ಮೈಸೂರು:ನಾವು ಹಿಂದೆ ಬಿಜೆಪಿಯವರ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕಿದೆ. ಹೀಗಿರುವಾಗ ಗುತ್ತಿಗೆದಾರರ ಬಿಲ್​ ಪಾವತಿಗೆ ಆತುರಪಟ್ಟರೆ ಹೇಗೆ, ತನಿಖೆಯಾಗದೆ ಬಾಕಿ ಮೊತ್ತವನ್ನು ಪಾವತಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್​ ಪಡೆದಿರುವ ಬಿಜೆಪಿಯವರಿಗೆ ನಮ್ಮ ವಿರುದ್ಧ ಹೋರಾಟ ನಡೆಸುವ ನೈತಿಕತೆ ಇಲ್ಲ. ಅವರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.
ಶೇ. 40ರಷ್ಟು ಕಮಿಷನ್​ ಬಗ್ಗೆ ತನಿಖೆ ನಡೆಸದೆ ಗುತ್ತಿಗೆದಾರರಿಗೆ ಹೇಗೆ ಬಿಲ್ ಪಾವತಿಸಲು ಸಾಧ್ಯ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್​ಐಟಿಗೆ ಸೂಚಿಸಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ಹಾಗೂ ಕಾಮಗಾರಿಗಳಲ್ಲಿ ಲೋಪ ಎಸಗಿರುವವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ತಮ್ಮ ಗ್ರಾಮದ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಯುವಕರಿಗೆ ಚಾಕು ಇರಿತ
ಕಾವೇರಿ ನದಿ ನೀರಿನ ಕುರಿತು ತಮಿಳುನಾಡು ಸರ್ಕಾರ ತಗಾದೆ ಪ್ರಶ್ನಗೆ ಉತ್ತರಿಸಿದ ಸಿಎಂ ಈ ಬಾರಿ ನಮ್ಮಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜೂನ್​ ತಿಂಗಳಿಗೆ ನಿಗದಿಪಡಿಸಿದ ನೀರನ್ನು ನಾವು ಬಿಟ್ಟಿಲ್ಲ. ಮಳೆ ಕಡಿಮೆಯಾಗಿರುವುದರಿಂದ ನಮ್ಮಲ್ಲಿ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿ ಕುರಿತು ತಮಿಳುನಾಡು ಸರ್ಕಾರ ಅರಿಯಬೇಕಿದೆ.
ಈ ಬಾರಿ ಸರಿಯಾಗಿ ಮಳೆಯಾಗದೆ ನಮ್ಮಲ್ಲಿ ತೊಂದರೆಯಾಗಿದೆ. ಕೇರಳ ಹಾಗೂ ಕೊಡಗಿನ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ನಮ್ಮ ಜಲಾಶಯಗಳಿಗೆ ಒಳಹರಿವು ಕುಂಠಿತಗೊಂಡಿದೆ. ಹೆಚ್ಚುವರಿ ನೀರು ಬಂದಾಗಲೆಲ್ಲಾ ತಮಿಳುನಾಡಿಗೆ ನಾವು ಹರಿಸಿದ್ದೇವೆ. ಈ ಬಾರಿ ಕೊಡಲಾಗಿಲ್ಲ. ನಮ್ಮ ಪರಿಸ್ಥಿತಿ ಹಾಗೂ ಬೆಳೆಯನ್ನೂ ನಾವು ಮೊದಲು ನೋಡಬೇಕಿದೆ.
ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನೂ ನೇಮಕ ಮಾಡುವ ಕುರಿತು ಪ್ರತಿಕ್ರಿಯಿಸಿ ಈ ಸಂಬಂಧ ಸಮಿತಿ ಒಂದನ್ನೂ ರಚಿಸಲಾಗಿದ್ದು, ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶಾಸಕರಿಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಕೊಡಬೇಕಿದೆ ಎಂಬುದರ ಕುರಿತು ಸಮಿತಿ ನೀಡುವ ವರದಿ ಆಧರಿಸಿ ನಿರ್ಧರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
