ಬೆಂಗಳೂರು:ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ 2022ನೇ ಸಾಲಿನ ಇನ್ಸೈಡ್ ಐಎಎಸ್ ಸಂಸ್ಥೆಯ ಸಾಧಕರಿಗೆ ಇಂದು ಖಾಸಗಿ ಹೋಟೆಲ್​ನಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಭಾರತ ಒಂದು ರೂರಲ್ ಕ
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಇನ್ಸೈಡ್ ಐಎಎಸ್ ಸಂಸ್ಥಾಪಕ ವಿನಯ್, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ‌ ವಿನಯ್ ಕುಮಾರ್ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಸಿಎಂಗೆ ಮನವಿ ಮಾಡಿದರು ಕನ್ನಡ ಮಾತನಾಡಿದ್ದು ಮಾತೃ ಭಾಷೆಯ ಅಭಿಮಾನ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಅವರು “ಕಾರ್ಯಕ್ರಮ ನಡೆಯುತ್ತಿರುವುದು ಕರ್ನಾಟಕದಲ್ಲಿ. ಹೊರಗಿನ ಕೆಲವೊಬ್ಬರಿಗೆ ಕನ್ನಡ ಅರ್ಥ ಆಗದೆ ಇರಬಹುದು. ಆದ್ರೂ ಕೂಡ ಕನ್ನಡದಲ್ಲೆ ಮಾತನಾಡ್ತೀನಿ” ಎಂದು ಹೇಳಿದ್ದಾರೆ.
ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ “ಬ್ರಿಟಿಷ್ ಕಾಲದಲ್ಲಿ ICS ಅಂತ ಇತ್ತು. ಆದ್ರೆ ಸ್ವತಂತ್ರ ನಂತರ IAS, IPS ಎಂದು ಬದಲಾಯ್ತು. ಪ್ರಜಾಪ್ರಭುತ್ವ ಅಂದ್ರೆ ಜನರಿಗಾಗಿ ಇರುವ ಸರ್ಕಾರ
ಪ್ರಜೆಗಳೇ ಸುಪ್ರೀಂ ಇನ್ ಡೆಮಾಕ್ರಸಿ. ಜನರಿಗಾಗಿ ಪ್ರಜಾಪ್ರಭುತ್ವ ಇರೋದು. ಜನರ ಸೇವೆಗಾಗಿ ಉದ್ಯೋಗಕ್ಕೆ ಹೋಗುತ್ತಿದ್ದೇವೆ. ಜನರಿಯಿಂದ ಸರ್ಕಾರ ಆಯ್ಕೆ ಆಗುತ್ತೆ. ಬದಲಾವಣೆ ತರಲು ಸರ್ಕಾರ ನೀತಿ ನಿಯಮ ತರುತ್ತೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ IASನವರು ಮಾಡುತ್ತಾರೆ. ಸರ್ಕಾರ ಮತ್ತು ಜನರ ಮಧ್ಯೆ IAS ಅಧಿಕಾರಗಳು ಸೇತುವೆ ಆಗಿರುತ್ತಾರೆ.
ಚುನಾವಣೆಯಲ್ಲಿ ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಜವಾಬ್ದಾರಿ. ನಾವು ಜನರಿಗೆ ಉತ್ತರದಾಯಿತ್ವ ಆಗಿರಬೇಕು. ಇಲ್ಲ ಅಂದ್ರೆ ನಾವು ರಾಜಕಾರಣಿ ಆಗಿರಲು ಲಾಯಕ್ಕಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸುವುದು ನಮ್ಮ ಆದ್ಯ ಕರ್ತವ್ಯ” ಎಂದು ಹೇಳಿದ್ದಾರೆ.
“ಎಲ್ಲರಿಗೂ ಒಂದು ವೋಟ್ ಒಂದು ಮೌಲ್ಯ ಇದೆ. ಆದರೆ ಅದೇ ಪರಿಸ್ಥಿತಿ ಸಾಮಾಜಿಕವಾಗಿ ಇಲ್ಲ. ನಮ್ಮ ಮನೆಯಲ್ಲೇ ನಾನೇ ಒಬ್ಬನೇ ಓದಿರುವವನು. ನಾವು ಏನು ಓದಬೇಕು ಎಂದು ಹೇಳುವವರು ಯಾರೂ ನಮ್ಮ ಮನೆಯಲ್ಲಿ ಇರಲಿಲ್ಲ. ಇಲ್ಲ ಅಂದ್ರೆ ನಾವು IAS ಓದುತ್ತಿದ್ದೆ ಏನೋ.
IAS ಓದಬೇಕು ಎಂಬುದೆ ನನಗೆ ಗೊತ್ತಿರಲಿಲ್ಲ. ಅಂಬೇಡ್ಕರ್ ಆಶಯದಂತೆ ನಡೆದುಕೊಂಡ್ರೆ ಸಮಾಜ ಬದಲಾಗುತ್ತೆ. ಇಲ್ಲಾ ಅಂದ್ರೆ IAS ಟಾಪರ್ ಆದ್ರೂ ಅಷ್ಟೇ ಏನೂ ಪ್ರಯೋಜನ ಇರಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು ಆದ್ರೂ ಸಮಾನತೆ ಬಂದಿಲ್ಲ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ “ಇಂಡಿಯಾ ಇಸ್ ಎ ರೂರಲ್ ಕಂಟ್ರಿ” ಎಂದಿದ್ದಾರೆ. ನಂತರ ಸಮಾನತೆ ಬಗ್ಗೆ ಮಾತನ್ನು ಮುಂದುವರೆಸಿದ ಸಿಎಂ, “ಜನರಿಗೆ IAS ಓದುವ ಅವಕಾಶ ಮಾಡಿಕೊಡಬೇಕು. ಹಸಿವು ಗೊತ್ತಿರುವವನಿಗೆ ಹಸಿವನ್ನು ನೀಗಿಸುವುದು ಗೊತ್ತಿರುತ್ತೆ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
