ಬೆಂಗಳೂರು:ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆದಿದೆ.
ನಾಯಕತ್ವ ಬದಲಾವಣೆ ಕುರಿತು ಸಿದ್ದರಾಮಯ್ಯ ಆಡಿದ ಮಾತುಗಳಿಗೆ ಪ್ರತಿಕ್ರಿಸಿದ ರೇಣುಕಾಚಾರ್ಯ, ‘ಇವರಿಗೆ ಯಡಿಯೂರಪ್ಪ ಬದಲಾವಣೆ ಕನಸು ಯಾವಾಗ ಬಿತ್ತು. ಹಗಲುಗನಸೋ? ಇರುಳ್ಗನಸೋ ಹೇಳಲಿ’ ಎಂದು ಕುಟುಕಿದರು. ‘ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಲ್ಲೇ ಒಳ ಜಗಳವಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಅವರ ತಟ್ಟೆಯಲ್ಲಿ ಏನಿದೆ ಅದನ್ನು ನೋಡಿಕೊಳ್ಳಲಿ’ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ನನಗಿರುವ ಮಾಹಿತಿ ಆಧಾರವಾಗಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಾರೆ. ಎರಡು ವರ್ಷ ಅವರೇ ಉಳಿದುಕೊಳ್ಳುತ್ತೀನಿ ಅನ್ನೋದಾದರೆ ಉಳಿದುಕೊಳ್ಳಲಿ ನಮಗೇನು? ಏನು ಕೆಲಸ ಮಾಡದಿರುವ ಮುಖ್ಯಮಂತ್ರಿ ಅಲ್ವಾ…’ ಎಂದು ಲೇವಡಿ ಮಾಡಿದರು.
‘ರಮೇಶ್ ಜಾರಕಿಹೋಳಿ ಮನೆಯಲ್ಲಿ ಒಂದು ಕಡೆ, ರೇಣುಕಾಚಾರ್ಯ ಮನೆಯಲ್ಲಿ ಒಂದು ಕಡೆ ಮೀಟಿಂಗ್ ಮಾಡುತ್ತಾರಲ್ಲ, ಏನನ್ನುವುದು? ಅದನ್ನು ಬಹಳ ಗಟ್ಟಿ ಮಡಿಕೆ ಅನ್ನುವುದೇ? ಸಿಎಂ ಮಂತ್ರಿ ಮಂಡಲ ಮಾಡುತ್ತಾರೋ, ಮಂತ್ರಿ ಮಂಡಲ ಕೆಡವಿಕೊಳ್ಳುತ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇಲ್ಲ. ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಅದರ ಕಡೆ ಗಮನ ಕೊಡುವುದು ಬಿಟ್ಟು ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಂಡು ಕುಳಿತರೆ ಏನು ಪ್ರಯೋಜನ?’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಈ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ‘ನಾನು ಬ್ಲಾಕ್ ಮೇಲ್ ಮಾಡುವ ವ್ಯಕ್ತಿಯಲ್ಲ. ನಾನು ನೇರಾ ಸೀದಾ ಸಾದ ವ್ಯಕ್ತಿ. ನಾನು ತಪ್ಪು ಮಾಡಿದ್ದರೆ ಆತ್ಮಾವಲೋಕನ ಮಾಡಿಕೊಳ್ಳುವವನು. ಸಚಿವ ಸ್ಥಾನಕ್ಕೆ ಬ್ಲಾಕ್‌ಮೇಲ್ ಮಾಡಲ್ಲ. ಗುಂಪುಗಾರಿಕೆಯನ್ನೂ ಮಾಡಲ್ಲ’ ಎಂದರು.
‘ನಮ್ಮ ಮನೆಯಲ್ಲೂ ನಾವು- ಶಾಸಕರು ಸೇರುತ್ತೇವೆ, ರಮೇಶ್ ಜಾರಕಿಹೊಳಿಯವರ ಮನೆಗೂ ಹೋಗುತ್ತೇವೆ. ಇದು ಊಟಕ್ಕೆ ಸೇರೋದಷ್ಟೇ, ನಾವು ಗುಂಪುಗಾರಿಕೆ ಮಾಡಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ಇರೋದು ನಾನೊಬ್ಬಳೇ ಮಹಿಳಾ ಮಂತ್ರಿ: ಜೊಲ್ಲೆ ಗರಂ

ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
