ಬೆಂಗಳೂರು:ಗೃಹ ಸಚಿವನಾಗಿ ನಾನು ಹೇಗೆ ಕೆಲಸ ಮಾಡಬೇಕು, ಮಾಡುತ್ತಿರುವ ಬಗೆ, ಜವಾಬ್ದಾರಿ ನಿರ್ವಹಣೆ ಕುರಿತು ಪ್ರತಿಪಕ್ಷ ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.
ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಹೋಮ್ ಮಿನಿಸ್ಟರ್ ಯೂಸ್ ಲೆಸ್ ಫೆಲೋ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರತಿಪಕ್ಷ ನಾಯಕ ಕೆಲವೊಮ್ಮೆ ಇಂತಹ ಪದಗಳನ್ನು ಬಳಸುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಅಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಸತ್ಯಾಂಶ ಪರಿಶೀಲನೆಪಿಎಸ್ ಐ ನೇಮಕ ಪರೀಕ್ಷಾ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ಅವರ ಬಳಿ ಸಿಐಡಿ ತನಿಖಾಧಿಕಾರಿ ಮೂರು ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟ ವಿಡಿಯೋದ ಸತ್ಯಾಂಶ ಪರಿಶೀಲಿಸಲಾಗುವುದು ಎಂದರು. ಒಬ್ಬ ಆರೋಪಿ ಹೇಳಿಕೆಯನ್ನು ಎಷ್ಟರಮಟ್ಟಿಗೆ ನಂಬಬಹುದು ಎನ್ನುವುದು ಪ್ರಶ್ನಾರ್ಹ. ಸಿಐಡಿ ಅಧಿಕಾರಿ ಅಥವಾ ಐಪಿಎಸ್ ಅಧಿಕಾರಿಯಿರಲಿ ಲೋಪ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಕಾಲದವನಲ್ಲಸ್ಯಾಂಟ್ರೋ ರವಿ ಬಿಜೆಪಿ ಆಡಳಿದಲ್ಲಿ ಹುಟ್ಟಿಕೊಂಡಿಲ್ಲ. ಕಳೆದ 20 ವರ್ಷಗಳಿಂದ ಕಾಂಗ್ರೆಸ್, ಜೆಡಿಎಸ್ ನವರು ಪೋಷಿಸಿದ್ದಾರೆ. ಅಂತಹವರು ಕೆಲ ಸಂಪರ್ಕದಲ್ಲಿದ್ದಾರೆ ಎಂದು ಎಚ್ ಡಿಕೆ ಹೇಳಿಕೆಯನ್ನು ಗಮನಿಸಿರುವೆ. ಸಮಾಜದಲ್ಲಿ ಅಂತಹವರು ಇರಬಹುದು. ಆದರೆ ಈ ಸರ್ಕಾರದಲ್ಲಿಲ್ಲ. ಕುಮಾರಸ್ವಾಮಿ ಬೆಳೆಸಿದವರು, ಕಾಂಗ್ರೆಸ್​ನವರು ಬೆಳೆಸಿದವರು ಇರಬಹುದು ಎಂದು ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ತುಮಕೂರಿಗೆ ಭೇಟಿ ನೀಡುವರು ಎಂದಿದೆ.ಇನ್ನೂ ಅಂತಿಮವಾಗಿಲ್ಲ.ಪ್ರಧಾನಿ ಮೋದಿ, ಅಮಿತ್ ಷಾ ಸೇರಿ ರಾಷ್ಟ್ರೀಯ ನಾಯಕರು ರಾಜ್ಯದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬರಲಿದ್ದಾರೆ ಎಂದರು.
ಕೆ.ಆರ್​. ಮಾರುಕಟ್ಟೆಯಲ್ಲಿ ನೋಟಿನ ಮಳೆ! ಮುಗಿಬಿದ್ದ ಜನರು, ಕುತ್ತಿಗೆಯಲ್ಲಿ ಗಡಿಯಾರ ಹಾಕಿಕೊಂಡವನ ಹುಚ್ಚಾಟ

1959ರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

ಸ್ವಲ್ಪ ದಿನದಲ್ಲೇ ನಮ್ಮ ಹೆಸರು ಕೂಡ ಹೇಳ್ತಾರೆ! ಭಾರೀ ಸಂಚಲನ ಮೂಡಿಸಿದ ಭವಾನಿ ರೇವಣ್ಣ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
