ಬೆಳಗಾವಿ:ಬಿಜೆಪಿ ಅವರು ಎಷ್ಟೇ ಸುಳ್ಳು ಹೇಳಿದರೂ, ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ವಾಣಿ ಅವರನ್ನು ಸೈಡ್ ಲೈನ್ ಮಾಡಿ ಅವಮಾನ ಮಾಡಿದ್ದು ಯಾರು?ರಾಜಕೀಯವಾಗಿ ಮೋದಿಯವರಿಗೆ ಜೀವನ ಕೊಟ್ಟವರನ್ನ ಸೈಡ್ ಲೈನ್ ಮಾಡಿದ್ದಾರೆ. ಎಷ್ಟೇ ಸುಳ್ಳು ಹೇಳಿದರೂ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಈ ಬಾರಿ ಬಿಜೆಪಿ ತೆಗೆದು ಹಾಕಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬರುತ್ತದೆ ಎಂದರು.
ಇದನ್ನೂ ಓದಿ:ಮಾ.9 ರಿಂದ ಆರಂಭವಾಗಲಿರುವ ಪಿಯುಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬರುವಂತಿಲ್ಲ!
ಪ್ರಧಾನಿ ನರೇಂದ್ರ ಮೋದಿಯವರ ಬೆಳಗಾವಿ ರೋಡ್ ಶೋ ಗೆ 500 ರೂಪಾಯಿ ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು ಅಂತಾ ನಾನು ಹೇಳಿದ್ದೆ. ಅದನ್ನು ಬಿಜೆಪಿಯವರು ತಿರುಚಿ ಕಾಂಗ್ರೆಸ್ ಸಭೆಗೆ ಜನರನ್ನು 500 ರೂ. ಕೊಟ್ಟು ಕರೆದುಕೊಂಡು ಬರುತ್ತಾರೆ ಎನ್ನುವ ಅರ್ಥ ಬರುವಂತೆ ಮಾಡಿದ್ದಾರೆ. ಬಿಜೆಪಿ ಅವರು ಪ್ರತಿ ಸಭೆಗೂ ಕೂಡ ಸರ್ಕಾರದ ಹಣ, ಲೂಟಿ ಹೊಡದ ಹಣ, ಲಂಚದ ಹಣದಿಂದ ಪ್ರಚಾರ ಕೈಗೊಳ್ಳುತ್ತಾರೆ. ಚುನಾವಣೆ ಆಯೋಗ ಕೂಡ ಇಂದು ಸುಮ್ಮನೆ ಇದೆ. ಕೂಡಲೇ ಚುನಾವಣೆ ಘೋಷಣೆ ಮಾಡಿ, ನೀತಿ ಸಂಹಿತೆ ಜಾರಿಯಾಗಲಿ ಅಂತಾ ನಾನು ಚುನಾವಣೆ ಆಯೋಗಕ್ಕೆ ಮನವಿ ಕೊಡುತ್ತೇನೆ ಎಂದರು.
ಇದನ್ನೂ ಓದಿ:ಕೈಲಾಸ ದೇಶಕ್ಕಾಗಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ
ಅಶ್ವಥ್ ನಾರಾಯಣ್ ಟಿಪ್ಪು ಮುಗಿಸಿದ ರೀತಿಯಲ್ಲಿ ನನ್ನಾ ಮುಗಿಸಿ ಎನ್ನುತ್ತಿದ್ದರು. ಆಗ ಪ್ರಧಾನ ಮಂತ್ರಿ ತಲೆ ಮೇಲೆ ಹೊಡೆದು ಹೀಗೆಲ್ಲ ಮಾತನಾಡ ಬೇಡಾ ಎಂದು ಹೇಳ ಬೇಕಿತ್ತು. ನೀನು ಮಂತ್ರಿಯಾಗಲು ಯೋಗ್ಯನಲ್ಲ ಎಂದು ಸಚಿವ ಸ್ಥಾನದಿಂದ ಕೆಳಗಿಳಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಕಲಬೆರಕೆ ಪದಾರ್ಥಗಳ ಅಭಿಷೇಕದಿಂದಾಗಿ ಶಿವಲಿಂಗ ಬಿರುಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
