ಬೆಂಗಳೂರು:ಮುಸ್ಲಿಮರಿಗೆ 1994ರಿಂದ ನೀಡಿದ್ದ ಮೀಸಲಾತಿಯನ್ನು ಯಾವ ಕಾರಣಕ್ಕೆ ಹಿಂಪಡೆಯಲಾಯಿತು? ಯಾವುದೇ ವರದಿ ಬಂದಿಲ್ಲ, ಕೋರ್ಟ್ ಆದೇಶ ಕೂಡ ಬಂದಿಲ್ಲ. ಆದರೂ ದ್ವೇಷ ರಾಜಕಾರಣ ಮಾಡಿ ಮೀಸಲಾತಿ ತೆಗೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ, ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೆ ಮೀಸಲಾತಿ ಇರುತ್ತದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಸಾಮಾಜಿಕವಾಗಿ ಎಲ್ಲರಿಗೂ ಸಮಾನತೆ ಬರಬೇಕು. ಅಲ್ಪಸಂಖ್ಯಾತರಿಗೆ ನೀಡಿದ್ದ ಮೀಸಲಾತಿಯನ್ನು ಯಾವುದೇ ಕೋರ್ಟ್ ರದ್ದು ಮಾಡಿ ಅಂತ ಹೇಳಿಲ್ಲ. ಅದರೆ ಸರ್ಕಾರ ರದ್ದು‌ ಮಾಡುವ ಅಧಿಕಾರ ತೆಗೆದುಕೊಂಡು ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ IPL ಟ್ರೋಫಿ ಪ್ರದರ್ಶನ: ಎಲ್ಲೆಲ್ಲಿ? ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ…
ಮುಸ್ಲಿಂ ಜನಸಂಖ್ಯೆ ಆಧಾರವಾಗಿ ಮೀಸಲಾತಿ ಸಿಕ್ಕಿರಲಿಲ್ಲ. ಕೇವಲ 4% ಮಾತ್ರ ಇತ್ತು. ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಹೆಚ್ಚಳ ಕೇಳಿದ್ದರು. ಮೀಸಲಾತಿ 50% ಮೀರಬಾರದೆಂದು ಇದೆ. ಸಂವಿಧಾನ ಪೀಠ ಕೊಟ್ಟ ತೀರ್ಪು ಬದಲಾವಣೆ ಆಗಬಾರದು. ಆಗಬೇಕು ಅಂತ ಇದ್ದರೆ ಸಂಸತ್ತಿನಲ್ಲಿ ಬದಲಾವಣೆ ಆಗಬೇಕು. 9ನೇ ಶೆಡ್ಯೂಲ್​ಗೆ ಸೇರಿಸಿದಾಗ ಮಾತ್ರ ಮೀಸಲಾತಿ ಹೆಚ್ಚಳಕ್ಕೆ ಬೆಲೆ ಬರುತ್ತದೆ. ಅದನ್ನು ಮಾಡದೆ‌ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಈಗ ಅಲ್ಪಸಂಖ್ಯಾತರನ್ನು ತೆಗೆದು ಹಾಕಿ, ಅನ್ಯಾಯ ಮತ್ತು ರಾಜಕೀಯ ದ್ರೋಹ ‌ಮಾಡುತ್ತಿದ್ದಾರೆ. EWSಗೆ ಮುಸ್ಲಿಮರನ್ನು ಸೇರಿಸಿ ಎಂದು ವರದಿ ಇದೆಯಾಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಧ್ಯದಲ್ಲೇ ಚುನಾವಣಾ ಘೋಷಣೆಯಾಗಲಿದ್ದು, ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ‌. ಯಾರಿಗೂ ನ್ಯಾಯ ಕೊಡದೆ, ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ವಂಚಿಸುವ ಕೆಲಸ ಮಾಡುತ್ತಿದ್ದಾರೆ‌. ಇದು ಸಂವಿಧಾನದಕ್ಕೆ ಮಾಡಿರುವ ಅಗೌರವ. ಜನರನ್ನು ದಡ್ಡರು ಎಂದು ತಿಳಿದುಕೊಂಡಿದ್ದಾರೆ. ಎಂಪಿರಿಕಲ್ ಡಾಟ್, ಆಯೋಗ ವರದಿ ಇಲ್ಲದೆ ಮೀಸಲಾತಿ ವಿಚಾರಕ್ಕೆ ಕೈ ಹಾಕಬಾರದು. ಇದೆ ರೀತಿ ಕಾನೂನು ಇದೆ. ಇದನ್ನು ಬಿಟ್ಟು ಪೊಲಿಟಿಕಲ್ ಗಿಮಿಕ್ ಮಾಡಲು ಹೊರಟಿದ್ದಾರೆ. ಎಲ್ಲ‌ ಕಾಲದಲ್ಲಿ ಮೀಸಲಾತಿ ಕೊಟ್ಟು, ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ಇದನ್ನೂ ಓದಿ:ರಾಹುಲ್​ ಗಾಂಧಿ ಅನರ್ಹತೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್​ನಿಂದ ಸಂಕಲ್ಪ ಸತ್ಯಾಗ್ರಹ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
