ಬೆಂಗಳೂರು:ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಮಸೂದೆ ಮತ್ತು ಲವ್​ ಜಿಹಾದ್​ ಕುರಿತಾಗಿ ಮಸೂದೆ ಮಂಡನೆಯಾಗಬೇಕು ಎನ್ನುವ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮಸೂದೆಯ ಕುರಿತಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ. ಗೋಹತ್ಯೆ ನಿಷೇದ ಮಸೂದೆ ಮಂಡನೆಯಾದರೆ ನಾವು ಅದನ್ನು ವಿರೋಧ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್​ ಪೊಲೀಸರಿಗೆ ಹರಿದು ಬಂತು ಹಣದ ಹೊಳೆ! ಒಂದೇ ವಾರದಲ್ಲಿ ಎಷ್ಟು ದಂಡ ಸಂಗ್ರಹಿಸಿದ್ದಾರೆ ಗೊತ್ತಾ?
ಮುಸ್ಲಿಂ ನಿಯೋಗ ಬಂದು ನನ್ನ ಜತೆ ಚರ್ಚೆ ಮಾಡಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡ್ತೀವಿ ಅಂತ ಸರ್ಕಾರ ಹೇಳಿದೆ. ಹೀಗಾಗಿ ಆತಂಕದಿಂದ ನನ್ನ ಭೇಟಿ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾನೂನು ಇಲ್ಲ. ಇಲ್ಲಿ ಯಾಕೆ ಮಾಡಬೇಕು? ಬಿಜೆಪಿ ಅಧಿಕಾರಲ್ಲಿರುವ ಗೋವಾದಲ್ಲಿ ಇಂತಹ ಕಾನೂನನ್ನು ಯಾಕೆ ಜಾರಿ ಮಾಡಲ್ಲ. ನಾವಂತೂ ಈ ಬಿಲ್​ ಅನ್ನು ವಿರೋಧಿಸುತ್ತೇವೆ. ಈ ಹಿಂದಿನ ಕಾನೂನೇ ಮುಂದುವರಿಯಲಿ ಎಂದು ಅವರು ಹೇಳಿದ್ದಾರೆ.
ಲವ್​ ಜಿಹಾದ್​ ಬಗ್ಗೆ ಮಾತನಾಡಿರುವ ಅವರು, ‘ಲವ್ ಜಿಹಾದ್ ಕಾನೂನು ವಿವೇಕ ಇಲ್ಲದೇ ತರುತ್ತಿರುವ ಕಾನೂನು. 18 ವರ್ಷದ ಬಳಿಕ ಮದುವೆ ಆಗುವುದು ಅವರಿಗೆ ಬಿಟ್ಟಿದ್ದು. ಯಾರನ್ನೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ವಿರೋಧಿ ತಿದ್ದುಪಡಿ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಇದೊಂದು ರಾಜಕೀಯ ದುರುದ್ದೇಶದ ಕಾನೂನು. ರಾಜ್ಯದಲ್ಲಿ ಶಾಂತಿ ಭಂಗ ಮಾಡಲು ಈ ಕಾನೂನು ತರಲು ಹೊರಟಿದ್ದಾರೆ’ ಎಂದು ದೂರಿದ್ದಾರೆ.
ಇದನ್ನೂ ಓದಿ:ಫೇಸ್​ ಎಡಿಟಿಂಗ್​ ಆ್ಯಪ್​ ಬಳಸಿ ಮೋಸ ಮಾಡುತ್ತಿದ್ದ ಖದೀಮರು; 100ಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಕೆಲಸ ಕೊಡಿಸಿದ ಗ್ಯಾಂಗ್​
ಗೋ ಹತ್ಯೆ ನಿಷೇಧ ಬಿಲ್ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ನಿಯೋಗ ವಿಧಾನಸೌಧದ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಮಗಳ ಮದುವೆಗೆ ಅಮೆರಿಕಗೆ ಹೋದ ದಂಪತಿ ಪುತ್ರಿಯ ಕಣ್ಣೆದುರಲ್ಲೇ ದುರಂತ ಸಾವು, ಪುತ್ರನೂ ಮೃತ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
