ಬೆಳಗಾವಿ:ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಈ ಹಿಂದೆ ಬೆಳಗಾವಿಗೆ ಬಂದಾಗ ಅವರನ್ನ ತನ್ನ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ ಸಿದ್ದವ್ವ ಮೇತ್ರಿ ಇಂದು ಮೃತಪಟ್ಟಿದ್ದಾರೆ.
ಸಿದ್ದವ್ವ ಮೇತ್ರಿ ಅವರಿಗೆ ಸುಮಾರು 95 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾರಣದಿಂದ ಇಂದು ಬೆಳಗ್ಗೆ ಸ್ವಗ್ರಾಮ ಕಂಗ್ರಾಳಿಗಲ್ಲಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿರಿಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ
1939ರಲ್ಲಿ ಬೆಳಗಾವಿಗೆ ಡಾ.ಬಿ.ಆರ್. ಅಂಬೇಡ್ಕರ್ ಆಗಮಿಸಿದ್ದರು. ಆ ವೇಳೆ ಸಿದ್ದವ್ವ ಹನ್ನೆರಡು-ಹದಿಮೂರು ವಯಸ್ಸಿನ ಬಾಲಕಿ. ಅಂದು ಅಂಬೇಡ್ಕರ್ ಅವರಿಗೆ ಊಟ ಬಡಿಸಿದ್ದ ಸಿದ್ದವ್ವ, ತನ್ನ ಮನೆಯಲ್ಲಿ ಸೇವೆ ಮಾಡಿದ್ದರು. ಅಂದು ಸಿದ್ದವ್ವ ಅವರ ಉಪಚಾರಕ್ಕೆ ಸಂತಸಗೊಂಡ ಅಂಬೇಡ್ಕರ್, ‘ನಿಮ್ಮಂತಹ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಮುಂಚೂಣಿಗೆ ಬರಬೇಕು’ ಎಂದು ಸಲಹೆ ನೀಡಿದ್ದರು.
ಅಂಬೇಡ್ಕರ್​ರ ಮಾತುಗಳಿಂದ ಪ್ರೇರೇಪಿತರಾದ ಸಿದ್ದವ್ವ, ತನ್ನ ಜೀವಿತಾವಧಿಯಲ್ಲಿ ಅಂಬೇಡ್ಕರ್​ರ ತತ್ವ-ಸಿದ್ಧಾಂತಗಳನ್ನು ಪ್ರಚಾರ ಮಾಡುವಲ್ಲಿ ನಿರತರಾಗಿದ್ದರು. ಸದಾಶಿವ ನಗರದ ಸ್ಮಶಾನದಲ್ಲಿ ಸಿದ್ದವ್ವ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಸುದ್ದಿಗಾಗಿ ಮೃತ ಪ್ರೇಯಸಿ ಮನೆಗೆ ಬೆಂಕಿ ಹಚ್ಚಿಸಿದ್ದ ವರದಿಗಾರ ಅರೆಸ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
