ಬೆಂಗಳೂರು:ಆದರ್ಶ ಪುರುಷ ಶ್ರೀರಾಮನು ಹಾಕಿಕೊಟ್ಟ ಪ್ರೀತಿ, ಸಹಾನುಭೂತಿ, ಅಂತಃಕರಣ, ನ್ಯಾಯಪರಿಪಾಲನೆಯ ಹಾದಿಯಲ್ಲಿ ಮುನ್ನಡೆಯೋಣ. ಪಾನಕ, ಕೋಸಂಬರಿಯ ಜೊತೆ ಸ್ನೇಹ, ಸೌಹಾರ್ದತೆ ಮಿಳಿತಗೊಳ್ಳಲಿ, ಮನುಷ್ಯಪ್ರೇಮದ ಬೆಳಕು ಜಗದಗಲ ಬೆಳಗಲಿ ಎಂದು ಟ್ವಿಟರ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನತೆಗೆ ರಾಮನವಮಿಯ ಶುಭಾಶಯ ತಿಳಿಸಿದ್ದರು.
ಸಿದ್ದರಾಮಯ್ಯ ಮಾಡಿದ್ದ ಟ್ವೀಟ್​ಗೆ ರಾಜ್ಯ ಬಿಜೆಪಿ, ಪ್ರಭು ಶ್ರೀ ರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುವ, ರಾಮ ಮಂದಿರದ ವಿರುದ್ಧವೇ ಸಮರ ಸಾರಿದ, ರಾಮರಾಜ್ಯವನ್ನು ಟೀಕಿಸುವ ಅಲ್ಪರ ಗುಂಪಿನ ‘Poster Boy’ ಸಿದ್ದರಾಮಯ್ಯ ಎಂದು ಬರೆದುಕೊಂಡು ಟ್ವೀಟ್ ಮಾಡಿತ್ತು. ಬಿಜೆಪಿ ಸಿದ್ದರಾಮಯ್ಯ ಅವರನ್ನು ಪೋಸ್ಟರ್ ಬಾಯ್ ಎಂದು ಕರೆದಿರುವುದು ಸಾಕಷ್ಟು ಟೀಕೆಗೆ ಅವಕಾಶ ಮಾಡಿ ಕೊಟ್ಟಿತ್ತು.ಇದನ್ನೂ ಓದಿ:ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು! ಕಠಿಣ ಕ್ರಮಕ್ಕೆ ಮುಂದಾದ ರೈಲ್ವೇ ಇಲಾಖೆ
ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು.ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು.ನನ್ನ ರಾಮ ಅಂತಃಕರಣ ಸ್ವರೂಪಿ,ನಿಮಗೆ ರಾಮ ಚುನಾವಣಾ ಸರಕು.ಶ್ರೀರಾಮನೇ ನಿಮಗೆ ಸದ್ಬುದ್ಧಿ ನೀಡಲಿ@BJP4Karnataka.pic.twitter.com/Au0QxsGBpM— Siddaramaiah (@siddaramaiah)March 30, 2023
ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು.ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು.ನನ್ನ ರಾಮ ಅಂತಃಕರಣ ಸ್ವರೂಪಿ,ನಿಮಗೆ ರಾಮ ಚುನಾವಣಾ ಸರಕು.ಶ್ರೀರಾಮನೇ ನಿಮಗೆ ಸದ್ಬುದ್ಧಿ ನೀಡಲಿ@BJP4Karnataka.pic.twitter.com/Au0QxsGBpM
ಇದೀಗ ಬಿಜೆಪಿ ತನ್ನ ವಿರುದ್ಧ ಮಾಡಿರುವ ಟೀಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು. ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು ಎಂದು ಹೇಳಿದ್ದಾರೆ.
ಅಲ್ಲದೆ ನನ್ನ ರಾಮ ಅಂತಃಕರಣ ಸ್ವರೂಪಿ. ನಿಮಗೆ ರಾಮ ಎಂಬುದು ಚುನಾವಣಾ ಸರಕು. ರಾಜ್ಯ ಬಿಜೆಪಿಗೆ ಶ್ರೀರಾಮನೇ ಸದ್ಬುದ್ಧಿ ನೀಡಲಿ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ.ಇದನ್ನೂ ಓದಿ:ಸಿದ್ದರಾಮಯ್ಯ ಜೀವನಾಧರಿತ ಸಿನಿಮಾದ ಪೋಸ್ಟರ್ ರಿಲೀಸ್‌‌ ; ಲೀಡರ್ ರಾಮಯ್ಯ ಚಿತ್ರದಲ್ಲಿದೇ ಲವ್ ಸ್ಟೋರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
