ಮೈಸೂರು:ಮಿಷನ್​ ಟೈಗರ್​ ಯೋಜನೆಯ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಹುಲಿ ಗಣತಿ ಬಿಡುಗಡೆ ಕಾರ್ಯಕ್ರಮದ ನಿಮಿತ್ತ ಬಂಡೀಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಹುಲಿಗಳು ಕಾಣಲಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯಹೇಳಿಕೆ ಸಂಸದ ಪ್ರತಾಪ್​ ಸಿಂಹ ತಿರುಗೇಟು ನೀಡಿದ್ಧಾರೆ.
ಈ ಕರುತಿಉ ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ವಾಯುದಳದ ಮೂರು ಹೆಲಿಕಾಪ್ಟರ್​ಗಳು ಒಮ್ಮೆಲ್ಲೇ ಲ್ಯಾಂಡ್​ ಆದ ಕಾರಣ ಶಬ್ದಕ್ಕೆ ಹೆದರಿ ಪ್ರಾಣಿಗಳು ಹೊರ ಬಂದಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಲಿಗಳು ಕಾಣಿಸಿಲ್ಲ. ಈ ರೀತಿಯ ಸಾಮಾನ್ಯ ಜ್ಞಾನ ಸಿದ್ದರಾಮಯ್ಯಗೆ ಇಲ್ಲವೇ ಎಂದು ಟಾಂಗ್​ ಕೊಟ್ಟಿದ್ದಾರೆ.
ನೀವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಷ್ಟು ಬಾರಿ ಬಂಡೀಪುರಕ್ಕೆ ಭೇಟಿ ನೀಡಿದ್ದೀರಿ. ಮೈಸೂರಿಗೆ ವಾರಕ್ಕೊಮ್ಮೆ ಬಂದು ಕುರಿ ಛರ್ಬಿಯನ್ನು ತಿಂದು ಹೋಗುತ್ತಿದ್ದ ನೀವು ಪ್ರಧಾನಿಗೆ ಪಾಠ ಮಾಡುವ ಅವಶ್ಯಕತೆಯಿಲ್ಲ.
ಮೈಸೂರಿನ ಪಕ್ಕದಲ್ಲೇ ಇರುವ ನಾಗರಹೊಳೆ ಹಾಗೂ ಬಂಡೀಪುರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತವನ್ನು ಮುಗಿಸಲು ಹೊರಟವರು ನೀವು ನಿಮ್ಮಿಂದ ಈ ರೀತಿಯ ಮಾತು ಕೇಳುವ ಅಗತ್ಯ ನಮ್ಮಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:CRPF ನೇಮಕಾತಿ ಪರೀಕ್ಷೆ; ಕನ್ನಡ ಭಾಷೆಗೆ ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ
ಗುಜರಾತ್​ನ ಸಿಂಹ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿದಾಗಲೆಲ್ಲ ಕಾಂಗ್ರೆಸ್ಸಿಗರು ಹಾಗೂ ಸಿದ್ದರಾಮಯ್ಯನವರು ಯಾಕೆ ಊಳಿಡುತ್ತಾರೆ ಎಂದು ಗೊತ್ತಿಲ್ಲ. ಮೋದಿ ಅವರನ್ನು ಕಂಡರೆ ನಡುಕ ಉಂಟಾಗಬಹುದು ಎಂದು ಟೀಕಿಸಿದ್ದಾರೆ.
ಪ್ರತಿ ಬಾರಿ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ಮಾಡಿದ್ದಾಗಲೆಲ್ಲಾ ಸಿದ್ದರಾಮಯ್ಯ ಅವರು ಟೀಕೆ ಮಾಡುತ್ತಲೇ ಇರುತ್ತಾರೆ. ಮೋದಿ ಅವರನ್ನು ಅವರಿಗೆ ಎಷ್ಟು ಭಯವಿದೆ ಎಂದು ಇದರಿಂದಲ್ಲೇ ಸಾಬೀತಾಗುತ್ತಿದೆ. ಆ ಭಯ ನಿಮ್ಮ ಎದೆಯಲ್ಲಿ ಇರಲಿ ಮೇ 10 ಹಾಗೂ 13ರಂದು ಆ ಭಯ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಸಾಬೀತಾಗುತ್ತದೆ ಅಲ್ಲಿಯವರೆಗೂ ಕಾಯಿರಿ ಎಂದು ಹೇಳಿದ್ದಾರೆ.
KMFಅಮೂಲ್ ವಿಲೀನ ಕುರಿತು ಪ್ರತಿಕ್ರಿಯಿಸಿ ಈಗಾಗಲೇ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಕಾಂಗ್ರೆಸ್​-ಜೆಡಿಎಸ್​ನವರು ಸುಳ್ಳು ಆರೋಪಗಳನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಈ ಹಿಂದೆ ಹಿಂದಿ ಹೇರಿಕೆ ಎಂದು ಹೇಳಿದರು ಇದೀಗ ಅಮುಲ್​ ಹೇರಿಕೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಹೆರಿಟೇಜ್, ಡೂಡ್ಲ, ಆರೋಕ್ಯ ಎಂಬ ಹಾಲಿನ ಬ್ರಾಂಡ್‌ಗಳು ನಂದಿನಿಯ ಅಕ್ಕತಂಗಿಯರಾ? ಅಥವಾ ತಮಿಳುನಾಡು ಮತ್ತು ಆಂಧ್ರದಿಂದ ಬಂದ ಸೊಸೆ, ಅಳಿಯಂದಿರಾ. ಇಷ್ಟು ವರ್ಷ ಈ ಬ್ರ್ಯಾಂಡ್​ಗಳು ಕರ್ನಾಟಕದಲ್ಲಿ ಮಾರಾಟವಾಗುತ್ತಿವೆ. ಇದೆಲ್ಲ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಂದವಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಅಮುಲ್​ ಬ್ರ್ಯಾಂಡ್​ನಿಂದ ತಯಾರಿಸುವ ಹಾಲಿನ ಉತ್ಪನ್ನಗಳು ಗುಜರಾತ್​ ರೈತರದ್ದು ಎಂದು ಹೇಳಿರುವ ಸಿದ್ದರಾಮಯ್ಯ ಅವರು ಹಾಲು ಕೊಡುವ ಹಸುಗಳನ್ನು ಕಡಿಯುವವರ ಪರ ಇದ್ದಾರೆ. ಇಂತಹವರ ಕೈಗೆ ಅಧಿಕಾರ ಕೊಟ್ಟರೆ ಗೋ ಮಾಂಸ ತಿನ್ನುವವರು ಹೆಚ್ಚಾಗುತ್ತಾರೆ ಇವರಿಗೆ ಗೋವು ಬೇಕಾಗಿಲ್ಲ. ಗೋ ಮಾಂಸ ತಿನ್ನುವವರ ಮತ ಬೇಕು ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಪ್ರತಾಪ್​ ಸಿಂಹ ಸರಣಿ ಆರೋಪಗಳನ್ನು ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
