ಬೆಂಗಳೂರು:ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಕಾಂಗ್ರೆಸ್ ಪಕ್ಷಕ್ಕೆ ತಲೆಬಿಸಿ ತಂದೊಡ್ಡಿದ್ದ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರನ್ನು ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಶಃ ಸಲರಾಗಿದ್ದಾರೆ.ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಬಿ.ಆರ್.ಪಾಟೀಲ್ ಪತ್ರ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿತ್ತು. ಪ್ರತಿಪಕ್ಷಕ್ಕೂ ಇದು ಅಸವಾಗಿತ್ತು.ಇಬ್ಬರು ಸಚಿವರ ವಿರುದ್ಧ ಪಾಟೀಲ್ ಅಸಮಾಧಾನ ಹೊರಹಾಕಿರುವ ಜತೆಗೆ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂಬುದು ಅವರ ಒತ್ತಾಯ. ಈ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ ವತ್ತು ಕ್ರಮಕೈಗೊಳ್ಳುವವರೆಗೂ ಅಧಿವೇಶನಕ್ಕೆ ಬರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದೇ ಕಾರಣಕ್ಕೆ, ಸಚಿವ ಸಂಪುಟ ಸದಸ್ಯರೆಲ್ಲ ಪರಿಸ್ಥಿತಿ ತಹಬದಿಗೆ ತರಲು ಪ್ರಯತ್ನ ನಡೆಸಿದರು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಆರ್ ಪಾಟೀಲ್‌ಗೆ ಕರೆ ಮಾಡಿ ಅವರ ಕಳವಳಕ್ಕೆ ಕಿವಿಗೊಟಿಟ್ಟದಲ್ಲದೆ, ಬುಧವಾರ ರಾತ್ರಿಯೊಳಗೆ ಬೆಂಗಳೂರಿಗೆ ಬಂದು ತಮ್ಮನ್ನು ಕಾಣುವಂತೆ ಸೂಚಿಸಿದ್ದರು. ಆ ಪ್ರಕಾರ ಪಾಟೀಲರು ಕ್ಷೇತ್ರದಿಂದ ಸಂಜೆ ವೇಳೆಗೆ ಬೆಂಗಳೂರು ತಲುಪಿ, ಸಿಎಂ ಜತೆ ಸಭೆ ನಡೆಸಿದರು.ಇಡೀ ಬೆಳವಣಿಗೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ, ಬಿ.ಆರ್. ಪಾಟೀಲ್ ಹಿರಿಯ ನಾಯಕರು. ಅವರ ಪ್ರಭಾವ ನನ್ನ ಮೇಲೂ ಇದೆ. ಅವರು ಎಂದೂ, ಎಲ್ಲೂ ಹೋದವರಲ್ಲ. ಪತ್ರದಲ್ಲಿ ಸಭೆ ಆಗಬೇಕಿತ್ತು, ಕಾರಣಾಂತರಗಳಿಂದ ಆಗಿಲ್ಲ ಎಂದಿದ್ದಾರೆ. ಹಲವು ಕಾರಣಗಳಿಂದ ಸಭೆ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.ಅಂದು ಸದನದಲ್ಲಿ ಉತ್ತರ ಕೊಡುವ ವೇಳೆ ನಾನು ಇರಲಿಲ್ಲ, ಹಾಗಾಗಿ ಕೃಷ್ಣ ಬೈರೇಗೌಡ ಉತ್ತರ ಕೊಟ್ಟಿದ್ದಾರೆ. ಕೆಆರ್‌ಐಡಿಎಲ್ ಅಕ್ರಮದ ಬಗ್ಗೆ ಸೂಕ್ತ ತನಿಖೆ ಮಾಡಿಸುತ್ತೇವೆ. ಅವರ ಮನವಿ ಕೂಡ ತನಿಖೆ ಮಾಡಿಸಿ ಎಂದೇ ಆಗಿದೆ. ಈಗಾಗಲೆ ಆಂತರಿಕವಾಗಿ ತನಿಖೆ ಮಾಡಿಸಿದ್ದೇವೆ ಎಂದು ಹೇಳಿದರು.ನಾಗಮೋಹನ್ ದಾಸ್ ನೇತೃತ್ವದ ತನಿಖಾ ಸಮಿತಿಗೆ ನೀಡುವ ಬಗ್ಗೆ ಅವರಿಗೂ ಹೇಳಿದ್ದೆ. ಅವರೂ ಆಯ್ತು ಎಂದಿದ್ದರು. ವರದಿ ಕೂಡ ಸಿದ್ಧವಿದೆ. ಆದಷ್ಟು ಬೇಗ ತನಿಖೆಗೆ ಕೊಡುವ ನಿರ್ಣಯ ಮಾಡುತ್ತೇವೆ. ಅವರ ಪ್ರಾಮಾಣಿಕತೆ ಬಗ್ಗೆ ಯಾರೂ ಪ್ರಶ್ನೆ ಎತ್ತಿಲ್ಲ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಅವರು ಪತ್ರ ಬರೆದಿರುವ ವಿಚಾರ ತಿಳಿದಿಲ್ಲ. ಯಾವುದೇ ಶಾಸಕರಾಗಲಿ ಮಾತನಾಡಲು, ದನಿ ಎತ್ತಲು ಅವಕಾಶವಿದೆ. ಸದನದಲ್ಲಿ ಮಾತನಾಡುವಾಗ ತನಿಖೆಯಾಗಲಿ ಎಂದು ಹೇಳಿರಬಹುದು. ಕೃಷ್ಣ ಬೈರೇಗೌಡರು ಈಗಾಗಲೆ ತನಿಖೆ ಮಾಡಲು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ, ತನಿಖೆಗಳು ನಡೆಯುತ್ತಿರುವ ವಿಚಾರ ನನಗೂ ಗೊತ್ತಿದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + seven =
Remember me
