ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಮಮನೋಹ್ರ ಲೋಹಿಯಾ ಅವರ ಸಿದ್ಧಾಂತಗಳನ್ನು ಪಾಲಿಸುತ್ತಿದ್ದು, ಅಂಬೇಡ್ಕರ್ ಅವರ ಭಾರತ ಸಂವಿಧಾನದ ಆಶಯಗಳ ಸಕಾರಗೊಳಿಸುತ್ತಿದ್ದಾರೆ. ಜತೆಗೆ ಪೆರಿಯಾರ್, ಕುವೆಂಪು ರಂತಹ ಮೌಡ್ಯ ಕಂದಾಚಾರಗಳನ್ನು ವಿರೋಧಿಸುವ ಗುಣವುಳ್ಳ ನಾಯಕರಾಗಿದ್ದಾರೆ ಎಂದು ಅಹಿಂದ ಚಳುವಳಿ ಸಂಸ್ಥೆ ತಿಳಿಸಿದೆ.
ಸಿದ್ದರಾಮಯ್ಯ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಭಾಗ್ಯಗಳನ್ನು ಬಡವರಿಗಾಗಿ ನೀಡಿದ್ದಾರೆ. ಇದರಿಂದ ಶೇ.80ಕ್ಕೂ ಹೆಚ್ಚಿರುವ ಆಹಿಂದ ಸಮುದಾಯಗಳ ಜನರು ಉತ್ತಮವಾಗಿ ಬದಕಲು ಸಹಕಾರಿಯಾಗಿದೆ. ಜತಗೆ ಸಿದ್ದರಾಮಯ್ಯನವರ ರಾಜಕೀಯ ಆದ್ಯತೆ ಮತ್ತು ಬದ್ಧತೆಗಳನ್ನು ಒಪ್ಪಿ ರಾಜ್ಯದ ಬಹುತೇಕ ಅಹಿಂದ ಸಮುದಾಯಗಳು ಕೈಹಿಡಿದಿದ್ದು, 2023ರಲ್ಲಿ ಮತ್ತೆ ಕಾಂಗ್ರೇಸ್ ಅಧಿಕಾರಕ್ಕೆ ಬರಲು ಸಾಕ್ಷಿಯಾಗಿದೆ. ಅಲ್ಲದೆ, ಈ ಬಾರಿಯೂ ಅಹಿಂದ ಜತೆಗೆ ಉಳಿದ ಎಲ್ಲರಿಗೂ ಹಲವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಅಹಿಂದ ಚಳುವಳಿ ರಾಜ್ಯ ಜಂಟಿ ಮುಖ್ಯ ಸಂಚಾಲಕ ಎನ್ ವೆಂಕಟೇಶಗೌಡ ಸುದ್ದಿಗೋಷ್ಠಿ ತಿಳಿಸಿದರು.
ಪ್ರಸ್ತುತ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಲಿಂಗಾಯಿತರು 12% ,ಒಕ್ಕಲಿಗರು 10%, ಎಸ್ಸಿ/ಎಸ್ಟಿ, 24% ಇದರಿಲ್ಲಿ ಲಿಂಗಾಯಿತರು ಮತ್ತು ಒಕ್ಕಲಿಗರು ಹೊರತುಪಡಿಸಿ ಇನ್ನೂಳಿದ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರು 34% ಇದ್ದಾರೆ. ಸ್ವಾತಂತ್ರ್ಯದ ನಂತರ ಹೆಚ್ಚು ಪಾಲು ಮೊದಲಿನ 2 ಜಾತಿಗಳೆ ಪಡೆದಿವೆ. ಉಳಿದ ಜಾತಿಗಳು ಮುಖ್ಯಮಂತ್ರಿ ಪದವಿಗೇರುವಲ್ಲಿ ಜತೆಗೆ ರಾಜಕೀಯ ಶಕ್ತಿ ಗಳಿಸುವಲ್ಲಿ ವಂಚಿತರಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಸ್ವಾತಂತ್ರ್ಯ ಮತ್ತು ಭಾರತ ಸಂವಿಧಾನ ಅನುಷ್ಟಾನಗೊಂಡು 75 ವರ್ಷಗಳು ಕಳೆದರೂ ಸಮ ಸಮಾಜ ನಿರ್ಮಾಣವಾಗಿಲ್ಲ. ಅಸಮಾನತೆ ಮುಂದುವರೆದಿದೆ. ಉಲ್ಲೇಖಿತ ಬಹುಸಂಖ್ಯಾತ ಜಾತಿಗಳಲ್ಲಿ ಇಂದಿಗೂ ಹಿಂದುಳಿದಿರುವಿಕೆ, ಬಡತನ ಮುಂದುವರೆದಿದೆ. ಈ ಅಪರಾಧ ಹೊಣೆಗಾರಿಕೆಯನ್ನು ಮುಂದುವರಿದ ಜಾತಿಗಳು ತೆಗೆದುಕೊಳ್ಳುತ್ತಿಲ್ಲ ಬದಲಿಗೆ ಮತ್ತಷ್ಟು ಅಧಿಕಾರ ಮತ್ತು ಫಲವನ್ನು ನಿರಂತರವಾಗಿ ಅವರೇ ಪಡೆಯಲು ಬಯಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಪದವಿಯನ್ನು ವಾಪಸ್ಸು ಪಡೆಯುವ, ಆ ಸ್ಥಾನದಿಂದ ಆಸ್ಥಿರಗೊಳಿಸುವ ಹುನ್ನಾರ, ಷಡ್ಯಂತರಗಳನ್ನು ರಾಜ್ಯದ ಅಹಿಂದ ಸಮುದಾಯಗಳ ಪರವಾಗಿ ಈ ಸಂಘಟನೆಯು ಕಟುವಾಗಿ ಖಂಡಿಸುತ್ತದೆ. ಇಂತಹ ಸಾಮಾಜಿಕ ಕಳಕಳಿಯ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿ ಬಿಟ್ಟಕೋಡಿ ಎಂದು ಕೇಳುತ್ತಿರುವ ಮಾನ್ಯರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
