ಮಂಗಳೂರು:ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ, ಯಾರು ಬೇಡ ಅಂದವರು? ಕೇಂದ್ರ, ರಾಜ್ಯ ಸರ್ಕಾರಗಳೆರಡೂ ನಿಮ್ಮ ಕೈಯಲ್ಲೇ ಇದೆ, ನಾವು ಬ್ಯಾನ್ ಮಾಡೋದು ಬೇಡ ಎಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಉಳ್ಳಾಲ ದರ್ಗಾ ಭೇಟಿಗಾಗಿ ಆಗಮಿಸಿದ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಕಾಂಗ್ರೆಸ್ ಪಕ್ಷದಿಂದ ಯಾರೂ ಹೋಗಿಲ್ಲ ಎನ್ನುವುದು ನಿಜ, ಆದರೆ ಅದು ವೈಯುಕ್ತಿಕ ದ್ವೇಷದ ಕೊಲೆ, ಅದಕ್ಕೆ ರಾಜಕೀಯ ಬಣ್ಣ ಬಳಿಸಲಾಗಿದೆ. ಹರ್ಷ ಸಾವಿಗೂ ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ. ಹರ್ಷ ಸಾವಿನ ಬಳಿಕ ನಡೆದ ಗಲಭೆಗೆ ಸಚಿವ ಈಶ್ವರಪ್ಪ ಕಾರಣ ಎಂದೂ ಆರೋಪಿಸಿದರು.ಶಿವಮೊಗ್ಗ ಮತ್ತು ಬೆಳ್ತಂಗಡಿಯಲ್ಲಿ ನಡೆದ ಎರಡು ಕೊಲೆಗಳನ್ನೂ ಖಂಡಿಸುತ್ತೇನೆ, ಧರ್ಮಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ, ಇದರಲ್ಲಿ ಬಜರಂಗ ದಳ ಕೈವಾಡವಿದೆ. ಜೀವ ಅಮೂಲ್ಯ, ಯಾರೂ ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದು ಎಂದರು.
ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಎರಡನೇ ಇನ್ನಿಂಗ್ಸ್ ಫೆ.27ರಂದು ಪ್ರಾರಂಭವಾಗುತ್ತಿದ್ದು, ನಮ್ಮ ನೀರು ನಮ್ಮ ಹಕ್ಕು ಘೋಷಣೆ ಇರಲಿದೆ ಎಂದರು. ಇನ್ನು 50-60 ವರ್ಷಗಳವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲಿದೆ, ಇಂದಿಗೂ ಬೆಂಗಳೂರಿನಲ್ಲಿ ಶೇ.20 ನಾಗರಿಕರಿಗೆ ಕಾವೇರಿ ನೀರು ಸಿಗುತ್ತಿಲ್ಲ ಎಂದರು.
ಮುಂದಿನ ಸಿಎಂ ಸಿದ್ದರಾಮಯ್ಯ!:ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲು ಶನಿವಾರ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ. ವಿಮಾನ ನಿಲ್ದಾಣದಿಂದ ಉಳ್ಳಾಲಕ್ಕೆ ಹೊರಡುವ ವೇಳೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆಯನ್ನೂ ಕೂಗಿದ್ದಾರೆ. ಸಿದ್ದರಾಮಯ್ಯ ಕುಳಿತ ಕಾರಿಗೆ ಶಾಸಕ ಯು.ಟಿ.ಖಾದರೇ ಚಾಲಕರಾಗಿದ್ದುದು ಮತ್ತೊಂದು ಗಮನಾರ್ಹ ಅಂಶ.
ಯೂಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸಕಾಲದಲ್ಲಿ ಕರೆತರದೆ ಕೇಂದ್ರ, ರಾಜ್ಯ ಸರ್ಕಾರಗಳು ಮೈಮರೆತಿವೆ. ರಷ್ಯಾ ಯುದ್ಧ ಸಾರುವುದು 15 ದಿನ ಮೊದಲೇ ಗೊತ್ತಿದ್ದರೂ ಸರ್ಕಾರಗಳು ನಮ್ಮ ಈ ವಿದ್ಯಾರ್ಥಿಗಳನ್ನು ಕರೆತರುವ ಯತ್ನ ಮಾಡಿಲ್ಲ.ಸಿದ್ದರಾಮಯ್ಯಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
