ಕೋಲಾರ:ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಾ ಅಥವಾ ಬೇಡವಾ ಎನ್ನುವ ಕುರಿತು ಸ್ವತಃ ಸ್ಥಳೀಯ ಜನತೆಯ ನಾಡಿಮಿಡಿತ ಅರಿಯಲು ಇಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಪ್ರವಾಸ ಕೈಗೊಂಡರು.
ಜನತೆ ನೀಡಿದ ಅದ್ದೂರಿ ಸ್ವಾಗತ ಮತ್ತು ಸೇರಿದ ಭಾರೀ ಜನಸ್ತೋಮವನ್ನು ನೋಡಿದ ಸಿದ್ದರಾಮಯ್ಯ, ‘‘ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೋಲಾರಕ್ಕೆ ಬರುವೆ’’ ಎಂದು ಘೋಷಣೆ ಮಾಡಿಯೇ ಬಿಟ್ಟಿದ್ದಾರೆ.
ದೇವಸ್ಥಾನ, ದರ್ಗಾ, ಚರ್ಚ್ ಸುತ್ತಿದ ಸಿದ್ದರಾಮಯ್ಯ… ಎಲ್ಲರ ಪ್ರತಿಮೆಗಳಿಗೂ ಗೌರವಾರ್ಪಣೆ
ಈಗ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ವರುಣ, ಚಾಮರಾಜಪೇಟೆ ಮುಂತಾದ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿದೆ. ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸುವುದು ಕಷ್ಟ ಎಂಬುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಇತ್ತೀಚೆಗೆ ಪರೋಕ್ಷವಾಗಿ ಹೇಳಿದ್ದಾರೆ. ಈ ಮಧ್ಯೆ, ಇಂದು ಕೋಲಾರದ ಜನರ ಮನಸ್ಸು ಅರಿಯಲು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅವರಿಗೆ ಜನರಿಂದ ಅದ್ಧೂರಿ ಸ್ವಾಗತ ದೊರೆಯಿತು. ಮಸೀದಿ, ದೇಗುಲ, ಚರ್ಚ್‌ಗಳಿಗೆ ಹೋದ ಸಿದ್ದರಾಮಯ್ಯ ಚರ್ಚ್‌ನಲ್ಲಿ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಿದ್ಧತೆಯಲ್ಲಿರುವ ಸಿದ್ದರಾಮಯ್ಯ; ಪ್ರಚಾರಕ್ಕೆ ತೆರಳಲು ಬಂತು ಐಷಾರಾಮಿ ಬಸ್!
ಇಲ್ಲಿನ ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತ ‘‘ಕೋಲಾರದಲ್ಲೇ ಸ್ಪರ್ಧಿಸುವಂತೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹಾಗೂ ಶಾಸಕ ಶ್ರೀನಿವಾಸಗೌಡ ಒತ್ತಾಯ ಮಾಡಿದ್ದಾರೆ. ಇಂದು ಕೋಲಾರದ ಜನತೆಯಿಂದ ಅದ್ದೂರಿ ಸ್ವಾಗತ ಸಿಕ್ಕಿದೆ, ಎಲ್ಲರಿಗೂ ನಾನು ಧನ್ಯವಾದವನ್ನು ತಿಳಿಸುವೆ. ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ, ನಾನು ಈಗ ಬಾದಾಮಿ ಕ್ಷೇತ್ರದ ಶಾಸಕ. ವರುಣಾ ಕ್ಷೇತ್ರ ಮತ್ತು ಬಾದಾಮಿಯಿಂದಲೂ ಸ್ಪರ್ಧೆಗೆ ಮನವಿ ಇದೆ. ಕೋಲಾರದಿಂದ ಸ್ಪರ್ಧೆ ಮಾಡುವಂತೆ ಹೆಚ್ಚಿನ ಒತ್ತಡ ಮತ್ತು ಒತ್ತಾಯ ಬಂದಿದೆ. ಕೋಲಾರದ ಜನತೆಗೆ ಆಭಾರಿಯಾಗಿದ್ದೇನೆ. ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಕೋಲಾರಕ್ಕೆ ಬರ್ತೀನಿ’’ ಎಂದು ಘೋಷಣೆ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
