ಬೆಂಗಳೂರು:ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಶಾಶ್ವತವಾಗಿ ಗೂಟ ಹೊಡೆದುಕೊಂಡಿರಲ್ಲ. ನೀವಿರೋದು ಶಾಂತಿ ಕಾಪಾಡೋಕೆ. ಅದನ್ನ ಬಿಟ್ಟು ಬಿಜೆಪಿ ಮಾತು ಕೇಳಿ ಕಾನೂನು ದುರುಪಯೋಗ ಮಾಡಿಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಹ್ಮಮಿೊಂಡಿದ್ದ ಪ್ರತಿಭಟನೆಯಲ್ಲಿ ಮಾತ ನಾಡಿ, ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ, ಕಾಂಗ್ರೆಸ್ ಪಕ್ಷದವರನ್ನು ಗುರುತಿಸಿ ಕೇಸ್ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಉಗ್ರವಾದ ಹೇಳಿಕೆ ಕೊಟ್ಟರು, ಅವರ ಮೇಲೆ ಏಕೆ ದೇಶದ್ರೋಹದ ಕೇಸ್ ಹಾಕಲಿಲ್ಲ? ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಕೆಟ್ಟದಾಗಿ ತೋರಿಸುತ್ತಾರೆ. ಅಶೋಕ್, ಅನಂತಕುಮಾರ್ ಹೆಗಡೆ, ಸಿ.ಟಿ. ರವಿ ಮೇಲೆ ಯಾವ ಕೇಸ್ ಹಾಕಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರು.
ಪ್ರತಾಪಸಿಂಹ, ಕಟೀಲ್ ಮೇಲೆ ಕೇಸ್ ಹಾಕಿದ್ದೀರಾ? ಸಂತೋಷ್ ಮೇಲೆ ಯಾವ ಕೇಸ್ ಹಾಕಿದ್ದೀರಾ? ಇದರ ಬಗ್ಗೆ ಮೊದಲು ಪೊಲೀಸರು ಹೇಳಲಿ. ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಟೀಕಿಸಿದರು.
ಒಂದು ಹೆಣ್ಣುಮಗು ನಾಟಕ ಮಾಡಿದೆ. ‘ದಾಖಲೆ ಕೇಳಿದರೆ, ನಾನು ಸ್ಮಶಾನಕ್ಕೆ ಹೋಗಿ ಬಗೆದು ತರಲಾ? ಕೇಳೋಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಅಂದಿದ್ದಾಳೆ, ಅದು ಮೋದಿಗೆ ಹೇಳಿದ್ದಾ? ಆ ಮಗುವಿನ ಮೇಲೆ ಕೇಸ್ ಹಾಕಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ಎಷ್ಟಲ್ಲ ವಿಡಂಬನೆ ಮಾಡಿದ್ದರು ಅವರ ಮೇಲೆ ಯಾರೂ ಕೇಸ್ ಹಾಕಲಿಲ್ಲ ಎಂದರು.
ನಿಜವಾದ ದೇಶದ್ರೋಹ ಮಾಡುತ್ತಿರುವವರು ಬಿಜೆಪಿಯವರು. ಮಂಗಳೂರಿನಲ್ಲಿ ಗೋಲಿಬಾರ್ ಆಯಿತು, ಅದಕ್ಕೆ ನಮ್ಮ ಶಾಸಕ ಖಾದರ್ ಮೇಲೆ ಕೇಸ್ ಹಾಕಿದ್ದಾರೆ. ಮೈಸೂರಿನಲ್ಲಿ ಫ್ರೀ ಕಾಶ್ಮೀರ ಅಂತ ಹೆಣ್ಣುಮಗಳು ಹೇಳಿದ್ದಕ್ಕೆ ದೇಶದ್ರೋಹ ಕೇಸ್, ಬೀದರ್ ಶಾಹೀನ್ ಶಾಲೆ ಮೇಲೆ ದೇಶದ್ರೋಹ ಕೇಸ್, ನಾಟಕ ಮಾಡಿದ್ದಕ್ಕೆ ದೇಶದ್ರೋಹ ಕೇಸ್ ಹಾಕಿದ್ದಾರೆ ಎಂದು ಹೇಳಿದರು.
ಮಹಮದ್ ನಲಪಾಡ್ ಕಿರಿಕಿರಿ:ಫ್ರೀಡಂಪಾರ್ಕ್​ನಿಂದ ಪ್ರತಿಭಟನೆ ನಡೆಯುತ್ತಿದ್ದ ಆರ್.ಸುಬ್ಬಣ್ಣ ವೃತ್ತದವರೆಗೆ ನಡೆದುಬಂದ ನಲಪಾಡ್ ಹಾಗೂ ಅವರ ಸಹವರ್ತಿಗಳು ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಿಲ್ಲ. ಹತ್ತಾರು ವಾಹನಸವಾರರು ಎಷ್ಟೇ ಹಾರ್ನ್ ಮಾಡಿದರೂ ರಸ್ತೆ ಬಿಟ್ಟು ಕದಲಿಲ್ಲ. ವಾಹನಸವಾರರು ಶಪಿಸುತ್ತ ಸಾಗಿದರು. ಬಳಿಕ ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ನಲಪಾಡ್, ಸಿದ್ದರಾಮಯ್ಯ ಪಕ್ಕದಲ್ಲಿ ಮುಖ ತೂರಿಸಿ ಕಾರ್ಯಕರ್ತರಿಗೆ ದರ್ಶನ ಕೊಡಲು ಪ್ರಯತ್ನಿಸಿದ್ದು ಕಾಣಿಸಿತು.
ಕಾಂಗ್ರೆಸ್ ನಾಯಕರ ಬಂಧನ:ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು. ಆರ್.ಸುಬ್ಬಣ್ಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಕಾರ್ಯಕರ್ತರೊಂದಿಗೆ ಸೇರಿ ಸಿಎಂ ಮನೆಯತ್ತ ಹೊರಟಾಗ ಪೊಲೀಸರು ವಶಕ್ಕೆ ಪಡೆದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯದಲ್ಲಿ ನರಹಂತಕ ಸರ್ಕಾರ ಇತ್ತು. ಆಗ 24 ಜನರ ಕಗ್ಗೊಲೆಗಳಾಗಿದ್ದವು. ಹಲವಾರು ಹಿಂದು ಕಾರ್ಯಕರ್ತ ರನ್ನು ಹತ್ಯೆ ಮಾಡಲಾಯಿತು. ಬಿಎಸ್​ವೈ ಜನರ ಕಣ್ಣೀರು ಒರೆಸುವ ಮುಖ್ಯಮಂತ್ರಿ. ಎಚ್​ಡಿಕೆ ಕಣ್ಣೀರು ಸುರಿಸುತ್ತಿದ್ದರು, ಸಿದ್ದರಾಮಯ್ಯ ಜನರಿಗೆ ಕಣ್ಣೀರು ಬರಿಸುತ್ತಿದ್ದರು.
| ನಳಿನ್​ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಭೀತಿಯ ವಾತಾವರಣ ಸೃಷ್ಟಿಸುತ್ತಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾತ ನಾಡಿದವರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿ ಅವರ ದನಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ.
| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
