ಕೆ.ಆರ್.ನಗರ:ರಾಜಕೀಯ ಬದ್ಧವೈರಿಗಳಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎಚ್.ವಿಶ್ವನಾಥ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಶ್ರೀ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಯುವಸೇನೆ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನಾ ಸಮಾರಂಭ ಮೂವರ ಸಮಾಗಮಕ್ಕೆ ಸಾಕ್ಷಿಯಾಯಿತು.
ಪ್ರತಿಮೆ ಅನಾವರಣ ನಂತರ ಸಿದ್ದರಾಮಯ್ಯ ಮತ್ತು ಕೆ.ಎಸ್.ಈಶ್ವರಪ್ಪ ಒಂದೇ ಕಾರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಮೂವರೂ ಅಕ್ಕಪಕ್ಕದಲ್ಲೇ ಕುಳಿತು ಆತ್ಮೀಯವಾಗಿ ಮಾತನಾಡಿದರು. ಜತೆಗೆ ಪೊಟ್ಟಣದಲ್ಲಿದ್ದ ಬಿಸ್ಕೆಟ್ ಅನ್ನು ಹಂಚಿ ತಿಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಮೂವರೂ ಒಂದೇ ವೇದಿಕೆಯಲ್ಲಿ ಸೇರಿ ಎಷ್ಟೋ ವರ್ಷಗಳಾಗಿದ್ದವು. ನಾನು ಇಲ್ಲಿಗೆ ಬರುವವರೆಗೆ ಮೂವರು ಸೇರುವುದಾಗಿ ತಿಳಿದಿರಲಿಲ್ಲ ಎಂದರು. ವಿಶ್ವನಾಥ್- ನಾನು 1971ರಲ್ಲಿ ಕಾನೂನು ಎಚ್.ವಿಶ್ವನಾಥ್ ಮಾತನಾಡಿ, ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಸಂಗಮವಾಗುವಂತೆ ಇಂದು ನಮ್ಮ ಸಮಾಗಮವಾಗಿದೆ ಎಂದರು.
ನಾವು ಮೂವರು ಒಟ್ಟಾಗಿರುವುದು ಕೆಲವರಿಗೆ ಹೊಟ್ಟೆ ಉರಿಯುವಂತೆ ಮಾಡಲಿದೆ. ಸಿದ್ದರಾಮಯ್ಯ ನನಗೆ ಹೆಚ್ಚು ಬೈಯ್ದಿದ್ದಾರೆ. ನಾನೂ ಕಡಿಮೆ ಇಲ್ಲದಂತೆ ಬೈಯ್ದಿ ದ್ದೇನೆ. ರಾಜಕಾರಣದಲ್ಲಿ ಎಷ್ಟೇ ಬಡಿದಾಡಿ ದರೂ ವಿಶ್ವಾಸದಲ್ಲಿ ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ.
| ಕೆ.ಎಸ್.ಈಶ್ವರಪ್ಪ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
