ಕೊಪ್ಪಳ/ಹುಬ್ಬಳ್ಳಿ:ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಾಯುಯಾನ ಕಂಟಕ ಇರಬಹುದೇನೋ ಎನ್ನುವಂಥ ಪ್ರಕರಣಗಳು ಒಂದರ ಹಿಂದೊಂದರಂತೆ ನಡೆದಿವೆ. ನಿನ್ನೆಯಷ್ಟೇ ವಿಮಾನ ಪ್ರಯಾಣದಲ್ಲಿ ತೊಂದರೆ ಅನುಭವಿಸಿದ್ದ ಅವರು ಕಾಕತಾಳೀಯ ಎಂಬಂತೆ ಇಂದು ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುವಾಗ ತೊಂದರೆ ಎದುರಿಸುವಂತಾಗಿದೆ.
ಇದನ್ನೂ ಓದಿ:ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ
ಸಿದ್ದರಾಮಯ್ಯ ಅವರು ಇಂದು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸುವಾಗ ಅದು ನಿಗದಿತ ಸ್ಥಳದಲ್ಲಿ ಇಳಿಯದೇ ಮುಂದಕ್ಕೆ ಹೋಗಿದೆ. ದಾರಿ ತಪ್ಪಿದಂತಾದ ಹೆಲಿಕಾಪ್ಟರ್​ ಸುಮಾರು ಹತ್ತು ನಿಮಿಷಗಳ ಕಾಲ ಸುತ್ತಾಡಿ ಮರಳಿದೆ. ಸಂಪರ್ಕದ ಕೊರತೆ ಹಿನ್ನೆಲೆಯಲ್ಲಿ ಗುರಿ ಬಿಟ್ಟು ಮುಂದೆ ಸಾಗಿದ ಹೆಲಿಕಾಪ್ಟರ್ ಕೊನೆಗೂ ಪೋನ್ ಮೂಲಕ ಮಾಜಿ ಸಚಿವ ಶಿವರಾಜ ತಂಗಡಗಿ ನೀಡಿದ್ದ ಮಾರ್ಗದರ್ಶನಂತೆ ನಿಗದಿತ ಸ್ಥಳದಲ್ಲಿ ಇಳಿಯಿತು.
ಇದನ್ನೂ ಓದಿ:ಭಾರಿ ಅನಾಹುತದಿಂದ ಪಾರಾದ ಸಿಎಂ, ಸಚಿವ ಸುಧಾಕರ್: ಸ್ವಲ್ಪ ಎಡವಟ್ಟಾಗಿದ್ದರೂ ಹೆಲಿಕಾಪ್ಟರ್ ಕಟ್ಟಡಕ್ಕೆ ಡಿಕ್ಕಿ?!
ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ವಿಮಾನ ಪ್ರಯಾಣ ಸಂದರ್ಭ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿತ್ತು. ಹತ್ತು ನಿಮಿಷಗಳಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಏಕಾಂಗಿ ಕುಳಿತುಕೊಳ್ಳುವಂತಾಗಿತ್ತು. ಅವರಿದ್ದ ವಿಮಾನ ಬೆಳಗಾವಿ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗುವ ಬದಲು ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಹವಾಮಾನದ ವೈಪರೀತ್ಯದ ಹಿನ್ನೆಲೆಯಲ್ಲಿ ಹೀಗಾಗಿತ್ತು ಎನ್ನಲಾಗಿದೆ. ಬಳಿಕ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಯಮಕನಮರಡಿಗೆ ತೆರಳಿದ ಅವರು ಅಲ್ಲಿನ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.
ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳು!

2023ರ ಅಂತಿಮ ಮತದಾರರ ಪಟ್ಟಿ: ಇಲ್ಲಿದೆ ಜಿಲ್ಲಾವಾರು, ಕ್ಷೇತ್ರವಾರು ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + seventeen =
Remember me
