ಬೆಂಗಳೂರು:ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ “ಸಿದ್ದರಾಮಯ್ಯ ಎಂಬ ನಾನು” ಹೆಸರಿನ ಸಿನಿಮಾ ಫ್ಲೆಕ್ಸ್ ಅಳವಡಿಸಲಾಗಿದೆ. ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಿದ್ದರಾಮಯ್ಯಗೆ ಅಭಿನಂದನೆಗಳು ಎಂದು ಫ್ಲೆಕ್ಸ್​ನಲ್ಲಿ ಬರೆದಿದ್ದು ಚಿತ್ರತಂಡದಿಂದ ಅಭಿನಂದನೆಗಳು ಎಂದೂ ಬರೆಯಲಾಗಿದೆ.
ಪೋಸ್ಟರ್​ನಲ್ಲಿ ನಾಗರಾಜ್ ಬಿ ಎಂಬುವರಿಂದ ನಿರ್ದೇಶನ, ಶಿವಮಾದೇಗೌಡ ನಿರ್ಮಾಪಕರು ಎಂದು ಉಲ್ಲೇಖವಾಗಿದ್ದು ಕುತೂಹಲ ಮೂಡಿಸಿದೆ. ಈ ಹಿಂದೆಯೂ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯ ಮಂತ್ರಿ ಅಗಲಿರುವ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಈ ಮೊದಲೇ ಒಂದು ಸಿನಿಮಾವನ್ನು ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಘೋಷಿಸಿ ಟೈಟಲ್ ರಿಜಿಸ್ಟರ್ ಮಾಡಿಸಲಾಗಿತ್ತು ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಈ ನಡುವೆಯೇ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಸಿನಿಮಾಕ್ಕೆ ‘ಸಿದ್ದರಾಮಯ್ಯ ಎಂಬ ನಾನು’ ಎಂದು ಹೆಸರಿಡಲಾಗಿದೆ. ಸಿನಿಮಾದ ಪೋಸ್ಟರ್ ಒಂದನ್ನು ಸಹ ಬಿಡುಗಡೆ ಮಾಡಲಾಗಿದೆ.

ಪೋಸ್ಟರ್​ನಲ್ಲಿ ಸಿದ್ದರಾಮಯ್ಯ ಅವರ ಚಿತ್ರವನ್ನು ಕಪ್ಪು-ಬಿಳುಪಿನಲ್ಲಿ ತೋರಿಸಲಾಗಿದ್ದು, 1947 ಆಗಸ್ಟ್ ಎಂದು ಸಹ ಬರೆಯಲಾಗಿದೆ. ಪಾರ್ವತಮ್ಮ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಅವರ ಆಶೀರ್ವಾದದೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಪೋಸ್ಟರ್ನಲ್ಲಿ ಹೇಳಲಾಗಿದ್ದು ಬಿ.ನಾಗರಾಜ ಎಂಬುವರು ಸಿನಿಮಾ ನಿರ್ದೇಶಕ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಲೀಡರ್ ರಾಮಯ್ಯ ಹೆಸರಿನ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆಗ ಅದರ ಪೋಸ್ಟರನ್ನು ಸ್ವತಃ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಆದರೆ ನಂತರ ಆ ಸಿನಿಮಾ ಬಗ್ಗೆ ಯಾವ ಮಾಹಿತಿಯೂ ಹೊರ ಬಿದ್ದಿಲ್ಲ.ಇದೀಗ ‘ಸಿದ್ದರಾಮಯ್ಯ ಎಂಬ ನಾನು’ ಸಿನಿಮಾದ ಪೋಸ್ಟರ್ ಕಾಣಿಸಿಕೊಂಡಿದ್ದು ಲೀಡರ್ ರಾಮಯ್ಯ ಸಿನಿಮಾದ ರೀತಿ ಪೋಸ್ಟರ್​ಗೆ ಮಾತ್ರವೇ ಸೀಮಿತವಾಗಿ ಉಳಿಯುತ್ತೋ ಅಥವಾ ಚಿತ್ರೀಕರಣಗೊಂಡು ಬಿಡುಗಡೆ ಆಗುತ್ತೋ ಎಂಬುದನ್ನು ಕಾದು ನೋಡಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
