ಬೆಂಗಳೂರು:ಮಾಜಿ ಕಾಂಗ್ರೆಸ್​ ಸಂಸದ ಧ್ರುವನಾರಾಯಣ್​ ಸಾವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್​.ಸಿ. ಮಹದೇವಪ್ಪ ಕಾರಣ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಧ್ರುವನಾರಾಯಣ್ ಬೆಳೆಯುವುದು ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿಯೇ ಎಚ್. ಸಿ. ಮಹದೇವಪ್ಪ ಅವರನ್ನು ನಂಜನಗೂಡು ಕ್ಷೇತ್ರಕ್ಕೆ ಕಳುಹಿಸಿದರು. ಇದರಿಂದ ಒತ್ತಡಕ್ಕೆ ಒಳಗಾದ ಧ್ರುವನಾರಾಯಣ್​ ಹೃದಯಾಘಾತದಿಂದ ಮೃತಪಟ್ಟರು. ಹೀಗಾಗಿ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಅವರೇ ಧ್ರುವನಾರಾಯಣ್ ಸಾವಿಗೆ ಕಾರಣರಾಗಿದ್ದಾರೆ. ಇದೀಗ ಮೈಸೂರಿನ ಜನ ಇವರ ವಿರುದ್ಧ ರೊಚ್ಚಿಗೊದ್ದಿದ್ದಾರೆ ಎಂದ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಚ್ಚಾಟ ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಯೂಟ್ಯೂಬರ್ ಅಂದರ್​!
ವೀರಶೈವ ಲಿಂಗಾಯತ ಕುರಿತು ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಲಿಂಗಾಯತರ ವಿರುದ್ಧ ಸಿಟಿ ರವಿಯವರು ಎಲ್ಲಿಯೂ ಒಂದು ಮಾತುಗಳನ್ನು ಆಡಿಲ್ಲ. ಆದರೆ, ಅವರ ಏಳಿಗೆ ಸಹಿಸದೇ, ಅವರಿಗೆ ಹಾಗೂ ಪಕ್ಷಕ್ಕೆ ಕಳಂಕ ತರಲು ಕಾಂಗ್ರೆಸ್ ಇದನ್ನು ಬಳಸುತ್ತಿದೆ. ಅವರ ಯೋಗ್ಯತೆ ಎಲ್ಲಿಗೆ ಬಂದಿದೆ ಎಂಬುದನ್ನು ಇದರಿಂದಲೇ ಮನಗಾಣಬೇಕು. ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದೆ. ಹೀಗಾಗಿ ಹತಾಶರಾಗಿ ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಅನೇಕ ಗ್ಯಾರೆಂಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿಯಲ್ಲಿ 10 ಕೆಜಿ ಅಕ್ಕಿ, 2000 ರೂ. ಹಣ ಹಾಗೂ 200 ಯುನಿಟ್‌ ವಿದ್ಯುತ್ ಫ್ರೀ ಅಂತೆ. ಇದೇಲ್ಲ ಕೊಡೊಕ್ಕೆ ಆಗುತ್ತಾ? ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದೆಲ್ಲ ಕೊಟ್ಟಿದ್ದಾರಾ? ಕಾಂಗ್ರೆಸ್ ಟೋಲ್ ಕಿಟ್ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಬೆಲ್ ಮೇಲೆ ಓಡಾಡುವವರೆಲ್ಲ ಮತ್ತೆ ಒಳಗಡೆ ಹೋಗ್ತಾರೆ. ಕಾಂಗ್ರೆಸ್ ಅವರು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಯಾಕೆ ಅಧಿಕಾರಗಳು ಕೆಲಸ ಮಾಡಬಾರದಾ ಎಂದು ಪ್ರಶ್ನಿಸಿದರು.(ದಿಗ್ವಿಜಯ ನ್ಯೂಸ್​)
ರಾಹುಲ್​ ಗಾಂಧಿ ಕ್ಷಮೆ ಕೇಳೋವರೆಗೂ ಸಂಸತ್ತಿನಲ್ಲಿ ಮಾತನಾಡಲು ಬಿಡುವುದಿಲ್ಲ: ಬಿಜೆಪಿ ಆಗ್ರಹ

ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಚ್ಚಾಟ ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಯೂಟ್ಯೂಬರ್ ಅಂದರ್​!

ಕರ್ನಾಟಕ ಖಾಸಗಿ ಶಾಲೆಗಳ ಪಠ್ಯ ಪುಸ್ತಕದ ಬೆಲೆ ಶೇಕಡ 25ರಷ್ಟು ಏರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
