ಚಿಕ್ಕಬಳ್ಳಾಪುರ:ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತವರು ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಸುಧಾಕರ್ ವಿರುದ್ಧ ಮಾಜಿ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಸುಧಾಕರ್​ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಆದರೆ, ಇಂದು ಸುಧಾಕರ್​ಗೆ ಟಿಕೆಟ್​ ಕೊಡಿಸಿ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬಂದಿದೆ. ಅಶ್ವತ್ಥ ನಾರಾಯಣ್ ಹಾಗೂ ಸುಧಾಕರ್ ಪ್ರೆಸ್ ಮೀಟ್ ಮಾಡಿ ನಮ್ಮ ಸರ್ಕಾರ, ನಮ್ಮ ಮಂತ್ರಿಗಳು ಹಾಗೂ ನಮ್ಮ ಮೇಲೆ ಪಕ್ಷದ ಮೇಲೆ ಆರೋಪ ಮಾಡಿದ್ದಾರೆ. ಆ ಸುಧಾಕರ್ ಹೇಗೆ ಡಾಕ್ಟರ್​ ಓದಿದನೋ ಗೊತ್ತಿಲ್ಲ. ಓದಿದನೋ ಅಥವಾ ಕಾಫಿ ಮಾಡಿದಾನೋ ಗೊತ್ತಿಲ್ಲ. ಅಸಾಮಿ ಎಂಎಲ್‍ಎ ಆದವನು, ನಮ್ಮ ಜೊತೆ ಇದ್ದವನು, ಒಂದು ದಿನವಾದರೂ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದನಾ? ಆದರೆ, ಈಗ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಾತಾಡಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಕಾಲದಲ್ಲಿ ನಡೆದ ಪ್ರಕರಣದ ಅಡಿಟ್ ರಿಪೋರ್ಟ್​ ಬಂದಿದೆ. ಭ್ರಷ್ಟಾಚಾರ ನಡಿದಿದೆ ಅಂತಾರೆ ಅಲ್ವಾ, ಆದರೆ, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸುಧಾಕರ್ ಅಂತಾ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಅಲ್ಲಿದ್ದ ಜನ ಕೂಡಲೇ ಮುಖ್ಯಮಂತ್ರಿ ಅಲ್ಲ ಮಂತ್ರಿ ಎಂದು ಎಚ್ಚರಿಸಿದರು.
ಪಕ್ಷ ಬಿಟ್ಟು ಹೋಗಬೇಡ ಅಂತ ರಾತ್ರಿ 1 ಗಂಟೆಗೆ ಸುಧಾಕರ್​​ಗೆ ಹೇಳಿದೆ. ಆದರೆ, ಅಸಾಮಿ 1 ಗಂಟೆ ರಾತ್ರಿಯಲ್ಲಿ ಪ್ರಮಾಣ ಮಾಡಿ ಬೆಳಗ್ಗೆಯೇ ಬಾಂಬೆಗೆ ಹೋಗಿಬಿಟ್ಟ. ಇವನು ಭ್ರಷ್ಟಾಚಾರ ಮೌಲ್ಯದ ಬಗ್ಗೆ ಮಾತಾಡ್ತಾನಾ? ಬಿಜೆಪಿ ಪಕ್ಷ, ಸಿಎಂ ಹಾಗೂ ಸುಧಾಕರ್​ಗೆ ಹೇಳ್ತಿನಿ, ನಿಮ್ಮ ದು 40% ಸರ್ಕಾರ ಅಂತ ಜನಜನಿತವಾಗಿದೆ. ನಿಮಗೆ ತಾಕತ್, ಧಮ್ ಇದ್ದರೆ ಸುಪ್ರೀಂಕೋರ್ಟ್ ಜಡ್ಜ್ ಅಧ್ಯಕ್ಷತೆಯಲ್ಲಿ ತನಿಖೆ ಮಾಡಿಸಿ, ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅಂತ ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ನೀವು ಸತ್ತ ಹೆಣದ ಮೇಲೆ ರಾಜಕೀಯ ಮಾಡಿದ್ದೀರಿ. ಲೋಕಾಯುಕ್ತ ಮುಚ್ಚಿಬಿಟ್ಟರು ಅಂತಾ ಆರೋಪ ಮಾಡಿದ್ರಿ. ಆದರೆ, ನಾವು ಎಸಿಬಿ ತೆರೆದಿದ್ದೆವು ಅಷ್ಟೆ, ಲೋಕಾಯುಕ್ತ ಮುಚ್ಚಿರಲಿಲ್ಲ. ಆಗಲೂ ಲೋಕಾಯುಕ್ತ ಇತ್ತು. ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತ ಮುಚ್ಚಬೇಕಾಯಿತು. ಬಿಜೆಪಿ ಅಧಿಕಾರ ಮಾಡೋ ರಾಜ್ಯಗಳಲ್ಲೂ ಎಸಿಬಿ ಇದೆ. ಇದಕ್ಕೆ ಏನು ಹೇಳ್ತಿಯಾ ಸುಧಾಕರ್? ನಾನು ಸವಾಲು ಹಾಕ್ತೇನೆ. ಧಮ್ ಇದ್ರೆ, ತಾಕತ್ ಇದ್ರೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ತನಿಖೆ ಮಾಡಿ ಎಂದರು.
ನೀನು ನಮ್ಮ ಜೊತೆಯಲ್ಲೇ ಇದ್ದೆ ಅಲ್ಲ ಸುಧಾಕರ್, ನಾವ್ ಭ್ರಷ್ಟಾಚಾರ ಮಾಡಿದ್ರೆ ನೀನು ಆಗ ಯಾಕೆ ಮಾತಾಡಲಿಲ್ಲ? ನಮ್ಮ ಜೊತೆಗೆ ಇದ್ದಾಗ ಗಂಟಲಲ್ಲಿ ಕಡುಬು ಸಿಕ್ಕಿ ಹಾಕಿಕೊಂಡಿತ್ತಾ? ಕರೊನಾ ಔಷಧಿ, ಮಾಸ್ಕ್, ಆಕ್ಸಿಜನ್ ಹಾಗೂ ಬೆಡ್​ನಲ್ಲೂ ಲಂಚ ಹೊಡಿದ್ರಿ. ನೀವು ಅಧಿಕಾರದಲ್ಲಿರಲು ಲಾಯಕ್ ಅಲ್ಲ, ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಕರ್ನಾಟಕದ ಇತಿಹಾಸದಲ್ಲಿ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದಿದ್ದು ಇದೆಯಾ? ಬೊಮ್ಮಾಯಿ, ಸುಧಾಕರ್ ಇರುವ ಸರ್ಕಾರ 40% ಕಮಿಷನ್ ಸರ್ಕಾರ. ಇವರು ಇರಬೇಕಾ? ಸುಧಾಕರ್ ಮತ್ತೆ ಎಂಎಲ್ಎ ಆಗಬೇಕಾ? ಈ ಸುಧಾಕರ್​ನ ಸೋಲಿಸುವವರನ್ನು ನಿಲ್ಲಿಸರಪ್ಪ ನಿಮ್ಮ ದಮ್ಮಯ್ಯ ಅಂತೀನಿ. ನಾವು ಕಾರ್ಯಕರ್ತರು ಹೇಳುವವರಿಗೆ ಟಿಕೆಟ್ ಕೊಡಿ, ದಯಮಾಡಿ ಪ್ರಾರ್ಥನೆ ಮಾಡ್ತೇನೆ ಸುಧಾಕರ್​ನ ಸೋಲಿಸಿ, ಮನೆಗೆ ಕಳುಹಿಸಿ ಎಂದು ಮನವಿ ಮಾಡಿದರು.(ದಿಗ್ವಿಜಯ ನ್ಯೂಸ್​)
ಕೇಂದ್ರದ ಬಜೆಟ್ ರಾಜ್ಯಕ್ಕೆ ಬಂಪರ್?; ಡಬಲ್ ಇಂಜಿನ್ ಫೀಲ್ ಕೊಡಲು ಯತ್ನ

ಅಂದಿನ ಜೋಡೆತ್ತುಗಳೇ ಇಂದಿನ ಪ್ರತಿಸ್ಪರ್ಧಿಗಳು?: ಬಿ.ಸಿ. ಪಾಟೀಲ- ಯು.ಬಿ. ಬಣಕಾರ ಮುಖಾಮುಖಿ ಸಾಧ್ಯತೆ; ರಂಗೇರುತ್ತಿದೆ ಹಿರೇಕೆರೂರು ಅಖಾಡ

ನಾನು ನನ್ನ ಕನಸು: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
