ಪಾಲಬಾವಿ (ಬೆಳಗಾವಿ):ಧರ್ಮ-ಜಾತಿ ಆಧಾರಿತ ನಿಗಮ ಘೊಷಣೆ ಅಪಾಯಕಾರಿ ನಡೆಯಾಗಿದ್ದು, ರಾಜ್ಯ ಸರ್ಕಾರ ಮೈಮೇಲೆ ಅಪಾಯ ಎಳೆದುಕೊಂಡಿದೆ. ಸರ್ಕಾರ ಕೂಡಲೇ ತಜ್ಞರು ಹಾಗೂ ಮಠಾಧೀಶರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಯಬಾಗ ತಾಲೂಕಿನ ಹಂದಿಗುಂದದ ಸಿದ್ಧೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾರಾಷ್ಟ್ರದಲ್ಲಿ ಬಹು ಸಂಖ್ಯಾತ ಮರಾಠಿಗರಿಗೆ ಶೇ.16 ಮೀಸಲಾತಿ ಸೌಲಭ್ಯ ನೀಡಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಲಿಂಗಾಯತ ಸಮುದಾಯದವರಿಗೆ ಶೇ.16 ಮೀಸಲಾತಿ ನೀಡಬೇಕು. ಅಂದಾಗ ಮಾತ್ರ ನ್ಯಾಯ ಒದಗಿಸಿದಂತಾಗುತ್ತದೆ ಎಂದಿದ್ದಾರೆ.
ಯಾವುದೇ ಪ್ರಾಧಿಕಾರ, ನಿಗಮಗಳು ಸೂಕ್ತವಾದ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗಲಾರದು. ನಮ್ಮೆಲ್ಲರ ಒತ್ತಾಯ ಇರುವುದು ಲಿಂಗಾಯತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ನೀಡುವುದು. ಅದರ ಹೊರತಾಗಿ ನಿಗಮ ಮಂಡಳಿ ಸ್ಥಾಪನೆಯಲ್ಲ. ಸರ್ಕಾರದ ನಿರ್ಧಾರ ಸ್ವಾಗತಿಸಿರುವ ಕೆಲ ಸಂಘಟನೆ ಹಾಗೂ ಮಠಾಧೀಶರ ಕ್ರಮವೂ ಸರಿಯಾದುದ್ದಲ್ಲ. ಸದ್ಯ ಎಲ್ಲ ಸಮುದಾಯದ ಜನರು ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸುತ್ತಾರೆ. ಎಲ್ಲರಿಗೂ ಪ್ರಾಧಿಕಾರ ಮಾಡಲು ಸಾಧ್ಯವೆ? ಈ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳು ಹಾಗೂ ಗದುಗಿನ ತೋಂಟದಾರ್ಯ ಶ್ರೀಗಳ ನಿಲುವು ಸೂಕ್ತವಾಗಿದೆ. ನಾವು ಸಹ ಶ್ರೀಗಳ ನಿರ್ಧಾರ ಅನುಮೋದಿ ಸುತ್ತೇವೆ ಎಂದು ಶಿವಾನಂದ ಶ್ರೀಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 9 =
Remember me
