ಬೆಂಗಳೂರು:ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದ ಪರಮಪೂಜ್ಯ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ನುಡಿ ನಮನ ಮಹೋತ್ಸವದಲ್ಲಿ ಹರಿದ್ವಾರದಿಂದ ಯೋಗ ಗುರು ಸ್ವಾಮೀ ರಾಮದೇವ ಜೀ ಮಹಾರಾಜರು ವಿಡಿಯೋ ಕಾನ್ಫರೆನ್ಸ್ ಮೂಲಕ ನುಡಿ ನಮನ – ಗುರು ನಮನ ಸಮರ್ಪಿಸಿದ್ದಾರೆ.

ಕರ್ನಾಟಕದ ಸಂಪೂರ್ಣ ಜನತೆಗೆ ವಂದಿಸುತ್ತಾ ಮಾತನಾಡಿದ ಅವರು, “ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ನುಡಿ ನಮನ ಕಾರ್ಯಕ್ರಮಕ್ಕೆ ನಾನು ಇಂದು ಆಗಮಿಸಬೇಕಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬರಲಿಕ್ಕಾಗಲಿಲ್ಲ. ಆದರೆ ಪೂಜ್ಯರನ್ನು ಹಲವಾರು ಬಾರಿ ದರ್ಶನ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ. ಅವರು ನಡೆದಾಡುವ ದೇವರು, ಶತಮಾನದ ಶ್ರೇಷ್ಠ ಸಂತರು, ಅವರೇ ನಿಜವಾದ ಸಂತರು, ನುಡಿದಂತೆ ನಡೆದವರು. ಅವರು ಯಾವುದೇ ಜಾತಿ , ಧರ್ಮ, ಕಾಲ, ದೇಶಗಳಿಗೆ ಮೀಸಲಾಗಿರದೇ ವಿಶ್ವ ಮಾನವರಾಗಿದ್ದರು. ನಾವೆಲ್ಲಾ ಭಗವಂತನ ಮಕ್ಕಳು, ನಮ್ಮಲ್ಲಿ ಯಾವುದೇ ದ್ವೇಷ, ತಾರತಮ್ಯ ಬೇಡ ಎಂದವರು.

ಭಗವಂತನ ಅವತಾರ ಅವರಿಗೆ ಮತ್ತೊಮ್ಮೆ ಶಿರಬಾಗಿ ಸಾಷ್ಟಾಂಗ ನಮಸ್ಕರಿಸುತ್ತೇನೆ,” ಎಂದು ಪೂಜ್ಯರಿಗೆ ನುಡಿ ನಮನ – ಗುರು ನಮನ ಸಲ್ಲಿಸಿದರು, ಎಂದು ಪತಂಜಲಿ ಯೋಗ ಪೀಠ, ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿಗಳಾದ ಯೋಗ ಗುರು ಭವರಲಾಲ್ ಆರ್ಯ ಅವರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
