ಬೆಂಗಳೂರು: ಪರಿಶಿಷ್ಟ ಪಂಗಡದ 2020ರ ತಿದ್ದುಪಡಿ ಕಾಯ್ದೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ 2 ಮಹತ್ವದ ಬದಲಾವಣೆಗಳ ಮೂಲಕ ಎಸ್ಟಿ ಸವಲತ್ತನ್ನು ವಿಸ್ತರಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಈ ಕುರಿತು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 38ರಲ್ಲಿ ನಾಯ್ಕಡ, ನಾಯಕ (‘Naikda, ‘Nayaka’) ಎಂಬ ಪದಗಳ ಬದಲಾಗಿ ಪರಿವಾರ, ತಳವಾರ ಒಳಗೊಂಡು ನಾಯ್ಕಡ ಮತ್ತು ನಾಯಕ (‘Naikda, ‘Nayaka’ (including Parivara and Talwara’ ) ಎಂದು ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ಎಸ್ಟಿ ಪಟ್ಟಿಯಲ್ಲಿನ ನಾಯ್ಕಡ, ನಾಯಕ, ಚೋಲಿವಾಲ ನಾಯಕ, ಕಪಾಡಿಯ ನಾಯಕ, ಮೋಟ ನಾಯಕ, ನಾನಾ ನಾಯಕ, ನಾಯ್ಕ, ನಾಯಕ, ಬೇಡ, ಬೇಡರ್ ಮತ್ತು ವಾಲ್ಮೀಕಿ ಜತೆಗೆ ಅದೇ ಜಾತಿಯ ಪರಿವಾರ ಮತ್ತು ತಳವಾರ ಜಾತಿಗಳಿಗೆ ಎಸ್ಟಿ ಸೌಲಭ್ಯ ವಿಸ್ತರಿಸಬಹುದಾಗಿದೆ.
ಇದನ್ನೂ ಓದಿ:ಕೇಂದ್ರ ಸಚಿವ ಜಾವಡೇಕರ್ ಜತೆಗೆ ಬುಧವಾರ ವೇದಿಕೆ ಹಂಚಿಕೊಂಡಿದ್ದ ಪಿಐಬಿ ಡಿಜಿಗೆ ಕೋವಿಡ್-19 ಸೋಂಕು ದೃಢ
ಹಾಗೆಯೇ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 50ರಲ್ಲಿದ್ದ ಉತ್ತರ ಕನ್ನಡ ಜಿಲ್ಲೆ (In Utttara Kannada District ) ಯಲ್ಲಿ ಬದಲಾಗಿ ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆ (In Belagavi, Dharawad and Utttara Kannada Districts ) ಗಳಲ್ಲಿ ಎಂದು ತಿದ್ದುಪಡಿ ಮಾಡಲಾಗಿದ್ದು, ಈ ಜಿಲ್ಲೆಗಳ ‘ಸಿದ್ದಿ’ ಸಮುದಾಯಕ್ಕೆ ಎಸ್ಟಿ ಸೌಲಭ್ಯ ವಿಸ್ತರಿಸಲಾಗಿದೆ. ಜಾತಿ ಪ್ರಮಾಣಪತ್ರವನ್ನು ನೀಡುವ ಸಕ್ಷಮ ಪ್ರಾಧಿಕಾರಿಗಳು ಈ ಅಂಶಗಳನ್ನು ಖಚಿತಪಡಿಸಿಕೊಂಡು ಅದರಂತೆ ಕ್ರಮವಹಿಸಬೇಕು ಎಂದು ಇಲಾಖೆ ಸೂಚಿಸಿದೆ.
PHOTOS|ಎರಡು ತಿಂಗಳ ಬಳಿಕ ಬಾಗಿಲು ತೆರೆದ ಧಾರ್ಮಿಕ ಶ್ರದ್ಧಾಕೇಂದ್ರಗಳ ದೃಶ್ಯಾವಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 13 =
Remember me
