ಬೆಂಗಳೂರು:ನಾಳೆ ಹಾಗೂ ನಾಡಿದ್ದು ಬಿಜೆಪಿಯ ವಿರೋಧಿ ಪಕ್ಷಗಳು ಕರ್ನಾಟಕದಲ್ಲಿ ಮಹಾಘಟಬಂಧನದ ಎರಡನೇ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರಿಗೆ ಭರ್ಜರಿ ಔತಣಕೂಟ ಏರ್ಪಡಿಸಲಿದ್ದಾರೆ.
ಈ ಮಹತ್ವದ ಸಭೆ ನಾಳೆ ಸಂಜೆ 6ಕ್ಕೆ ಆರಂಭ ಆಗಲಿದ್ದು ಮೊದಲ ಸುತ್ತಿನ ಸಭೆ ಬಳಿಕ ಔತಣಕೂಟ ಇರಲಿದೆ. ಈ ಸಭೆಗೆ ಆಗಮಿಸಲಿರುವ ಸುಮಾರು 24 ಪಕ್ಷಗಳ 80ಕ್ಕೂ ಹೆಚ್ಚು ನಾಯಕರಿಗೆ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ನಾಳೆ ರಾತ್ರಿ ಔತಣ ಕೂಟ ಆಯೋಜಿಸಲಾಗಿದೆ.

ಇನ್ನು ಮಹಾಘಟಬಂಧನ್ ಸಭೆ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ ನೀಡಿದ್ದು “ಇದು ರಾಷ್ಟ್ರೀಯ ವಿಚಾರ. ಕಳೆದ ಒಂಬತ್ತು ವರ್ಷದಿಂದ ಬಿಜೆಪಿ ಸರ್ಕಾರ ನಡೆಯುತ್ತಿದೆ. ಅದರಲ್ಲಿ ಬಹಳಷ್ಟು ಅಭಿವೃದ್ಧಿ ಕುಂಠಿತವಾಗಿದೆ. ಎಲ್ಲಾ ರಾಜ್ಯದಲ್ಲೂ ಭಯದ ವಾತವರಣ ಸೃಷ್ಟಿಯಾಗಿದೆ
ಏಕರೂಪ ನಾಗರಿಕ ಸಂಹಿತೆ ಜನ ಸಾಮಾನ್ಯರಲ್ಲಿ ಅಶಾಂತಿ ಮೂಡಿಸುತ್ತಿದೆ. ಮುಂದೆ ಬರುವ 2024 ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ಹೀಗಾಗಿ ಮಹಾಘಟಬಂಧನ್ ಪ್ರಯತ್ನ ನಡೆದಿದೆ. ಎಲ್ಲಾ ಪಕ್ಷದ ಹಿರಿಯರು, ಹಾಗೂ ಸುಮಾರು 20 ಪಕ್ಷಗಳ 80ಕ್ಕೂ ಹೆಚ್ಚು ‌ಮುಖಂಡರು ಭಾಗಿಯಾಗುತ್ತಾರೆ. ನಮ್ಮ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಬಿಜೆಪಿ ದೃಷ್ಟಿಯಲ್ಲಿ ಇದು ಬೇರೆ ರೀತಿ ಇರಬಹುದು” ಎಂದಿದ್ದಾರೆ.

ಇನ್ನು ಜೆಡಿಎಸ್‍, ಈ ಮಹಾಘಟಬಂಧನದ ಭಾಗವಾಗುತ್ತಾ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಹಿಂದಿನ ಸಭೆಗೆ ಜೆಡಿಎಸ್‍ಗೆ ಆಹ್ವಾನವನ್ನೂ ನೀಡಿರಲಿಲ್ಲ ಎಂದು ಕುಮಾರ ಸ್ವಾಮಿ ಹೇಳಿದ್ದರು. ಇದರಿಂದಾಗಿ ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ನಡೆದಿದೆಯಾ ಎನ್ನುವ ಅನುಮಾನಳು ಮೂಡಿದ್ದವು. ಗೃಹ ಸಚಿವ ಡಾ. ಪರಮೇಶ್ವರ್ ಜೆಡಿಎಸ್ ನಿಲುವಿನ ವಿಚಾರ ಮಾತನಾಡಿದ್ದು “ಚುನಾವಣಾ ಹತ್ತಿರ ಬಂದಾಗ ಮಾಡಬಹುದು. ನನಗೆ ಅದು ಗೊತ್ತಿಲ್ಲ. ಈ ವಿಚಾರಗಳನ್ನು ಅವರ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಜೆಡಿಎಸ್ ಗೆ ಆಹ್ವಾನ ನೀಡುವ ವಿಚಾರವನ್ನು ಎಐಸಿಸಿ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಇದರ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತಾಗಿ ವರಿಷ್ಠರ ಮಟ್ಟದಲ್ಲಿ ಚರ್ಚೆ ಆಗುತ್ತದೆ” ಎಂದು ಹೇಳಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ 2 ನೇ ವಿಪಕ್ಷಗಳ ಸಭೆಗೆ ಈ ನಾಯಕರುಗಳು ಹಾಜರಾಗಲಿದ್ದಾರೆ:
ಈ ಸಭೆಯಲ್ಲಿ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ಕೊಂಗು ದೇಸ ಮಕ್ಕಳ್ ಕಚ್ಚಿ, ವಿಡುತಲೈ ಚಿರುತೈಗಲ್ ಕಚ್ಚಿ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್‍ನ ಜೋಸೆಫ್ ಮತ್ತು ಮಣಿ ಭಾಗವಹಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
