ಬೆಂಗಳೂರು:ಧರ್ಮಾಧಾರಿತ ರಾಜಕೀಯ ಬಿಟ್ಟು ಬಿಡಿ. ಅಭಿವೃದ್ಧಿ ಕಾರ್ಯಗಳ ಮೇಲೆ ಚರ್ಚೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸವಾಲೆಸೆದಿದ್ದಾರೆ.
ಟಿಪ್ಪು ಸುಲ್ತಾನ್-ಅಬ್ಬಕ್ಕ, ಗಾಂಧಿ-ಗೋಡ್ಸೆ ಚರ್ಚೆ ಬಿಟ್ಟು ಬಿಡಿ. ಅಭಿವೃದ್ಧಿ ಮೇಲೆ ಚರ್ಚೆ ಮಾಡೋಣ ಬನ್ನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವರೊಬ್ಬರು ಸಿದ್ದರಾಮಯ್ಯ ಅವರನ್ನು ಮುಗಿಸಿ ಬಿಡಿ ಎಂದು ಹೇಳುತ್ತಾರೆ. ನಾನು ಇದಕ್ಕೆಲ್ಲ ಹೇದರಲ್ಲ. ಹತಾಶೆಯಿಂದ ಬಿಜೆಪಿಯವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:VIDEO| ‘ಅಂಬಾರಿ ಉತ್ಸವ’ ಸ್ಲೀಪರ್ ಬಸ್​ಗಳ ಲೋಕಾರ್ಪಣೆ; ಏನಿದರ ವೈಶಿಷ್ಟ್ಯ? ಇಲ್ಲಿದೆ ಮಾಹಿತಿ…
ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸುತ್ತಿದ್ದಂತೆ, ಅಶ್ವಥ್ ನಾರಾಯಣ್ ನೀಡಿರುವುದು ಪ್ರಚೋದನೆಯ ಹೇಳಿ ಅಲ್ಲವಾ? ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬಹುದಾಗಿತ್ತು. ನಿಮ್ಮ ಗೃಹ ಇಲಾಖೆ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಾ ಇಲ್ಲ. ನೀವೊಬ್ಬರು ಒಳ್ಳೆಯ ಮನುಷ್ಯ ಆಗಿರಬಹುದು. ಆದರೆ ಇಲಾಖೆ ನಡೆಸಲು ಅಸಮರ್ಥರಾಗಿದ್ದೀರಿ. ಒಂದು ವೇಳೆ ನೀವು ಸಮರ್ಥರೇ ಆಗಿದ್ದಲ್ಲಿ ಅಶ್ವಥ್ ನಾರಾಯಣ್ ಮೇಲೆ ಮೊದಲು ಪ್ರಕರಣ ದಾಖಲಿಸಿ ಎಂದು ಸಿದ್ದರಾಮಯ್ಯ ಸವಾಲೆಸೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
