ಬೆಂಗಳೂರು:ತಂದೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಖ್ಯಾತ ಚಿತ್ರ ಕಲಾವಿದ ಓಗೆಪ್ಪ ಬಿರಾದಾರ, ತಾಯಿ ಸಂಗಮ್ಮ. ಈ ದಂಪತಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಹಿರಿಯ ಮಗ ಸಿದ್ಧಗೊಂಡಪ್ಪನೇ ಈ ಸಿದ್ಧೇಶ್ವರ ಶ್ರೀಗಳು.
ಶ್ರೀಗಳು ಬಿಜ್ಜರಗಿ ಗ್ರಾಮದಲ್ಲಿ 4ನೇ ತರಗತಿವರೆಗೆ ಕಲಿತರು. ‘ಬೆಳೆವ ಸಿರಿ ಮೊಳಕೆ’ಯಲ್ಲಿ ಎಂಬಂತೆ ಶ್ರೀಗಳಿಗೆ ಬಾಲ್ಯದಿಂದಲೂ ಚುರುಕುಬುದ್ಧಿ. 1955-56ರಲ್ಲಿ ಮುಲ್ಕಿ (7ನೇ ವರ್ಗ) ಪರೀಕ್ಷೆ ಬರೆಯಲು ವಿಜಯಪುರದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿಗೆ ಬಂದಾಗ, ಶಾಲೆ ಸಮೀಪವೇ ಇದ್ದ ಶಿವಾನುಭವ ಮಂಟಪದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಹೇಳುತ್ತಿದ್ದ ಅಧ್ಯಾತ್ಮ ಪ್ರವಚನ ಅವರ ಮನಸ್ಸನ್ನು ಸೆಳೆಯಿತು. ಹೀಗೆ ಅನನರ ಸಾಂಗತ್ಯ ಬೆಳೆದಿತ್ತು.
1957ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಚಡಚಣದಲ್ಲಿ ಪ್ರವಚನ ಆರಂಭಿಸಿದಾಗ ಅಲ್ಲಿಗೆ ಬಾಲಕ ಸಿದ್ಧಗೊಂಡಪ್ಪನನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ಆತನನ್ನು ಪ್ರೌಢಶಾಲೆಗೆ ಸೇರಿಸಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟರು. ಚಡಚಣದಲ್ಲಿ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಸಿದ್ದಗೊಂಡಪ್ಪನನ್ನು ಅಧಿಕೃತ ಶಿಷ್ಯನನ್ನಾಗಿ ಸ್ವೀಕರಿಸಿ ‘ಸಿದ್ಧೇಶ್ವರ’ ಎಂದು ನಾಮಕರಣ ಮಾಡಿದರು.
ನಂತರ ಸಿದ್ಧೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಉನ್ನತ ಶ್ರೇಣಿಯಲ್ಲಿ ಎಂ.ಎ., ಸ್ನಾತಕೋತ್ತರ ಪದವಿ ಪಡೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 12 =
Remember me
