಿ ನೆರವೇರಿಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಶ್ರೀ@BSYBJPರವರು ಸ್ಪಂದಿಸಿದ್ದು, ನಾಳೆ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ.ನಾಡಿನ ನೆಚ್ಚಿನ ಸಾಹಿತಿಗೆ ಗೌರವ ನಮನ ಸಲ್ಲಿಸೋಣpic.twitter.com/x8EuYhhnDp
— B Sriramulu (@sriramulubjp)June 11, 2021

ಶ್ರೀರಾಮುಲು ಟ್ವೀಟ್​ಅಂತ್ಯಸಂಸ್ಕಾರ ಕುರಿತು ಟ್ವೀಟ್​ ಮಾಡಿರುವ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಿದ್ದಲಿಂಗಯ್ಯರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಕಲಾಗ್ರಾಮದಲ್ಲಿ ನೆರವೇರಿಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸ್ಪಂದಿಸಿದ್ದು, ನಾಳೆ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ ಎಂದಿದ್ದಾರೆ.
ಕರೊನಾದಿಂದ ಕವಿ ಡಾ. ಸಿದ್ದಲಿಂಗಯ್ಯ ವಿಧಿವಶ: ಕಳಚಿತು ಸಾಹಿತ್ಯ ಲೋಕದ ಮತ್ತೊಂದು ಕೊಂಡಿ

ಪದ್ಮಶ್ರೀ ಪುರಸ್ಕೃತ ಡಾ.ಅಶೋಕ್ ಪನಗರಿಯಾ ನಿಧನ

ಅಕ್ರಮ ವಾಸದೊಂದಿಗೆ ಕಿಡ್ನಿ ಮಾರಾಟದ ಸೋಗಲ್ಲಿ ವಂಚನೆ : ನೈಜೀರಿಯಾ ಪ್ರಜೆ ಪೊಲೀಸರ ಬಲೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 10 =
Remember me
