ಬೆಂಗಳೂರು:ಕಾಂಗ್ರೆಸ್ ‌ಶಾಸಕಾಂಗ‌ ಪಕ್ಷದ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ನಡೆದಿದ್ದು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ.
ಜೂ.5ರಂದು ವಿಧಾನಸಭಾ ಕಲಾಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಪೆನ್​ಡ್ರೈವ್​ ಹಿಡಿದು ಬಂದು, ಎಲ್ಲರ ಗಮನ ಸೆಳೆದಿದ್ದರು. ಅವರು ತೋರಿಸಿದ್ದ ಪೆನ್​ಡ್ರೈವ್​ನಲ್ಲಿ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಮಹತ್ವದ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಪೆನ್​ಡ್ರೈವ್​ ಹಿಡಿದು ವಿಧಾನಸೌಧಕ್ಕೆ ಎಚ್​ಡಿಕೆ ಎಂಟ್ರಿ: ಸ್ಫೋಟಗೊಳ್ಳುತ್ತಾ ಸಚಿವರೊಬ್ಬರ ಲಂಚದ ಆಡಿಯೋ?
ಕಲಾಪಕ್ಕೆ ಹಾಜರಾಗುವ ಮುನ್ನ ವಿಧಾನಸೌಧದ ಮುಂದೆ ಎಚ್​ಡಿಕೆ ಪೆನ್​ಡ್ರೈವ್ ಪ್ರದರ್ಶನ ಮಾಡಿದ್ದು ಅದರಲ್ಲಿ ಸಚಿವರೊಬ್ಬರ ಭ್ರಷ್ಟಾಚಾರ ವಿಚಾರ ಅಡಗಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಎಚ್​ಡಿಕೆ, ಸಾಕ್ಷಿ ಬೇಕು ಅಂತ ಹೇಳಿದ್ರಲ್ಲ ಅದಕ್ಕೆ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದು ವರ್ಗಾವಣೆ ದಂಧೆಯ ಪೆನ್ ಡ್ರೈವ್ ಎಂದು ಹೇಳಿದ್ದರು.
ಇದನ್ನೂ ಓದಿ:ಪೆನ್​ಡ್ರೈವ್ ರಹಸ್ಯ: ಮುರುಗೇಶ್ ನಿರಾಣಿ ಯೂಟರ್ನ್
ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಬೆಚ್ಚಿಬಿದ್ದಿದೆಯಾ ಎನ್ನುವ ಅನುಮಾನ ಎದುರಾಗಿದ್ದು ಇದೀಗ ಸಿಎಂ ಸಿದ್ದರಾಮಯ್ಯ, ಶಾಸಕರಿಗೆ ಕಿವಿಮಾತು ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಸಿಎಂ, “ವಿಪಕ್ಷಗಳಿಂದ ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿರುತ್ತವೆ. ಎಲ್ಲರೂ ಎಚ್ಚರಿಕೆ ಇಂದ ಇರಿ.
ಇದನ್ನೂ ಓದಿ:ವರ್ಗಾವಣೆ ದಂಧೆ ಆರೋಪ; ಮಾಜಿ ಸಿಎಂ ಎಚ್​.ಡಿ.ಕೆ-ಸಚಿವ ಜಾರ್ಜ್​ ನಡುವೆ ಮಾತಿನ ಚಕಮಕಿ
ಸರ್ಕಾರದ ಆರಂಭದಲ್ಲಿ ಈಸಿಯಾಗಿ ಟ್ರ್ಯಾಪ್ ಆಗುತ್ತೀರಿ. ಹೀಗಾಗಿ ಟ್ರ್ಯಾಪ್ ಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ” ಎಂದು ನೂತನ ಶಾಸಕರೂ, ಸಚಿವರು ಸೇರಿದಂತೆ ಎಲ್ಲರಿಗೂ ಸಲಹೆ ನೀಡಿದ್ದಾರೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − three =
Remember me
