ಬೆಂಗಳೂರು:ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇಂದು ಡಿಜೆ ಹಳ್ಳಿಗೆ ಭೇಟಿ ನೀಡಿದರು. ಗಲಭೆ ಸಂದರ್ಭದಲ್ಲಿ ಹಾನಿಗೊಳಗಾದ ಅಖಂಡ ಶ್ರೀನಿವಾಸ್​ ಅವರ ಮನೆ, ಪೊಲೀಸ್​ ಠಾಣೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಡಿಸಿಪಿ ಶರಣಪ್ಪ ಸೇರಿ ಹಲವು ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಗಲಭೆ ಬಗ್ಗೆ ವಿವರ ಪಡೆದುಕೊಂಡರು. ನಂತರ ಮಾತನಾಡಿ, ನಾನು ಆಸ್ಪತ್ರೆಯಲ್ಲಿ ಇದ್ದುದ್ದರಿಂದ ಡಿಜೆ ಹಳ್ಳಿಗೆ ಬರಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಪಾಪ ನಾಲ್ವರು ಮೃತಪಟ್ಟಿದ್ದಾರೆ.
ನವೀನ್​ ಎಂಬಾತ ಅವಹೇಳನಕಾರಿ ಪೋಸ್ಟ್​ ಹಾಕಿದ್ದ. ಇದರಿಂದ ನೊಂದವರು ದೂರು ಕೊಟ್ಟರು. ತಕ್ಷಣವೇ ಎಫ್​​ಐಆರ್​ ದಾಖಲಾಗಬೇಕು, ಆತನನ್ನು ಕೂಡಲೇ ಬಂಧಿಸಬೇಕು ಎಂಬುದು ಮನವಿದಾರರ ಆಗ್ರಹವಾಗಿತ್ತು. ಆದರೆ ಪೊಲೀಸರು ನಿಧಾನ ಮಾಡಿದ್ದರಿಂದ ಇಷ್ಟೆಲ್ಲ ಆಗಿದೆ ಎಂದು ಹೇಳಿದರು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ. ಆದರೆ ಬಂಧನವಾಗಿರುವವರಲ್ಲಿ ಅಮಾಯಕರಿದ್ದಾರೆ. ತನಿಖೆ ಮಾಡುವಾಗ ಸಾಕ್ಷಿ ಸಿಕ್ಕಿಲ್ಲವೆಂದರೆ ಅವರನ್ನು ಬಿಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇದನ್ನೂ ಓದಿ:ಕರೊನಾ ಭೀತಿಯಲ್ಲಿ ಸ್ಯಾನಿಟೈಸರ್‌ ಮೊರೆ ಹೋಗಿರುವಿರಾ? ಹಾಗಿದ್ದರೆ ಇದನ್ನೊಮ್ಮೆ ಓದಿಬಿಡಿ…
ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಸುಟ್ಟಿದೆ. ವಾಹನಗಳೂ ಸುಟ್ಟಿವೆ. ಸರ್ಕಾರ ಪರಿಹಾರ ಕೊಡಬೇಕು. ತನಿಖೆ ಶೀಘ್ರವೇ ಮುಗಿಯಬೇಕು. ಪ್ರಕರಣದ ಎಲ್ಲ ಸತ್ಯವೂ ಹೊರಬರಬೇಕು. ಹೈಕೋರ್ಟ್​ ಜಡ್ಜ್​​ರಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕರೊನಾದ ನಡುವೆಯೂ 22 ಸಾವಿರ ಅಡಿ ಮೇಲೇರಿ ಬಾವುಟ ಹಾರಿಸಿದ ಸಾಹಸಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 4 =
Remember me
