ಬೆಂಗಳೂರು:ಬಿಜೆಪಿಗೆ ಗುಡ್‌ಬೈ ಹೇಳಿ ಎನ್‌.ವೈ ಗೋಪಾಲಕೃಷ್ಣ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಪಕ್ಕದಲ್ಲಿ ಕುಳಿತಿದ್ದ ಡಿ.ಕೆ.ಶಿವಕುಮಾರ್ ಎಚ್ಚೆತ್ತು ಸಿದ್ದರಾಮಯ್ಯ ಅವರನ್ನು ತಟ್ಟಿ ನಿದ್ದೆಯಿಂದ ಎಬ್ಬಿಸಿದ್ದಾರೆ.
ಇದನ್ನೂ ಓದಿ:ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ; ಎಚ್​ಡಿಕೆ
ಸಿದ್ದರಾಮ್ಯಯ ಅವರು ವೇದಿಕೆ ಮೇಲೆಯೇ ನಿದ್ರೆಗೆ ಜಾರುವುದು ಇದೇ ಮೊದಲೇನಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಹಲವು ಕಾರ್ಯಕ್ರಮಗಳಲ್ಲಿ ನಿದ್ರೆ ಮಾಡಿದ್ದರು. ಇದನ್ನೇ ವಿಪಕ್ಷಗಳು ಟೀಕೆಯ ಧಾಳವಾಗಿಸಿಕೊಂಡಿದ್ದವು.ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಎನ್‌.ವೈ ಗೋಪಾಲಕೃಷ್ಣ ಮಾತನಾಡಿ, ನನ್ನ ಡಿಪಾಸಿಟ್ ಡಿಕೆಶಿಯವರೇ ಕೊಡಲಿ. ಅವರ ಕೈಗುಣ ಚೆನ್ನಾಗಿದೆ. ಈ ಹಿಂದೆಯೂ ಅವರೇ ಡಿಪಾಸಿಟ್ ಕೊಟ್ಟಿದ್ದರು. ನಾನು ಕೂಡ್ಲಿಗಿಯಲ್ಲಿ ಹಾಗೂ ಮೊಳಕಲ್ಮೂರಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂಬ ಭರವಸೆ ನೀಡಿದರು.ಇದನ್ನೂ ಓದಿ:ಹುಬ್ಬಳ್ಳಿ | 5 ರೂ. ಕೇಳಿದ್ದೇ ತಪ್ಪಾಯ್ತು; ಸಿಟ್ಟಿನಲ್ಲಿ ಬಾಲಕನ ಜೀವ ತೆಗೆದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
