ಮೈಸೂರು:ವರುಣ ಕ್ಷೇತ್ರದಲ್ಲಿ ಜೆಡಿಎಸ್ ನಡೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀರು ಕುಡಿದಷ್ಟೇ ಸುಲಭವಾಗಿ ಗೆಲುವು ದೊರಕಲಿದೆ ಎಂದು ಹೇಳಲಾಗುತ್ತಿದೆ.
ವರುಣ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಅಭಿಷೇಕ್ ಅವರು​ ತೆರೆಮರೆಯಲಿ ಸಿದ್ದುಗೆ ಸಹಾಯ ಮಾಡ್ತಿದ್ದಾರಾ ಎಂಬ ಅನುಮಾನ ಅವರ ನಡೆಯಿಂದ ಮೂಡಿದೆ. ಏಕೆಂದರೆ, ಜೆಡಿಎಸ್​ ಅಭ್ಯರ್ಥಿ ದಿಢೀರ್​ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ:ನೋಟುಗಳ ಮೇಲೆ ವಿವಾಹಿತ ಮಹಿಳೆಯರ ಬಗ್ಗೆ ಅಸಹ್ಯ ಬರಹ: ನಿಗೂಢ ಪ್ರಕರಣ ಭೇದಿಸಿದ ಪೊಲೀಸರು
ಜೆಡಿಎಸ್ ಮೊದಲ ಪಟ್ಟಿಯಲ್ಲೇ ವರುಣ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಣೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಕೇವಲ ಒಂದು ಕ್ಷೇತ್ರದಲ್ಲಿ ಸಭೆ ನಡೆಸಿರುವ ಅಭಿಷೇಕ್, ಕಳೆದ ಒಂದು ವಾರದಿಂದ ಕ್ಷೇತ್ರದ ಜನರ ಕೈಗೆ ಸಿಗದೆ ನಾಪತ್ತೆಯಾಗಿರುದ್ದಾರೆ.
ಕ್ಷೇತ್ರದ ಜನರು ಫೋನ್ ಮಾಡಿದ್ರು ಕರೆ ಸ್ವೀಕರಿಸದೆ ಯಾರ ಕೈಗು ಸಿಗುತ್ತಿಲ್ಲ. ಪಕ್ಷದ ಮುಖಂಡರನ್ನು ಕೇಳಿದ್ರು ಸರಿಯಾದ ಉತ್ತರ ಸಿಗುತ್ತಿಲ್ಲ. ಅಭಿಷೇಕ್ ನಡೆಯಿಂದ ವರುಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಕಂಗಲಾಗಿದ್ದು, ವರಿಷ್ಟರಿಗೆ ದೂರು ನೀಡಲು ಮುಂದಾಗಿದ್ದಾರೆ.
ಒಟ್ಟಾರೆ ಜೆಡಿಎಸ್ ನಡೆಯಿಂದ ಸಿದ್ದರಾಮಯ್ಯಗೆ ನೀರು ಕುಡಿದಷ್ಟೇ ವರುಣ ಕ್ಷೇತ್ರದ ಗೆಲುವು ಸುಲಭವಾದಂತಿದೆ.(ದಿಗ್ವಿಜಯ ನ್ಯೂಸ್​)
ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ

ಸುದೀಪ್​ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ: ನಟ ಪ್ರಕಾಶ್​ ರಾಜ್​

ಸವ್ಯಸಾಚಿ ಅಂಕಣ | ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರೀತಿಯ ಮೆರವಣಿಗೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + 8 =
Remember me
