ಬೆಂಗಳೂರು:ವಿಧಾನ ಮಂಡಲ ಅಧಿವೇಶನ ಆರಂಭವಾದ ಮೊದಲ ದಿನವಾದ ಸೋಮವಾರ ಗುರು-ಶಿಷ್ಯರು ಮುಖಾಮುಖಿಯಾಗಿ ಕೆಲಕಾಲ ಚರ್ಚಿಸಿದ್ದು ಇತರರನ್ನು ಗಮನ ಸೆಳೆಯಿತು. ವಿಧಾನಸೌದದ ಮೊಗಸಾಲೆಯ ಕ್ಯಾಂಟೀನ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆರ್​.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನರ ಮಾತಿನ ಲಹರಿ ಹೀಗಿತ್ತು.
ಮುನಿರತ್ನ:ನಮ್ಮ ದೇವರಿಗೆ ನಮಸ್ತೆ…ಸಿದ್ದರಾಮಯ್ಯ:ಏನಪ್ಪ ಮಂತ್ರಿ ಯಾವಾಗ ಆಗೋದು? ಬಾ ಕಾಫಿ ಕುಡಿಯೋಣ…(ಪಕ್ಕಕ್ಕೆ ಮುನಿರತ್ನರನ್ನು ಕೂರಿಸಿಕೊಂಡರು)ಮುನಿರತ್ನ:ಮುಖ್ಯಮಂತ್ರಿ ಅವರು ಮಾಡಿದಾಗಸಿದ್ದರಾಮಯ್ಯ:ನಿನಗೆ ಬೇಗ ಆಗಬೇಕು ಅಂತ ಆಸೆ ಇಲ್ವೇ?ಮುನಿರತ್ನ:ನನ್ನ ಜೀವನದ ಅಕೌಂಟ್​ನಲ್ಲಿ ಮಿನಿಸ್ಟರ್ ಆಗಬೇಕು ಅಂತ ಬರೆದಿದ್ರೆ ಲಾಕ್ ಒಪನ್ ಆಗುತ್ತೆ. ನಾನು ಮಾಡಿ ಅಂತ ಒತ್ತಾಯ ಮಾಡಲ್ಲಸಿದ್ದರಾಮಯ್ಯ:ಮಾತು ಕಲ್ತಿದ್ದೀಯಾ.. ಸರಿ ಅಷ್ಟು ಲೀಡ್ ಹೇಗೆ ಬಂತು?ಮುನಿರತ್ನ:ಕಾಂಗ್ರೆಸ್ ತಂತ್ರಗಾರಿಕೆ ಕಾರಣಸಿದ್ದರಾಮಯ್ಯ:ಸುಮ್ಮನಿರು ನಾನು ಸಿಎಂ ಆಗಿದ್ದಾಗ ಕೊಟ್ಟ ಅನುದಾನ…ಮುನಿರತ್ನ:ಅದರಲ್ಲಿ ನನ್ನ ತಕರಾರು ಇಲ್ಲ. ನೀವು ಕೊಟ್ಟ ಅನುದಾನ ನಾನು ಮರೆಯಲ್ಲ…ಸಿದ್ದರಾಮಯ್ಯ:ಸರಿ ಒಳ್ಳೆಯದಾಗ್ಲಿ.. ಬೇಗ ಮಿನಿಸ್ಟರ್ ಆಗುಮುನಿರತ್ನ:ಅದು ಯಡಿಯೂರಪ್ಪ ಕೃಪೆ ತೋರಿಸಿದ್ರೆ ಆಗುತ್ತೆ ಸರ್. ಸದ್ಯ ನಾನು ಶಾಸಕನಾಗಿ ಕೆಲಸ ಮಾಡ್ತೀನಿಸಿದ್ದರಾಮಯ್ಯ:ಸೋಮಶೇಖರ್, ಬೈರತಿ ಆಗಿದ್ದಾರೆ ನೀನು ಬೇಗ ಆಗುಮುನಿರತ್ನ:ಅದು ಸಿಎಂ ಕೈಯಲ್ಲಿದೆ ಸರ್ಗುರು-ಶಿಷ್ಯರ ಮಾತುಕತೆ ವೇಳೆ ಯು.ಟಿ. ಖಾದರ್, ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ, ಈಶ್ವರ್ ಖಂಡ್ರೆ ಕೂಡ ಉಪಸ್ಥಿತರಿದ್ದರು.(ದಿಗ್ವಿಜಯ ನ್ಯೂಸ್​)
ಗ್ರಾಪಂ ಚುನಾವಣೆ: ಅವಿರೋಧ ಆಯ್ಕೆಗೆ 25 ಲಕ್ಷ ರೂ. ಆಫರ್​! ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
