ಮಂಡ್ಯ:ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿದ ಬೆನ್ನಿಗೇ ರಾಜಕೀಯ ಪಕ್ಷಗಳ ನಾಯಕರ ಮಾತಿನ ಚಕಮಕಿ ಹೆಚ್ಚಾಗಿದ್ದು, ಒಬ್ಬೊಬ್ಬರಿಂದ ಒಂದೊಂದು ರೀತಿಯ ಹೇಳಿಕೆಗಳು ಕೇಳಿ ಬರುತ್ತಿವೆ. ಅದೇ ರೀತಿ ಮಂಡ್ಯದಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಕೈಲಾಗದವನು ಎದುರು ಬರುವ ಪೈಲ್ವಾನ್​ಗೆ ಒದಿತೀನಿ ಎನ್ನುತ್ತಾನೆ, ಆದರೆ ಅವನು ಎದ್ದೇಳುವುದಿಲ್ಲ, ಒದೆಯುವುದಕ್ಕೆ ಆಗಲ್ಲ. ಕಾಂಗ್ರೆಸ್​​ನವರಿಗೆ ಆರ್​​ಎಸ್​ಎಸ್​​ನವರನ್ನು ಕಂಡರೆ ತಡೆದುಕೊಳ್ಳಲು ಆಗುತ್ತಿಲ್ಲ. ಸಿದ್ದರಾಮಯ್ಯ-ಇಬ್ರಾಹಿಂ ಇವರಿಬ್ಬರೇ ಆರ್​ಎಸ್​ಎಸ್​ ಬಗ್ಗೆ ಮಾತನಾಡ್ತಾರೆ, ಅವರಿಬ್ಬರು ಬೀಗರು, ಅವರಿಗೆ ಮುಸ್ಲಿಮರ ವೋಟು. ಪಿಎಫ್​ಐ ಬ್ಯಾನ್​ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಹಾಗಾದರೆ ಸ್ಪಷ್ಟವಾಗಿ ಹೇಳಿಬಿಡಲಿ, ಹಿಂದೂಗಳ ವೋಟ್ ಬೇಡವಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ರಾಷ್ಟ್ರಭಕ್ತ ಮುಸ್ಲಿಮರು ಇವತ್ತು ಬಿಜೆಪಿ ಜೊತೆ ಇದ್ದಾರೆ. ಕಾಂಗ್ರೆಸ್​ನವರಿಗೆ ಏನು ಮಾಡ್ಬೇಕು ಅಂತ ತೋಚುತ್ತಿಲ್ಲ. ಬಾಯಿಗೆ ಬಂದ ಹಾಗೆ ಒದರುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ವಿದೂಷಕ ಎನ್ನುವ ಸಿದ್ದರಾಮಯ್ಯ ಅವರನ್ನು ಏನಂತ ಕರೆಯಬೇಕು ಎಂದಿರುವ ಈಶ್ವರಪ್ಪ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್​​ಗೆ ವಿಲನ್, ಕಾಂಗ್ರೆಸ್​ಗೆವಿಲನ್, ಹಿಂದುಳಿದವರು-ದಲಿತರಿಗೆ ವಿಲನ್, ಹಿಂದೂಗಳಿಗೂ ವಿಲನ್. ಮುಸ್ಲಿಮರಿಗೆ ಮಾತ್ರ ಸಿದ್ದರಾಮಯ್ಯ ಹೀರೋ, ಸಿದ್ದರಾಮಯ್ಯ ಕರ್ನಾಟಕ ರಾಜ್ಯಕ್ಕೆ ವಿಲನ್​ ಎಂದು ಹೇಳಿದ್ದಾರೆ.
ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − sixteen =
Remember me
