ಬೆಂಗಳೂರು:ಕೋವಿಡ್​ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುತ್ತಲೇ ಇರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಆಗ್ರಹಿಸಿದ್ದಾರೆ.
ವಿಡಿಯೋ ಮೂಲಕ ಹಲವು ಪ್ರಶ್ನೆಗಳನ್ನು ರಾಜ್ಯಸರ್ಕಾರಕ್ಕೆ ಕೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ’ ಎಂದು ಜರಿದಿದ್ದಾರೆ. ಕರೊನಾ ನಿಯಂತ್ರಣದಲ್ಲಿ‌ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಿದ್ದಾರೆ.ಇದನ್ನೂ ಓದಿರಿಸ್ಮಶಾನದಲ್ಲಿ ‘ಫಾರ್ಚುನರ್​’ ಏರಲಿದ್ದಾರೆ ಜಾರಕಿಹೊಳಿ
ಕರೊನಾ ನಿಯಂತ್ರಿಸುವಲ್ಲಿ ಪ್ರಾಮಾಣಿಕವಾಗಿ ರಾಜ್ಯ ಸರ್ಕಾರ ಕೆಲಸ ಮಾಡಿದೆ ಎಂದಾದರೆ ಆ ಬಗ್ಗೆ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿರುವ ಸಿದ್ದರಾಮಯ್ಯ, ಹಲವು ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
1. ಕರೊನಾ ಸೋಂಕು ಬಂದಾಗಿನಿಂದ ಇದುವರೆಗೂ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು? ಕೇಂದ್ರ ಸರ್ಕಾರ ಎಷ್ಟು ನೀಡಿದೆ?2 ಯಾವ ಯಾವ ಇಲಾಖೆ, ಯಾವ ಬಾಬತ್ತಿಗೆ ಎಷ್ಟು ಹಣ ಖರ್ಚು ಮಾಡಿದೆ?3. ಪಿಪಿಇ ಕಿಟ್, ಟೆಸ್ಟ್ ಕಿಟ್, ಗ್ಲೌಸ್​​, ಸ್ಯಾನಿಟೈಸರ್, ಥರ್ಮಲ್​ ಸ್ಕ್ಯಾನರ್​, ಕಿಯೋಸ್ಕ್​ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು? ನೀವು ಪ್ರತಿಯೊಂದನ್ನು ಯಾವ ದರದಲ್ಲಿ, ಯಾವ ಕಂಪನಿಗಳಿಂದ ಖರೀದಿಸಿದ್ದೀರಿ?4. ಈವರೆಗೆ ಎಷ್ಟು ಫುಡ್​ ಕಿಟ್​, ಎಷ್ಟು ಫುಡ್​ ಪ್ಯಾಕೇಟ್​ ಕೊಟ್ಟೀದ್ದೀರಿ? ಯಾರಿಗೆ ಕೊಟ್ಟಿದ್ದೀರಿ? ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ? ಆಹಾರ ತಯಾರಿಸಿಕೊಟ್ಟವರು ಯಾರು? ತಾಲೂಕುವಾರು, ವಾರ್ಡ್​ವಾರು ಲೆಕ್ಕ ಕೊಡಿ. ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್​ ಕಿಟ್​ ಕೊಟ್ಟಿದ್ದೀರಿ, ಏನೇನು ಕೊಟ್ಟಿದ್ದೀರಿ? ಪ್ರತಿ ಕಿಟ್​ಗೆ ಖರ್ಚಾದ ಹಣ ಎಷ್ಟು?5. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದ ಪ್ಯಾಕೇಜ್​ಗಳು ಯಾವುವು? ಇದುವರೆಗೆ ಯಾವ ವೃತ್ತಿಯವರಿಗೆ, ಯಾವ್ಯಾವ ಸಮುದಾಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?6. ಕರೊನಾ ಸಂತ್ರಸ್ತರ ಆರೈಕೆಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ? ಈ ಎಲ್ಲದರ ಸಂಪೂರ್ಣ ಲೆಕ್ಕ ಕೊಡಿ ಎಂದು ಆಗ್ರಹಿಸಿರುವ ಸಿದ್ದರಾಮಯ್ಯ, ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ವಿಡಿಯೋ ಅಭಿಯಾನ ಶುರು ಮಾಡಿದ್ದಾರೆ.
https://www.facebook.com/VVani4U/videos/898517767324391/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 2 =
Remember me
