ಸಿದ್ದಾಪುರ(ಉತ್ತರ ಕನ್ನಡ):ಜಲಪಾತ ಕಣ್ತುಂಬಿಕೊಂಡ ಖುಷಿಯಲ್ಲಿ ಮನೆಗೆ ವಾಪಸ್​ ಬರುತ್ತಿದ್ದ ಮೂವರು ಮಾರ್ಗಮಧ್ಯೆ ಜಲಸಮಾಧಿಯಾದ ಘಟನೆ ಹೆಗ್ಗರಣಿ ಗ್ರಾಪಂ ವ್ಯಾಪ್ತಿಯ ಕೋಡನಮನೆ ಸಮೀಪ ಸಂಭವಿಸಿದೆ.
ಬುಧವಾರ ಮಧ್ಯಾಹ್ನ ಭಾರಿ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಶಿರಸಿ – ಸಿದ್ದಾಪುರ ನಡುವೆಯ ಕೊಡನಮನೆ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಕೋಡನಮನೆ ಸೇತುವೆಯಿಂದ ಸುಮಾರು 300 ಮೀಟರ್ ಆಚೆ ಕಾರು ನೀರಿನೊಳಗೆ ಮುಳುಗಿರುವುದನ್ನು ಗುರುವಾರ ಮಧ್ಯಾಹ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಕಾಲುವೆಗೆ ಬಿದ್ದ ಒಂದು ದಿನದ ಬಳಿಕ ಪತ್ತೆಯಾದ ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿದ್ದ ಹೆಣಗಳನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದಿದ್ದಾರೆ. ಕಾರಿನಲ್ಲಿ ಐವರು ಇದ್ದರೆಂದು ತಿಳಿದು ಬಂದಿದ್ದು, ರಾಯನಾಳ ನಿವಾಸಿ ನಿಶ್ಕಿಲ್ ಹಿರೇಮಠ (22), ಶಾಂತಿನಗರ ಚಚ್೯ ಬಳಿಯ ನಿವಾಸಿ ರೋನ್ವಿತ್ ಶೋಭಿತ (20), ಹೊಸೂರಿನ ಸುಷ್ಮಾ ಸಾಗರ (19) ಮೃತದೇಹ ಪತ್ತೆಯಾಗಿದೆ.

ಬೆಂಗಳೂರು ನಿವಾಸಿ ಅಕ್ಷತಾ ಹಿರೇಮಠ (22) ದೇಹ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸಿದ್ದಾಪುರ ಪೊಲೀಸರು ಅಕ್ಷತಾ ದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹಳ್ಳಕ್ಕೆ ಬಿದ್ದದ್ದು ಧಾರವಾಡ ನೋಂದಣಿ ಸಂಖ್ಯೆಯ (ಕೆಎ 63 ಎಂ 2651) ಸ್ವಿಫ್ಟ್ ಕಾರು.
ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ತಲೆ-ದೇಹ ಇಬ್ಭಾಗ!

ನೊಂದ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ? ನಾವು ಬೇಲ್​ ಪಡೆಯಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

ಡಿ.ಕೆ.ಶಿವಕುಮಾರ್​ಗೆ ಸಿದ್ದರಾಮಯ್ಯ ಮೇಲೆ ಹೊಟ್ಟೆಉರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eight =
Remember me
