ಅಹಂಕಾರವು ಮೂಬಗೆ. ಸಾತ್ವಿಕಾಹಂಕಾರ, ರಾಜಸಿಕ ಅಹಂಕಾರ ಮತ್ತು ತಾಮಸಿಕ ಅಹಂಕಾರ. ಸಿದ್ದರಾಮನದು ರಾಜಸಿಕ ಅಹಂಕಾರ. ಇದು ಭೌತಿಕಮುಖಿಯಾದುದು; ತಾಮಸಿಕಕ್ಕಿಂತ ಮೇಲಿನದು! ರಾಜಸಿಕ ಅಹಂಕಾರವು ಸಾತ್ವಿಕ ಅಹಂಕಾರವಾಗಿ ಬದಲಾಗಬಹುದು. ಸಿದ್ಧರಾಮ ರಾಜಸಿಕ ಅಹಂಕಾರದಲ್ಲಿ ಇರುವುದರಿಂದ, ಕ್ರೋಧ ಇರುವುದು ಸಹಜ ಸತ್ಯ. ಸಿದ್ಧರಾಮನು ಲೋಕಪೂಜ್ಯನು ಮಾತ್ರವಲ್ಲ; ಅವನು ಸ್ವಾರ್ಥರಹಿತನು. ಆದರೆ, ಲೋಕಕೀರ್ತಿಯ ನಶೆಯಲ್ಲಿ ಅವನು ಬಿದ್ದಿದ್ದಾನೆ.
ಅಲ್ಲಮನ ಹಲವು ವಚನಗಳಲ್ಲಿ ಸಿದ್ಧರಾಮನ ಉಲ್ಲೇಖ ಹಲವು ಬಾರಿ ಬಂದಿವೆ. ಅವನು ಕೆರೆ ಕಟ್ಟಿಸುತ್ತಿರುವ ಬಗೆಗೂ ಗುಡಿ ನಿರ್ವಣದ ಬಗೆಗೂ ವಿವರಗಳಿವೆ. ಅಲ್ಲಮನ ಗಾಢಸಂಗಕ್ಕೆ ಒಳಗಾದವರಲ್ಲಿ ಸಿದ್ಧರಾಮನೂ ಒಬ್ಬನೆಂಬುದನ್ನು ಇದು ಶ್ರುತ ಪಡಿಸುತ್ತದೆ. ಅಲ್ಲಮನ ವಚನವೊಂದನ್ನು ನಾವು ಗಮನಿಸೋಣ:
ಕೆರೆಯ ಕಟ್ಟಿಸುವ ಒಡ್ಡನ ಪ್ರತಾಪವನೇನೆಂಬೆನಯ್ಯಾ?/ನೆಲನನಗೆದು ಜಲವ ತೆಗೆದೆಹೆನೆಂಬ ಬಳಲಿಕೆಯ ನೋಡಾ| ಒಂದು ಕಲ್ಲನು ಕಡಿದು/ಮತ್ತೊಂದು ಕಲ್ಲಿಗೆ ಭೋಗವ ಕೊಟ್ಟಹೆನೆಂಬ ಅಜ್ಞಾನವಿದೇನೋ| ಗುಹೇಶ್ವರ ಈ ಇರವಿನ ಪರಿಗೆ ಬೆರಗಾದೆನು (ಅಲ್ಲಮ.ವ.ಚಂ-960)-
ಈ ವಚನದಲ್ಲಿ ಅಲ್ಲಮನು ಸಿದ್ಧರಾಮನ ಭೌತಿಕಮುಖದ ಚಟುವಟಿಕೆಯನ್ನು ಸೂಚಿಸುತ್ತಿದ್ದಾನೆ. ಇದರ ಆಂತರ್ಯದಲ್ಲಿ ಅಭೌತಿಕಮುಖಿಯಾಗದ ಧ್ವನಿಯೂ ಉಂಟು! ಶಿವಾಂಶಿಕವನ್ನು ಮರೆತು ಭೌತಿಕ ಯಶಸ್ಸಿಗೆ ಗುರಿಯಾಗಿರುವನಲ್ಲ ಎಂಬ ಅಂತರಾರ್ಥವೂ ಇಲ್ಲುಂಟು. ಮತ್ತೊಂದು ವಚನದಲ್ಲಿ ‘‘ಒಳಗೆ ತೊಳೆದು ಜಲವ ತುಂಬಲರಿಯದೆ ಅರೆಮರುಳಾನೇನಾದ ಹೇಳಿರೆ?’ ಎಂಬ ಮಾತಿಗೆ ರಾಘವಾಂಕನ ‘ಸಿದ್ಧರಾಮ ಚಾರಿತ್ರ’ದಲ್ಲಿ ಇನ್ನಷ್ಟು ರಸವ್ಯಂಜಕವಾಗಿ ಮೂಡಿ ಬಂದಿದೆ.
ಸಿದ್ಧರಾಮನು ಕ್ರೋಧೋದೀಪ್ತನಾಗಿ ಶಿಷ್ಯರ ಜೊತೆ ಬಂದನಷ್ಟೆ. ಇದನ್ನು ನೋಡಿದ ಅಲ್ಲಮನು ‘ಸರ್ವಪರಿತ್ಯಾಗಿಯಾದ ಯೋಗಿಗೆ ಇಷ್ಟು ಕೋಪಾಟೋಪ, ರೋಷಾವೇಶಗಳೇಕೆ?’ ಎಂದು ನಗುತ್ತ ನುಡಿದ. ಆದರೆ, ರಾಜಸಾಹಂಕಾರದಿಂದ ತುಂಬಿರುವ ಸಿದ್ಧರಾಮನ ಕಿವಿಗೆ ಅಲ್ಲಮನ ಮಾತು ತಾಕಲಿಲ್ಲ. ಅವನ ಕಣ್ಣುಗಳು ಕೋಪಾಗ್ನಿಯಿಂದ ತುಂಬಿಕೊಂಡವು. ಅವನು ಒಮ್ಮೆಗೆ ಕಿಡಿಕಿಡಿಯಾದನು. ‘ಮಹೇಂದ್ರ ಜಾಲವನ್ನು ಕಲಿತು ಬಂದು ನಮ್ಮ ಗುಡ್ಡರನ್ನು ಕಾಡಿದಂತೆ ನನ್ನನ್ನು ಕಾಡಿಸಬೇಡ’ ಎಂದು ಹಲವು ಬಗೆಯಲ್ಲಿ ಹಾಸ್ಯ ಮಾಡಿದನು. ಆಗ ಅಲ್ಲಮನು
ಭಾಪುರೇ ಮಝುು ಪೂತು ನೀನಹು/ದೀ ಪರಿಯಲಿರಬೇಕು ಮನದಾ/ಳಾಪದಂಗವಣಗಳು ಮಿಗೆ ಮಾಯಾಪ್ರಪಂಚಿನಲಿ/ಕೋಪ ನಿಮ್ಮಯ ಸಾಂಪ್ರದಾಯಕ/ಳಾಪದಲಿ ಶಾಶ್ವತವಲಾ ನಿರ್ಲೇಪಗೀ ಪರಿಯುಚಿತವೇ ರಾಮಯ್ಯ ಕೇಳೆಂದ (ಪ್ರ.ಲೀಲೆ 13-27)
‘ಭಳಿರೇ, ಭಲಾ ಭೇಷ್ ಮಾಯಾ ಪ್ರಪಂಚದಲ್ಲಿ ಸಿಕ್ಕಿದ ಮನುಷ್ಯನ ಮನಸ್ಸಿನ ಆಲಾಪದ ಸಾಮರ್ಥ್ಯ ಹೀಗೆ ತಾನೆ ಇರಬೇಕು? ನಿಮ್ಮ ಸಂಪ್ರದಾಯದವರ ಗುಂಪಿನಲ್ಲಿ ಕೋಪವೆಂಬುದು ಶಾಶ್ವತ ತಾನೆ? ಪ್ರಪಂಚಕ್ಕೆ ಅಂಟದವನಿಗೆ ಈ ರೀತಿ ಯೋಗ್ಯವೆ? ರಾಮಯ್ಯ? ಎಂದು ಅಲ್ಲಮ ನುಡಿದನು.
ಆಗ ಸಿದ್ಧರಾಮನಿಗೆ ಮತ್ತಷ್ಟು ಕೆಣಕಿದಂತೆನಿಸಿತು. ಸಂಪ್ರದಾಯಗಳ ಎಣಿಕೆ ನಿನಗೇಕೆ?’ ಎಂದು ಹೇಳುತ್ತ ಯೋಗಮಾರ್ಗದಲ್ಲಿ ನನ್ನೊಡನೆ ಹೋರಾಡಬೇಡ ಎನ್ನುತ್ತ ತನ್ನ ಹಣೆಗಣ್ಣನ್ನು ತೆಗೆದು ಕೆದರಿದನು. ಅಲ್ಲಿಂದ ಸಿಡಿಲಿನಂಥ ಕಿಡಿಗಳು ಹೊರಚೆಲ್ಲಿದವು. ಅವು ಸುತ್ತಮುತ್ತಲ ಜೀವರಾಶಿಯನ್ನು ಸುಡತೊಡಗಿದವು. ಆಗ ಸುತ್ತ ಮುತ್ತ ಇದ್ದ ಜನ ‘ಸಿದ್ಧರಾಮ ಮೂಢತನ’ದಿಂದ ತನ್ನ ಯೋಗಮಾರ್ಗದ ಮಟ್ಟವನ್ನು ತಿಳಿಯದೆ ಪರಮಯೋಗಿಯ ಜೊತೆ ಜಗಳ ಮಾಡಿಕೊಂಡ. ‘ಬಡವನ ಕೋಪ ದವಡೆಗೆ ಮೂಲ ಎಂಬಂತಾಯಿತು. ಸಿದ್ಧರಾಮನ ಉರಿಗಣ್ಣು ಸೊನ್ನಲಿಗೆಯನ್ನೇ ಸುಡುತ್ತಿದೆ’ ಎಂದು ಬೊಬ್ಬೆಯಿಟ್ಟರು. ಅವನು ಬಿಟ್ಟ ಹಣೆಗಣ್ಣಿನ ಉರಿ ಅವನನ್ನೇ ತಾಕತೊಡಗಿದವು. ಆಗ ಅಲ್ಲಮನು ‘ಅಹಂಕರಿಸುವ ಬುದ್ಧಿಯನ್ನು ಬಿಡು’ ಎಂದು ಪ್ರೀತಿಯಿಂದ ಹೇಳಿದನು. ಆಗ ಸಿದ್ಧರಾಮನ ಮನಸ್ಸು ನಾಚಿತು. ಅವನ ಹಣೆಗಣ್ಣಿನ ರೆಪ್ಪೆಗಳು ಮುಚ್ಚಿಕೊಂಡವು. ಮನಸ್ಸಿನಲ್ಲಿ ಪರಿಪಕ್ವಭಾವನೆ ಸೂಚಿತವಾಯಿತು. ಅವನಲ್ಲಿ ಪಶ್ಚಾತ್ತಾಪ ಉಂಟಾಯಿತು. ಯೋಗದಲ್ಲಿ ಶುಚಿತ್ವ ಬೇರುಬಿಟ್ಟಿತು. ಅವನಿಗೆ ತನ್ನ ಬಗೆಗೆ ಬೇಸರ ಮೂಡಿತು. ಸಿದ್ಧರಾಮನು ಅಲ್ಲಮನ ಬಳಿಗೆ ಬಂದನು. ಸಿದ್ಧರಾಮನ ಮನಃಸ್ಥಿತಿಯನ್ನು ಚಾಮರಸ ‘ತ್ರಾಹಿ ಕರುಣಾಕರನೆ ಸರ್ವ ದ್ರೋಹವೆನ್ನದು ನಿನ್ನನರಿಯದೆ…’ ವಚನದಲ್ಲಿ ಹೀಗೆ ಹೇಳುತ್ತಾನೆ: ‘ಅಪ್ಪಾ ಕರುಣಾಕರನೆ ತಪ್ಪೆಲ್ಲಾ ನನ್ನದೇ. ನಿನ್ನನ್ನು ತಿಳಿಯದೆ ಮೋಹ ಮಾಯಾಡಂಬರಕೆ ನಾನು ಒಳಗಾದೆ. ನಾನು ನಿನಗೆ ಕೇಡನ್ನು ಬಯಸಿದೆ. ನನ್ನೆಲ್ಲಾ ಅವಗುಣಗಳನ್ನು ಮರೆತು ಕರುಣಿಸಬೇಕು’ ಎಂದು ಹೇಳುತ್ತ ಅಲ್ಲಮನ ಪಾದಗಳಿಗೆ ಬಂದು ಎರಗಿದನು.
ಲೋಕಮುಖಿಯಾಗಿದ್ದ ಸಿದ್ಧರಾಮನು ಇದೀಗ ಅಂತಮುಖಿಯಾದನು. ಅವನ ರಾಜಸಿಕ ಅಹಂಕಾರವು ಕರಗಿತು. ಅವನಲ್ಲಿ ಸಾತ್ವಿಕತೆಯ ಶಿವಾಂಶವು ಬೆರೆಯಿತು. ಅಲ್ಲಮಪ್ರಭುವಿಗೆ ಸಿದ್ಧರಾಮನು ಶರಣಾದನು!
ಹೃದಯದ ಬಗ್ಗೆ ಕಾಳಜಿ ಇದ್ದರೆ ಈ ಆರು ಆರೋಗ್ಯಕರ ತಿಂಡಿಗಳನ್ನು ಸೇವಿಸಿ

ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ: ಹೀಗ್ಯಾಕಂದ್ರು ನಟ ದರ್ಶನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + seven =
Remember me
