ವಿಜಯಪುರ:ಎಂಇಎಸ್​ ನವರ ಪುಂಡಾಟಿಕೆಯನ್ನು ಹತ್ತಿಕ್ಕಬೇಕು ಅವರನ್ನು ಸುಮ್ಮನೆ ಬಿಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ವಿವಾದ ವಿಚಾರ ಮಹಾಜನ್ ವರದಿಯಲ್ಲಿ‌ ಯಾವ್ಯಾವ ಪ್ರದೇಶಗಳು ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಇತ್ಯರ್ಥವಾಗಿದೆ.ಈಗ ರಾಜಕಾರಣಕ್ಕಾಗಿ ಕ್ಯಾತೆ ತೆಗೆಯುತ್ತಾರೆ, ಇದನ್ನೆಲ್ಲ ಸರ್ಕಾರ ಹತ್ತಿಕ್ಕಬೇಕು ಎಂದು ಹೇಳಿದರು.
ಬೆಳಗಾವಿ, ನಿಪ್ಪಾಣಿ, ಕಾರವಾರ ಬೀದರ್ ಬಾಲ್ಕಿ ಸಹಿತ ‌ನೂತನ‌ ನಕ್ಷೆ ತಯಾರಿಸಿ ಉದ್ಧಟತನ ಮೆರೆದ ಎಂಇಎಸ್ ಕುರಿತು ಮಾತನಾಡಿ, ಎಂಇಎಸ್ ಪುಂಡರ ಮೇಲಿನ‌ ಮೊಕದ್ದಮೆಗಳನ್ನು ಸರ್ಕಾರ ವಾಪಸ್ ತೆಗೆದುಕೊಂಡ‌ ಬಳಿಕ ಈ ವರ್ತನೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರ ಎಂಇಎಸ್​​ನವರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪಕ್ಷಾಂತರ ಮಾಡಿ ತಪ್ಪು ಮಾಡಿದವು ಎಂದು ಸಚಿವ ಎಂ ಟಿ ಬಿ ನಾಗರಾಜ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಅವರಿಗೆ ಮಾಡಿದ ಪಾಪದ ಕೆಲಸ  ಈಗ ಅರಿವಾಗಿದೆ ಅಷ್ಟೇ ಎಂದರು.
ಎಂಇಎಸ್​ ಪುಂಡಾಟಿಕೆ ವಿರುದ್ಧ ಕಸಾಪ ಅಧ್ಯಕ್ಷ ಮಹೇಶ ಜೋಶಿ ಗುಡುಗು

ರಷ್ಯಾದ ಶಸ್ತ್ರಸಜ್ಜಿತ ದೋಣಿ ದ್ವಂಸ: ವಿಡಿಯೋ ಹಂಚಿಕೊಂಡ ಯೂಕ್ರೇನ್​​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 7 =
Remember me
