ಬೆಂಗಳೂರು:ಬಜೆಟ್ ಮೇಲೆ ಚರ್ಚೆಯಾಗದಿದ್ದರೂ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತರಾತುರಿಯಲ್ಲಿ ಉತ್ತರ ಓದಿದ್ದಾರೆ. ಅದು ಹೇಗಿತ್ತೆಂದರೆ, ಸಂತೆಯಲ್ಲಿ ಮಾನಮರ್ಯಾದೆ ಹೋಗುತ್ತಿದ್ದವರು ಸೊಪ್ಪು ಸದೆಯಲ್ಲಿ ಮಾನ‌ಮುಚ್ಚಿಕೊಂಡಂತಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.
ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲಾಪದಲ್ಲಿ ನಾವು ಎತ್ತಿದ ಅನೇಕ ವಿಚಾರಕ್ಕೆ ಸರ್ಕಾರ ಉತ್ತರವನ್ನೇ ನೀಡಿಲ್ಲ. ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ರಾಜ್ಯದ ಬದ್ಧ ವೆಚ್ಚ ಶೇ.102 ತಲುಪಿದೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಈ ವರ್ಷ ಆದಾಯ ಕೊರತೆ 19 ಸಾವಿರ ಕೋಟಿಗಿಂತ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು, 2024-25ಕ್ಕೆ 58 ಸಾವಿರ ಕೋಟಿ ರೂ. ತಲುಪಲಿದೆ. ಅದನ್ನು ಸಾಲ‌ ಮಾಡಿ ತುಂಬಿಸಬೇಕಾಗುತ್ತದೆ.‌ ಕೇವಲ‌ ಅವರು (ಸಿಎಂ) ಹೇಳಿದ್ದು ಮಾತ್ರ ಬರೆಯಬೇಡಿ, ನಾನು ಹೇಳಿದ್ದೂ ಬರೆಯಿರಿ. ಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ:ಸದನದಲ್ಲಿ ಬಿಸಿಯೇರಿಸಿದ ‘ಸಿಂಗಲ್​ ಹೆಂಡ್ತಿ’… ಸಚಿವರ ವಿರುದ್ಧ ಗರಂ, ಕ್ಷಮೆ ಕೋರಿದ ಸುಧಾಕರ್​
ಈ ರಾಜ್ಯ ಇವರ ಕೈಯಲ್ಲಿದ್ದರೆ ಹಣಕಾಸು ಶಿಸ್ತು ತರಲು ಸಾಧ್ಯವೇ? ನಾನು ಹದಿಮೂರು ಬಜೆಟ್ ಮಂಡಿಸಿದ್ದು ಶಿಸ್ತು ಕಾಪಾಡಿದ್ದೆ, ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಬದ್ಧ ವೆಚ್ಚ ಹೆಚ್ಚಾಗಿದೆ. ಇದರ ಬಗ್ಗೆ ಅವರು ಏನೂ ಹೇಳಿಲ್ಲ ಎಂದರು.
ಆಹಾರ, ಇಂಧನ ಸಬ್ಸಿಡಿಯಿಂದ ಬದ್ಧ ವೆಚ್ಚ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ನಾವು ಇರುವಾಗ ಇವು ಹೊರೆಯಾಗಿರಲಿಲ್ಲವೇ? ಎಂದು ಪ್ರಶ್ನಿಸಿದ ಅವರು ಇವರು ಬಂದು ನಿಗಮ‌ ಮಾಡಿದ್ದು ಬಿಟ್ಟು ಬೇರೇನು ಮಾಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಬರಬೇಕಾದ ಹಣವೂ ಬರಲಿಲ್ಲ. ಸಹಾಯ ಧನವೂ ಬರಲಿಲ್ಲ. ರಾಜ್ಯದ ಹಿತ ಬಲಿ‌ ಕೊಡುತ್ತಿದ್ದಾರೆ, ನಮಗೆ ಬರಬೇಕಾದ ಪಾಲು ಕೊಡಿ ಎಂದು ಎಂದಿಗೂ ಸಹ ಸಿಎಂ ಗಟ್ಟಿಯಾಗಿ ಕೇಳಲಿಲ್ಲ. ಇವರಿಗೆ ಧಮ್ಮಿಲ್ಲ, ಹೇಡಿ ಸರ್ಕಾರ ಎಂದು ಛೇಡಿಸಿದರು.
ಸರ್ಕಾರಕ್ಕೆ ಏನು ಕೇಳಿದರೂ ಕರೊನಾ ಕರೊನಾ ಕರೊನಾ ಎನ್ನುತ್ತಾರೆ. ಶಾಲೆ ಕಟ್ಟಲು, ರಸ್ತೆ, ಕುಡಿಯುವ ನೀರಿಗೆ ಹಣ ಕೇಳಿದರೆ ಕರೊನಾ ಅನ್ನುತ್ತಾರೆ. ಕೇಂದ್ರದಿಂದ ಬರಬೇಕಾದ ಹಣ ಪಡೆದುಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದರು‌.
ಬಾಯ್​ಫ್ರೆಂಡ್​ ಅನ್ನು ಮನೆಗೆ ಕರೆದುಕೊಂಡು ಬಂದಳೆಂದು 6ನೇ ಮಹಡಿಯಿಂದ ಮಹಿಳೆಯನ್ನು ದೂಡಿ ಕೊಲೆ ಮಾಡಿದ ಮಾಲೀಕ!

ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ! ಇನ್ನಷ್ಟು ಇಳಿಯುವ ಸಾಧ್ಯತೆ..!

ಆಮೆಗಳನ್ನೇ ತಿನ್ನುತ್ತವೆ ಏಡಿಗಳು! ಏಡಿ ಹುಟ್ಟಿದ್ದು ಜೇಡದಿಂದ..! ಏಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳಿವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
