ಬೆಂಗಳೂರು:10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಸಂಬಂಧಿಯೊಬ್ಬರ ಪುತ್ರ ಕೊಲೆಯಾಗಿದ್ದು, ಈ ಕೇಸ್​ ಬಯಲಾಗುತ್ತಿದ್ದಂತೆ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಿ. ಧರ್ಮಸಿಂಗ್ ಅವರ ಸಂಬಂಧಿ ದೇವೇಂದರ್ ಸಿಂಗ್ ಅವರ ಪುತ್ರ ಸಿದ್ದಾರ್ಥ ದೇವೇಂದರ್ ಸಿಂಗ್(28) ಕೊಲೆಯಾದವರು. ಉದ್ಯಮಿ ಆಗಿದ್ದ ಸಿದ್ಧಾರ್ಥ್ ಅನ್ನು ಬೆಂಗಳೂರಿನ ಅಮೃತಹಳ್ಳಿ ಬಳಿ ಕಿಡ್ನ್ಯಾಫ್ ಮಾಡಿದ್ದ ದುಷ್ಕರ್ಮಿಗಳು ಆಂಧ್ರದ ನೆಲ್ಲೂರಿನಲ್ಲಿ ಕೊಲೆ ಮಾಡಿದ್ದರು. ಕೊಲೆ ಆರೋಪಿಗಳ ಪೈಕಿ ಒಬ್ಬ ಪೊಲೀಸ್​ಗೆ ಸಿಕ್ಕಿಬಿದ್ದಿದ್ದು, ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಶ್ಯಾಮ್​ ಎಂಬಾತ ತಿರುಪತಿಯಲ್ಲಿ ನೇಣುಬಿಗಿದುಕೊಂಡು ಸತ್ತಿದ್ದಾನೆ.ಇದನ್ನೂ ಓದಿರಿಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಜ.19ರ ಬೆಳಗಿನ ಜಾವ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಾಗೆ ಹೋಗುತ್ತಿರುವುದಾಗಿ ತಂದೆಗೆ ಸಿದ್ದಾರ್ಥ ದೇವೇಂದರ್ ಸಿಂಗ್ ಮೊಬೈಲ್​ನಿಂದ ವಾಟ್ಸ್​ಆ್ಯಪ್ ಮೆಸೇಜ್​ ಬಂದ ಕೂಡಲೇ ಸಿದ್ದಾರ್ಥ್​ ಮೊಬೈಲ್​ ಸ್ವಿಚ್ ಆಫ್ ಆಗಿತ್ತು. ಇತ್ತ ಸಿದ್ದಾರ್ಥ್​ ಅಮೆರಿಕಾಗೂ ಹೋಗಿಲ್ಲ, ಅತ್ತ ಮೊಬೈಲ್​ ಫೋನ್​ ಕೂಡ ಕನೆಕ್ಟ್​ ಆಗಿಲ್ಲ. ಆತಂಕಗೊಂಡ ತಂದೆ, ಮಗನಿಗಾಗಿ ಹುಡಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಹಾಗಾಗಿ ದೇವೇಂದರ್ ಸಿಂಗ್ ಅವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್​ ದಾಖಲಿಸಿದ್ದರು.
ಈ ನಡುವೆ ನೆಲ್ಲೂರು ಕಾಡಿನಲ್ಲಿ ಅಪರಿಚ ಶವ ಪತ್ತೆಯಾಗಿದ್ದು, ನೆಲ್ಲೂರು ಪೊಲೀಸರ ಮಾಹಿತಿ ಆಧರಿಸಿ ಅಮೃತಹಳ್ಳಿ ಪೊಲೀಸರ ತಂಡ ಆಂಧ್ರದ ನೆಲ್ಲೂರಿನ ಅರಣ್ಯ ಪ್ರದೇಶಕ್ಕೆ ಜ.31ರಂದು ಭೇಟಿ ನೀಡಿತ್ತು. ಸಿದ್ದಾರ್ಥ್ ದೇವೇಂದರ್ ಸಿಂಗ್​ನನ್ನು ಕಿಡಿಗೇಡಿಗಳು ಕೊಲೆ ಮಾಡಿ ಆಂಧ್ರದಲ್ಲಿ ಬಿಸಾಡಿ ಹೋಗಿದ್ದರು. ಈ ಸಂಬಂಧ ವಿನೋದ್‌ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಶ್ಯಾಮ್‌ಗಾಗಿ ಪೊಲೀಸರು ಹುಡುಕಾಟ ನಡೆದಿದ್ದರು. ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಆಂಧ್ರಪ್ರದೇಶದ ತಿರುಪತಿಯಲ್ಲಿ ಆರೋಪಿ ಶ್ಯಾಮ್​ ನೇಣಿಗೆ ಶರಣಾಗಿದ್ದಾನೆ.
ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
