ಬೆಂಗಳೂರು:ತಮಿಳು ಚಿತ್ರರಂಗದ ಸ್ಟಾರ್​ ನಟ ಸಿದ್ದಾರ್ಥ್ ಅಭಿನಯದ ‘ಚಿಕ್ಕು’ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರಚಾರ ಮಾಡಲು ಆಗಮಿಸಿದ್ದ ನಟನಿಗೆ ಕರವೇ ಸ್ವಾಭಿಮಾನಿ ಸೇನೆ ತರಾಟೆಗೆ ತೆಗೆದುಕೊಂಡ ದೃಶ್ಯ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿ ಹೊಸ ಇತಿಹಾಸ ಬರೆದ ರೈತರು
‘ಚಿಕ್ಕು’ ಚಿತ್ರದ ಕನ್ನಡ ಆವೃತ್ತಿಯನ್ನು ಪ್ರಚಾರ ಮಾಡುತ್ತಿದ್ದ ಸಿದ್ದಾರ್ಥ್​ಗೆ ಕರವೇ ಸ್ವಾಭಿಮಾನಿ ಸೇನೆ ನೇರವಾಗಿ ಪ್ರಶ್ನಿಸಿದ್ದು, ರಾಜ್ಯದಲ್ಲಿ ಕಾವೇರಿ ಕಿಚ್ಚು ಹತ್ತಿಕೊಂಡಿರುವ ಸಮಯದಲ್ಲಿ ಸಿನಿಮಾ ಪ್ರಚಾರ ಅಗತ್ಯವಿದೆಯಾ? ಎಂದು ಕೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಎಸ್​ಆರ್​ವಿ ಚಿತ್ರಮಂದಿರದಲ್ಲಿ ಸಿದ್ದಾರ್ಥ್ ಭಾಗಿಯಾಗಿದ್ದ ಸುದ್ದಿಗೋಷ್ಠಿಗೆ ಮಧ್ಯೆ ಪ್ರವೇಶಿಸಿದ ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನಾ ತಂಡವು ಭಾರೀ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಕಾವೇರಿ ಗಲಾಟೆ ನಡೆಯುತ್ತಿದೆ. ಈಗ ಇದು ಬೇಕಿತ್ತಾ? ಇದು ಸಂಘರ್ಷಕ್ಕೆ ದಾರಿ ಮಾಡಿಕೊಡುವುದಿಲ್ಲವೇ? ಎಂದು ಹೇಳಿದ್ದೇ ತಡ ನಟ ಸಿದ್ದಾರ್ಥ್ ಸ್ಥಳದಿಂದ ಹೊರನಡೆದಿದ್ದಾರೆ.
ಒಂದೇ ದಿನ ರಿಲೀಸ್​ ಆಗಲಿವೆ ಸ್ಟಾರ್​ ನಟರ ಚಿತ್ರಗಳು; ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
