ಬೆಳಗಾವಿ:ಸಿದ್ದರಾಮಯ್ಯ ನಾಲಿಗೆಗೆ ಮತ್ತು ಮಿದುಳಿಗೆ ನಿಯಂತ್ರಣ ಇಲ್ಲವೆಂಬುದು ಈಗಾಗಲೇ ಅನೇಕ ಸಾರಿ ಸಾಬೀತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಳಗಾವಿ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪರವಾಗಿ ಪ್ರಚಾರ ಕಾರ್ಯ ನಡೆಸುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿವಂಗತ ಸಚಿವ ಸುರೇಶ್ ಅಂಗಡಿ ಅವರ ಧರ್ಮಪತ್ನಿ ಮಂಗಳಾ ಅವರ ಬಗ್ಗೆ ಸಿದ್ದರಾಮಯ್ಯ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ನಾಲಿಗೆಯಲ್ಲಿ ಏನು ಬರುತ್ತೆ ಇದು ಅರ್ಥವಾಗದಂತ ಮಾತು. ಸಿಎಂ ಆಗಿ, ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದರೂ ಇನ್ನೂ ಹಗುರ ಮಾತು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗಂಡ ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿ ಕೇಳಬಹುದೆ? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಹಕ್ಕಿವೆ?
ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರೂ ರಾಜ್ಯಕ್ಕಾಗಿ ಸಂಸತ್‌ ನಲ್ಲಿ ಧ್ವನಿ ಎತ್ತುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಧ್ವನಿ ಎತ್ತುವ ಅಗತ್ಯ ಇಲ್ಲ, ನಮ್ಮ ಕ್ಷೇತ್ರಕ್ಕೆ ರಾಜ್ಯಕ್ಕೆ ಏನು ಬೇಕೋ ಪ್ರಧಾನಿ ಅದನ್ನ ಕೊಡ್ತಿದ್ದಾರೆ. ವಿಪಕ್ಷದಲ್ಲಿದ್ದವರು ಧ್ವನಿ ಎತ್ತಬೇಕು, ಆಡಳಿತ ಪಕ್ಷದಲ್ಲಿದ್ದವರು ಕೆಲಸ ಮಾಡಬೇಕು ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸುತ್ತೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡ್ತಿದ್ದಾರೆ. ನಾವು ಯಾವುದೇ ಅಬ್ಬರ ಮಾಡ್ತಿಲ್ಲ. ಮಂಗಲ ಅಂಗಡಿಯವರು ಬಹು ದೊಡ್ಡ ಅಂತರದಿಂದ ಜಯ ಸಾಧಿಸುತ್ತಾರೆ. ಬೇರೆ ಅಭ್ಯರ್ಥಿಗಳು ಇದ್ದಾರೆ ಅಂತಾ ನಮಗೆ ಅನಿಸುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಸಾರಿಗೆ ನೌಕರರ ಯುಗಾದಿ ಸಂಭ್ರಮಕ್ಕೆ ಕತ್ತರಿ? ನಾಳೆಯಿಂದ ಕೆಲಸಕ್ಕೆ ಬಂದರೆ ಬೆಲ್ಲ… ಇಲ್ಲದಿದ್ದರೆ ಬೇವು!

ಪಶ್ಚಿಮ ಬಂಗಾಳ ಹಿಂಸಾಚಾರ: ಮೌನ ಮುರಿದ ಗೃಹ ಸಚಿವ ಅಮಿತ್ ಶಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eleven =
Remember me
